ವಿಂಡೀಸ್ ವಿರುದ್ಧ ಭರ್ಜರಿ ಶತಕ, ಸಚಿನ್ ತೆಂಡೂಲ್ಕರ್ ದಾಖಲೆ ಬ್ರೇಕ್ ಮಾಡಿದ ವಿರಾಟ್ ಕೊಹ್ಲಿ

Published : Sep 27, 2026, 09:25 PM ISTUpdated : Sep 27, 2026, 09:32 PM IST
Virat kohli batting pic

ಸಾರಾಂಶ

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. 55ನೇ ಏಕದಿನ ಶತಕ ಜೊತೆ ಸಚಿನ್ ದಾಖಲೆಯನ್ನು ಪುಡಿ ಮಾಡಿದ್ದಾರೆ. ಕೊಹ್ಲಿ ಬರೆದ ದಾಖಲೆ ಏನು? ಇಲ್ಲಿದೆ ಡಿಟೇಲ್ಸ್

ತಿರುವನಂತಪುರಂ (ಸೆ.27) ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಶುಬಮನ್ ಗಿಲ್ ಸೆಂಚುರಿ ಬೆನ್ನಲ್ಲೇ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 55ನೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಗೆಲುವಿನ ಸನಿಹದಲ್ಲಿದೆ. ಅಬ್ಬರಿಸಿದ ವಿರಾಟ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆ ಪುಡಿ ಮಾಡಿದ್ದಾರೆ.

ವಿಂಡೀಸ್ ವಿರುದ್ದ 10 ಶತಕ ದಾಖಲೆ

ಒಂದು ತಂಡದ ವಿರುದ್ಧ ಗರಿಷ್ಠ ಶತಕ ಸಿಡಿಸಿ ಭಾರತೀಯ ಕ್ರಿಕೆಟಿಗರ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಧಾನದಲ್ಲಿದ್ದಾರೆ. ಶ್ರೀಲಂಕಾ ವಿರುದ್ದ ಕೊಹ್ಲಿ 10 ಶತಕ ಸಿಡಿಸಿದ್ದರೆ, ಇದೀಗ ವೆಸ್ಟ್ ಇಂಡೀಸ್ ವಿರುದ್ಧವೂ ಕೊಹ್ಲಿ 10 ಶತಕ ಸಾಧನೆ ಮಾಡಿದ್ದಾರೆ.

ಒಂದು ತಂಡದ ವಿರುದ್ಧ ಗರಿಷ್ಠ ಶತಕ ಸಾಧಕರು

  • ವಿರಾಟ್ ಕೊಹ್ಲಿ vs ಶ್ರೀಲಂಕಾ: 10 ಶತಕ
  • ವಿರಾಚ್ ಕೊಹ್ಲಿ vs ವೆಸ್ಟ್ ಇಂಡೀಸ್: 10 ಶತಕ
  • ಸಚಿನ್ ತೆಂಡೂಲ್ಕರ್ vs ಆಸ್ಟ್ರೇಲಿಯಾ: 9 ಶತಕ
  • ರೋಹಿತ್ ಶರ್ಮಾ vs ಆಸ್ಟ್ರೇಲಿಯಾ: 9 ಶತಕ
  • ವಿರಾಟ್ ಕೊಹ್ಲಿ vs ಆಸ್ಟ್ರೇಲಿಯಾ: 8 ಶತಕ
  • ಸಚಿನ್ ತೆಂಡೂಲ್ಕರ್ vs ಶ್ರೀಲಂಕಾ: 8 ಶತಕ

ಅತೀ ವೇಗದಲ್ಲಿ 15 ಸಾವಿರ ಏಕದಿನ ರನ್

ವಿರಾಟ್ ಕೊಹ್ಲಿ ಅತೀ ವೇಗದಲ್ಲಿ 15 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದಾರೆ. ವಿರಾಟ್ ಕೊಹ್ಲಿ 303 ಇನ್ನಿಂಗ್ಸ್ ಮೂಲಕ 15,000 ರನ್ ಪೂರೈಸಿದ್ದಾರೆ. ಸಚಿನ್ ತೆಂಡೂಲ್ಕರ್ 377 ಇನ್ನಿಂಗ್ಸ್ ಮೂಲಕ 15 ಸಾವಿರ ರನ್ ದಾಖಲಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ದ ವಿರಾಟ್ ಕೊಹ್ಲಿ 74 ಎಸೆತದಲ್ಲಿ ಸೆಂಚುರಿ ಪೂರೈಸಿದ್ದಾರೆ. ಈ ಮೂಲಕ ಕೊಹ್ಲಿ ಅತೀ ವೇಗದಲ್ಲಿ ಸಿಡಿಸಿದ ನಾಲ್ಕೇ ಸೆಂಚುರಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿರಾಟ್ ಕೊಹ್ಲಿ ಫಾಸ್ಟೆಸ್ಟ್ ಸೆಂಚುರಿ

  • 52 ಎಸೆತ vs ಆಸ್ಟ್ರೇಲಿಯಾ, 2013
  • 61 ಎಸೆತ vs ಆಸ್ಟ್ರೇಲಿಯಾ, 2013
  • 74 ಎಸೆತ vs ವೆಸ್ಟ್ ಇಂಡೀಸ್, 2026
  • 76 ಎಸೆತ vs ಶ್ರೀಲಂಕಾ, 2012
  • 76 ಎಸೆತ vs ಶ್ರೀಲಂಕಾ, 2017
  • 80 ಎಸೆತ vs ಗುವ್ಹಾಟಿ, 2023

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಗರಿಷ್ಠ ಸೆಂಚುರಿ

  • ಸಚಿನ್ ತೆಂಡೂಲ್ಕರ್, 60 ಶತಕ (538 ಇನ್ನಿಂಗ್ಸ್)
  • ವಿರಾಟ್ ಕೊಹ್ಲಿ, 60 ಶತಕ (338 ಇನ್ನಿಂಗ್ಸ್)
  • ಗ್ರಹಂ ಗೂಟ್, 44 ಶತಕ, (601 ಇನ್ನಿಂಗ್ಸ್)
  • ಗ್ರೇಮ್ ಹಿಕ್, 40 ಶತಕ, (630 ಇನ್ನಿಂಗ್ಸ್
  • ಕುಮಾರ್ ಸಂಗಕ್ಕಾರ, 39 ಶತಕ (, (501 ಇನ್ನಿಂಗ್ಸ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

India vs WI; ಇತಿಹಾಸ ಪುಟ ಸೇರಿದ ಕೊಹ್ಲಿ ಜಮಾನಾ: ಶತಕ ಬಾರಿಸಿ ವಿಶ್ವದಾಖಲೆ ಬರೆದ ಶುಭ್‌ಮನ್ ಗಿಲ್‌!
ಚಿನ್ನಸ್ವಾಮಿಯಲ್ಲಿ ನಿಮ್ಮ ಬೀಟ್ಸ್ ಕೇಳಿಸುತ್ತಲೆ ಇರುತ್ತೆ, ಡ್ರಮ್ಮರ್ ದೇವಗೆ ಆರ್‌ಸಿಬಿ ಭಾವುಕ ವಿದಾಯ