ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ ಇದೀಗ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. 2 ಪಂದ್ಯಗಳ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾದಲ್ಲಿ ಆತಂಕ ಎದುರಾಗಿದೆ. ತುರ್ತು ಕಾರಣದಿಂದ ವಿರಾಟ್ ಕೊಹ್ಲಿ ದಿಢೀರ್ ತವರಿಗೆ ಮರಳಿದ್ದಾರೆ.
ಮುಂಬೈ(ಡಿ.22) ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಟಿ20 ಸರಣಿ ಸಮಬಲಗೊಳಿಸಿದರೆ, ಏಕದಿನ ಸರಣಿ ಗೆದ್ದುಕೊಂಡಿದೆ. ಡಿಸೆಂಬರ್ 26 ರಿಂದ 2 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳುತ್ತಿದೆ. ಈಗಾಗಲೇ ಟೆಸ್ಟ್ ಕ್ರಿಕೆಟಿಗರು ಸೌತ್ ಆಫ್ರಿಕಾದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಆದರೆ ತುರ್ತು ಅಗತ್ಯತೆ ಕಾರಣ ವಿರಾಟ್ ಕೊಹ್ಲಿ ದಿಢೀರ್ ಭಾರತಕ್ಕೆ ಮರಳಿದ್ದಾರೆ. ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಬಳಿ ಅನುಮತಿ ಪಡೆದಿರುವ ಕೊಹ್ಲಿ ತವರಿಗೆ ಮರಳಿದ್ದಾರೆ. ಕೊಹ್ಲಿಯ ತುರ್ತು ಕಾರಣ ಬಹಿರಂಗಗೊಂಡಿಲ್ಲ. ಆದರೆ ಟೀಂ ಇಂಡಿಯಾದ ಆತಂಕ ಹೆಚ್ಚಾಗಿದೆ.
ಸೌತ್ ಆಫ್ರಿಕಾ ನೆಲದಲ್ಲಿ ಪ್ರತಿ ಭಾರಿ ಉತ್ತಮ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಅನುಪಸ್ಥಿತಿ ಟೀಂ ಇಂಡಿಯಾ ಆತಂಕ ಹೆಚ್ಚಿಸಿದೆ. ಕೊಹ್ಲಿ ತವರಿಗೆ ಮರಳಿದ ಕಾರಣ ಸದ್ಯ ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ 3ದಿನಗಳ ಅಭ್ಯಾಸ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಮೂಲಗಳ ಪ್ರಕಾರ ಡಿಸೆಂಬರ್ 26 ರಿಂದ ಆರಂಭಗೊಳ್ಳಲಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಹಾಜರಾಗಲಿದ್ದಾರೆ. ಡಿಸೆಂಬರ್ 26ಕ್ಕೂ ಮೊದಲು ಕೊಹ್ಲಿ ಸೌತ್ ಆಫ್ರಿಕಾಗೆ ತೆರಳಲಿದ್ದಾರೆ. ಎರಡೂ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಲಭ್ಯರಾಗಲಿದ್ದಾರೆ ಎಂದು ಟೀಂ ಮ್ಯಾನೇಜ್ಮೆಂಟ್ ಹೇಳಿದೆ.
ಐಪಿಎಲ್ ಹರಾಜಿನಲ್ಲಿ RCB ಕೂಡಿಕೊಂಡ ಬೆನ್ನಲ್ಲೇ 4 ಪಂದ್ಯಗಳ ನಿಷೇಧಕ್ಕೆ ಒಳಗಾದ ಸ್ಟಾರ್ ಆಲ್ರೌಂಡರ್..!
ಕೊಹ್ಲಿ ಕುಟುಂಬದ ತುರ್ತು ಅಗತ್ಯತೆ ಕಾರಣದಿಂದ ತವರಿಗೆ ಮರಳಿದ್ದಾರೆ. ಕೊಹ್ಲಿ ಶೀಘ್ರದಲ್ಲೇ ಸೌತ್ ಆಫ್ರಿಕಾಗೆ ಮರಳಲಿದ್ದಾರೆ ಎಂದು ಮ್ಯಾನೇಜ್ಮೆಂಟ್ ಹೇಳಿದೆ. ಐಸಿಸಿ ವಿಶ್ವಕಪ್ ಟೂರ್ನಿ ಬಳಿಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಪಡೆದಿದ್ದರು. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಟಿ20 ಹಾಗೂ ಏಕದಿನ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದರು. ಕೊಹ್ಲಿ ಜೊತೆಗೆ ನಾಯಕ ರೋಹಿತ್ ಶರ್ಮಾ ಕೂಡ ವಿಶ್ರಾಂತಿ ಪಡೆದಿದ್ದರು.
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 11 ಪಂದ್ಯಗಳಿಂದ 765 ರನ್ ಸಿಡಿಸಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಭಾರತ ಮುಗ್ಗರಿಸಿತ್ತು. ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿದ ಟೀಂ ಇಂಡಿಯಾ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಫೈನಲ್ ಬಳಿಕ ಕುಟುಂಬದ ಜೊತೆ ಕಾಲ ಕಳೆದ ವಿರಾಟ್ ಕೊಹ್ಲಿ ಸೌತ್ ಆಫ್ರಿಕಾಗೆ ತೆರಳಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು.
IPL Auction 2023: ಚೆನ್ನೈ ಸೂಪರ್ ಕಿಂಗ್ಸ್ ತೆಕ್ಕೆಗೆ ಸಿಕ್ಸರ್ ಸರದಾರ ರಿಜ್ವಿ!