ಚಿನ್ನಸ್ವಾಮಿಯಲ್ಲಿ ನಿಮ್ಮ ಬೀಟ್ಸ್ ಕೇಳಿಸುತ್ತಲೆ ಇರುತ್ತೆ, ಡ್ರಮ್ಮರ್ ದೇವಗೆ ಆರ್‌ಸಿಬಿ ಭಾವುಕ ವಿದಾಯ

Published : Sep 27, 2026, 08:38 PM IST
RCB Remembers Late Drummer Deva

ಸಾರಾಂಶ

ಖ್ಯಾತ ಡ್ರಮ್ಮರ್, ಕನ್ನಡ ಶಿವಮಣಿ ಎಂದೇ ಖ್ಯಾತಿಗೊಂಡಿರುವ ಡ್ರಮ್ಮರ್ ದೇವ ಅಗಲಿಗೆ ಆರ್‌ಸಿಬಿ ಭಾವುಕ ವಿದಾಯ ಹೇಳಿದೆ. ಚಿನ್ನಸ್ವಾಮಿಯಲ್ಲಿ ದೇವ ಬೀಟ್ಸ್ , ತಾಳ ಸದಾ ಕೇಳಿಸುತ್ತೆ. ದೇವ ಆರ್‌ಸಿಬಿ ಅಭಿಮಾನಿಗಳ ಹೃದಯದಲ್ಲಿ ಸದಾ ಇರುತ್ತೀರಿ ಎಂದು ಭಾವುಕ ಸಂದೇಶ ನೀಡಿದೆ.

ಬೆಂಗಳೂರು (ಸೆ.27) ಕನ್ನಡ ಸಿನಿಮಾ, ಸಾಂಸ್ಕೃತಿ ಕಾರ್ಯಕ್ರಮ, ಐಪಿಎಲ್ ಸೇರಿದಂತೆ ಕ್ರಿಕೆಟ್ ಸರಣಿಗಳಲ್ಲಿ ಡ್ರಮ್ಮರ್ ದೇವ ಬೀಟ್ಸ್ ಇದ್ದೇ ಇರುತ್ತೆ. ಸಂಗೀತ ಲೋಕದಲ್ಲಿ ಡ್ರಮ್ಮರ್ ದೇವ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಕಳೆದೆರಡು ವರ್ಷದಿಂದ ಅನಾರೋಗ್ಯದಿಂದ ಬಳಲಿದ ದೇವ್ ನಿಧನ ಕನ್ನಡ ಸಿನಿಮಾ ಹಾಗೂ ಸಂಗೀತ ಲೋಕಕ್ಕೆ ಅಘಾತ ನೀಡಿದೆ. ಗಣ್ಯರು, ಸಿನಿಮಾ ದಿಗ್ಗಜರು ಕಂಬನಿ ಮಿಡಿದಿದ್ದಾರೆ, ಸಂತಾಪ ಸೂಚಿಸಿದ್ದಾರೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಡ್ರಮ್ಮರ್ ದೇವಾ ನಿಧನಕ್ಕೆ ಕಂಬನಿ ಮಿಡಿದಿದೆ. ಇದೇ ವೇಳೆ ಅಭಿಮಾನಿಗಳ ಪರವಾಗಿ ಭಾವುಕ ವಿದಾಯ ಹೇಳಿದೆ.

ಆರ್‌ಸಿಬಿ ಕುಟುಂಬದ ಅಗಲಿದ ಸದಸ್ಯನಿಗೆ ಶ್ರದ್ಧಾಂಜಲಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಂದ್ಯದ ವೇಳೆ ಡ್ರಮ್ಮರ್ ದೇವ್ ಬೀಟ್ಸ್ ಅಭಿಮಾನಿಗಳನ್ನು ಕುಣಿಸುತ್ತದೆ. ತಂಡದ ಹೋರಾಟ, ದೇವ್ ಅವರ ಬೀಟ್ಸ್ ಆರ್‌ಸಿಬಿ ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ಇರುತ್ತೆ. ಮೊದಲ ಐಪಿಎಲ್ ಪಂದ್ಯದಿಂದ ಹಿಡಿದು ಅನೇಕ ಪಂದ್ಯಗಳಲ್ಲಿ ದೇವ್ ಬೀಟ್ಸ್ ಅಭಿಮಾನಿಗಳ ಮನತಣಿಸಿದೆ. ಈ ಕುರಿತು ಆರ್‌ಸಿಬಿ ಎಕ್ಸ್ ಮೂಲಕ ಭಾವುಕ ಸಂದೇಶ ಪೋಸ್ಟ್ ಮಾಡಿದೆ.

ಚಿನ್ನಸ್ವಾಮಿಯಲ್ಲಿ ದೇವ್ ಬೀಟ್ಸ್ ಸದಾ ಕೇಳಿಸುತ್ತೆ

ದೇವ್ ಅವರ ಬೀಟ್ಸ್ ಆರ್‌ಸಿಬಿ ಪಂದ್ಯದ ಭಾಗವಾಗಿತ್ತು. ಮೊದಲ ಐಪಿಎಲ್ ಪಂದ್ಯದಿಂದ ಹಿಡಿದು ಪ್ರತಿ ಆರ್‌ಸಿಬಿ ಪಂದ್ಯದಲ್ಲಿ ದೇವ್ ಬೀಟ್ಸ್ ಅಭಿಮಾನಿಗಳ ಮನದಲ್ಲಿ ಅಚ್ಚೊತ್ತಿದೆ. ಆರೋಗ್ಯ ಸಮಸ್ಯೆಯಿಂದ ದೇವ್ ತಮ್ಮ 64ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.ಕನ್ನಡ ಶಿವಮಣಿ ಎಂದೇ ಗುರುತಿಸಿಕೊಂಡಿದ್ದ ದೇವ್ ಅಗಲಿಕೆ ನೋವುಂಟು ಮಾಡಿದೆ. ದೇವ್ ಅವರ ಬೀಟ್ಸ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸದಾ ಕೇಳಿಸುತ್ತದೆ. ಅವರ ಪ್ರೀತಿ,ಬೀಟ್ಸ್ ಅಭಿಮಾನಿನಗಳ ಮನದಲ್ಲಿ ಸದಾ ಇರುತ್ತದೆ. ವರ್ಷಗಳ ಕಾಲ ಮನರಂಜನೆ ನೀಡಿದ ದೇವ್ ಅವರಿಗೆ ಧನ್ಯವಾದಗಳು, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆರ್‌ಸಿಬಿ ಪೋಸ್ಟ್ ಮಾಡಿದೆ.

ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲಿದ ದೇವ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಗ್ಯಾಂಗ್ರೀನ್ ಸಮಸ್ಯೆಯಿಂದ ಬಳಲಿದ ದೇವ್ ಅಗಲಿಕೆಗೆ ಸಂಗೀತ ಪ್ರಿಯರು ಕಂಬನಿ ಮಡಿದಿದ್ದಾರೆ. ಸಾಧುಕೋಕಿಲ, ಗುರುಕಿರಣ್ ಸೇರಿದಂತೆ ಹಲವು ಸಂಗೀತ ನಿರ್ದೇಶಕರ ಜೊತೆ ದೇವ್ ಕೆಲಸ ಮಾಡಿದ್ದಾರೆ. 5 ಈಡಿಯೆಟ್ಸ್, ಪ್ರೀತಿ ನೀ ಹಿಂಗ್ಯಾಕೆ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಲೆವೆಡೆ ಸಂಗೀತ ರಸ ಸಂಜೆ, ಡ್ರಮ್ಮರ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cricket; ಸಚಿನ್ ದಾಖಲೆ ಉಡೀಸ್‌! ಹೊಸ ದಾಖಲೆ ಬರೆದ ವಿರಾಟ್; ಹೊಸ ಮೈಲುಗಲ್ಲಿಗೆ ಸಾಕ್ಷಿಯಾದ ಕೊಹ್ಲಿ!
Ind Vs Wi: ವಿಂಡೀಸ್ ಪಡೆಗೆ 'ಗಿಲ್' ಗಂಡಾಂತರ; ಅಜೇಯ ಅರ್ಧಶತಕದೊಂದಿಗೆ ಹೊಸ ದಾಖಲೆ ಬರೆದ ಪ್ರಿನ್ಸ್!