Ind vs WI: ಕ್ರಿಕೆಟ್ ಲೆಜೆಂಡ್ಸ್‌ ಸಚಿನ್‌, ಗಂಗೂಲಿ, ಧೋನಿ ದಾಖಲೆ ಮುರಿಯಲು ರೆಡಿಯಾದ ರೋಹಿತ್ ಶರ್ಮಾ..!

By Naveen Kodase  |  First Published Jul 27, 2023, 4:35 PM IST

* ಇಂದಿನಿಂದ ಭಾರತ-ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಆರಂಭ
* ಅಪರೂಪದ ದಾಖಲೆ ಬರೆಯಲು ಸಜ್ಜಾದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
* ಏಕದಿನ ಕ್ರಿಕೆಟ್‌ನಲ್ಲಿ 10000 ರನ್ ಕ್ಲಬ್ ಸೇರಲು ಹಿಟ್‌ಮ್ಯಾನ್‌ಗೆ ಬೇಕಿದೆ ಕೇವಲ 175 ರನ್


ಬಾರ್ಬಡೋಸ್(ಜು.27): ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಭಾರತ ಕ್ರಿಕೆಟ್‌ ಕಂಡ ಯಶಸ್ವಿ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಹಲವಾರು ಬಾರಿ ಏಕಾಂಗಿಯಾಗಿ ಭಾರತ ಕ್ರಿಕೆಟ್ ತಂಡಕ್ಕೆ ಅವಿಸ್ಮರಣೀಯ ಗೆಲುವುಗಳನ್ನು ತಂದಿತ್ತಿದ್ದಾರೆ. ಆರಂಭಿಕನಾಗಿ ಬಡ್ತಿ ಪಡೆದ ಬಳಿಕ ಮೇಲಂತೂ ರೋಹಿತ್ ಶರ್ಮಾ, ಹಲವಾರು ದಾಖಲೆಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ವೆಸ್ಟ್‌ ಇಂಡೀಸ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕ್ರಿಕೆಟ್ ದಂತಕಥೆಗಳ ಹೆಸರಿನಲ್ಲಿರುವ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.

ಹೌದು, ಇದೀಗ ರೋಹಿತ್ ಶರ್ಮಾ(Rohit Sharma), ಸಾರ್ವಕಾಲಿಕ ದಿಗ್ಗಜ ಬ್ಯಾಟರ್‌ಗಳೆನಿಸಿಕೊಂಡಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್(Sachin Tendulkar), ಸೌರವ್ ಗಂಗೂಲಿ(Sourav Ganguly), ರಿಕಿ ಪಾಂಟಿಂಗ್(Ricky Ponting), ಎಂ ಎಸ್ ಧೋನಿ(MS Dhoni) ಅವರಂತಹ ದಿಗ್ಗಜ ಬ್ಯಾಟರ್‌ಗಳ ಹೆಸರಿನಲ್ಲಿರುವ ದಾಖಲೆಯನ್ನು ಅಳಿಸಿಹಾಕುಲು ಎದುರು ನೋಡುತ್ತಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್ (ICC ODI World Cup) ಟೂರ್ನಿಗೆ ಈ ಸರಣಿಯನ್ನು ತಯಾರಿಗೆ ಬಳಸಿಕೊಳ್ಳಲು ಟೀಂ ಇಂಡಿಯಾ(Team India) ಸಜ್ಜಾಗಿದ್ದು, ಇದೇ ವೇಳೆ ರೋಹಿತ್ ಶರ್ಮಾ, ಅಪರೂಪದ ದಾಖಲೆ ಕಣ್ಣಿಟ್ಟಿದ್ದಾರೆ.

Tap to resize

Latest Videos

ವಿರಾಟ್ ಕೊಹ್ಲಿ ಇಯರ್​ಬಡ್ಸ್​​ ಮೇಲೆ ಎಲ್ಲರ ಕಣ್ಣು..! ಏನಿದರ ವಿಶೇಷತೆ? ಬೆಲೆ ಎಷ್ಟು?

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಏಕದಿನ ಕ್ರಿಕೆಟ್ (ODI Cricket) ಮಾದರಿಯಲ್ಲಿ ಸದ್ಯ 9825 ರನ್‌ ಬಾರಿಸಿದ್ದಾರೆ. ಹಿಟ್‌ ಮ್ಯಾನ್‌ ಇನ್ನು ಕೇವಲ 175 ರನ್ ಬಾರಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ 10,000+ ರನ್ ಬಾರಿಸಿದ ಬ್ಯಾಟರ್‌ಗಳ ಕ್ಲಬ್ ಸೇರಲಿದ್ದಾರೆ. ಒಂದು ವೇಳೆ ವೆಸ್ಟ್ ಇಂಡೀಸ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ 175 ರನ್ ಬಾರಿಸಿದ್ದೇ ಆದರೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ವೇಗವಾಗಿ 10,000+ ರನ್ ಬಾರಿಸಿದ ಎರಡನೇ ಬ್ಯಾಟರ್ ಎನ್ನುವ ಅಪರೂಪದ ದಾಖಲೆಗೆ ಪಾತ್ರರಾಗಲಿದ್ದಾರೆ. ಸದ್ಯ ರೋಹಿತ್ ಶರ್ಮಾ 236 ಏಕದಿನ ಇನಿಂಗ್ಸ್‌ಗಳನ್ನಾಡಿ 9,825 ರನ್ ಬಾರಿಸಿದ್ದಾರೆ. ಇನ್ನು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli) ಕೇವಲ 205 ಇನಿಂಗ್ಸ್‌ಗಳನ್ನಾಡಿ 10,000 ರನ್ ಪೂರೈಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Ind vs WI: ಇಂದಿನಿಂದ ಭಾರತ vs ವೆಸ್ಟ್ ಇಂಡೀಸ್ ಏಕದಿನ ಸರಣಿ..!

ಹಿಟ್ ಮ್ಯಾನ್‌ ರೋಹಿತ್ ಶರ್ಮಾ, ವಿಂಡೀಸ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 175 ರನ್ ಬಾರಿಸಿದರೆ, ಎರಡನೇ ಅತಿವೇಗದ 10,000 ರನ್ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಇದರ ಜತೆಗೆ ಅತಿವೇಗವಾಗಿ 10,000 ಬಾರಿಸಿದ ಜಗತ್ತಿನ ಮೊದಲ ನಾಲ್ವರು ಭಾರತೀಯ ಬ್ಯಾಟರ್‌ಗಳು ಎನಿಸಿಕೊಳ್ಳಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 10000 ರನ್‌ ಬಾರಿಸಿದ ಟಾಪ್ 6 ಬ್ಯಾಟರ್‌ಗಳಿವರು:

1. ವಿರಾಟ್ ಕೊಹ್ಲಿ: 205 ಇನಿಂಗ್ಸ್‌
2. ಸಚಿನ್ ತೆಂಡುಲ್ಕರ್: 259 ಇನಿಂಗ್ಸ್‌
3. ಸೌರವ್ ಗಂಗೂಲಿ: 263 ಇನಿಂಗ್ಸ್‌
4. ರಿಕಿ ಪಾಂಟಿಂಗ್: 266 ಇನಿಂಗ್ಸ್‌
5. ಜಾಕ್ ಕಾಲಿಸ್: 272 ಇನಿಂಗ್ಸ್‌
6. ಎಂ ಎಸ್ ಧೋನಿ: 273 ಇನಿಂಗ್ಸ್‌

ವಿಂಡೀಸ್‌ ವಿರುದ್ಧ ಸತತ 13ನೇ ಸರಣಿ ಗೆಲ್ಲುವ ಗುರಿ!

ವಿಂಡೀಸ್‌ ವಿರುದ್ಧ ಭಾರತ ಸತತ 13ನೇ ಏಕದಿನ ಸರಣಿ ಗೆಲ್ಲುವ ನಿರೀಕ್ಷೆಯಲ್ಲಿದೆ. ವಿಂಡೀಸ್‌ ವಿರುದ್ಧ ಭಾರತ ಕೊನೆಯ ಬಾರಿಗೆ ಏಕದಿನ ಸರಣಿ ಸೋತಿದ್ದು 2006ರಲ್ಲಿ. ಇನ್ನು ವಿಂಡೀಸ್‌ ವಿರುದ್ಧ ಭಾರತ ಸತತ 8 ಏಕದಿನ ಪಂದ್ಯಗಳನ್ನು ಗೆದ್ದಿದೆ. 2019ರ ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ಕೊನೆಯ ಬಾರಿಗೆ ಸೋತಿತ್ತು.

click me!