ನಿವೃತ್ತಿಗೂ ಮೊದಲು ಕೊಹ್ಲಿ ಏಕೈಕ ಗುರಿ ಒಂದೇ, ಈ ಐದು ದಾಖಲೆಗಳ ಮುರಿಯಲು ಬಿಗ್ ಟಾರ್ಗೆಟ್

Published : Nov 06, 2026, 09:21 AM IST
Virat Kohli Singing India's National Anthem

ಸಾರಾಂಶ

ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2027ರ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ. ನಿವೃತ್ತಿಗೂ ಮುನ್ನ ಅವರು ದ್ವಿಶತಕ, 18,000 ರನ್ ಮತ್ತು 100 ಶತಕಗಳಂತಹ ಐದು ಪ್ರಮುಖ ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, 2027ರ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಕೊಹ್ಲಿ ದರ್ಬಾರ್ ಅಂತ್ಯಗೊಳ್ಳಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳುವ ಮೊದಲು ಈ ಐದು ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾರೆ. ಈಗಾಗಲೇ ಒಂದು ಒಂದ್ಯವನ್ನು ಆಡಿರುವ ಕೊಹ್ಲಿಗೆ ಇನ್ನೂ ನಾಲ್ಕು ಮ್ಯಾಚ್‌ಗಳು ಬಾಕಿ ಉಳಿದಿವೆ. ಈ ಪಂದ್ಯಗಳಲ್ಲಿಯೇ ಕೊಹ್ಲಿ ದಾಖಲೆಗಳನ್ನ ಮುರಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಕೊಹ್ಲಿ ಕಣ್ಣಿಟ್ಟಿರುವ ಐದು ದಾಖಲೆಗಳ ವಿವರ ಇಲ್ಲಿದೆ.

200 ರನ್

ಏಕದಿನ ಕ್ರಿಕೆಟ್‌ನಲ್ಲಿ ಒಂದೇ ಒಂದು ದ್ವಿಶತಕವನ್ನು ಕೊಹ್ಲಿ ಬಾರಿಸಿಲ್ಲ. ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 183 ರನ್‌ಗಳು. 2012ರಲ್ಲಿ ಪಾಕಿಸ್ತಾನ ವಿರುದ್ಧ ಈ ಇನ್ನಿಂಗ್ಸ್ ಆಡಿದರು. ಟೆಸ್ಟ್‌ನಲ್ಲಿ ಏಳು ದ್ವಿಶತಕಗಳನ್ನು ಗಳಿಸಿದ್ದಾರೆ. ಅಭಿಮಾನಿಗಳು ಅವರು ಏಕದಿನ ಪಂದ್ಯಗಳಲ್ಲಿಯೂ 200 ರನ್ ಬಾರಿಸಬೇಕೆಂಬ ಒತ್ತಾಯ ಇದೆ. 2027ರ ವಿಶ್ವಕಪ್ ಅಂತ್ಯದ ವೇಳೆಗೆ ಕೊಹ್ಲಿ ಆ ಗುರಿಯನ್ನ ರೀಚ್ ಮಾಡಲು ಸಂಕಲ್ಪ ಮಾಡಿದ್ದಾರೆ ಎನ್ನಲಾಗಿದೆ.

ODI ಬ್ಯಾಟಿಂಗ್ ಸರಾಸರಿ

ಕೊಹ್ಲಿ ಏಕದಿನ ವೃತ್ತಿಜೀವನದಲ್ಲಿ ಅದ್ಭುತ ಸ್ಥಿರತೆಯನ್ನ ಹೊಂದಿದ್ದಾರೆ. ಇದುವರೆಗೆ 318 ಪಂದ್ಯಗಳಲ್ಲಿ 15,183 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 58.84. ಅವರು ಈಗಾಗಲೇ 55 ಶತಕಗಳು ಮತ್ತು 80 ಅರ್ಧಶತಕ ಸೇರಿದೆ. ಈ ಸರಾಸರಿಯನ್ನು 60 ದಾಟಿಸಲು ಅವರು ಉಳಿದ ಪಂದ್ಯಗಳಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಾಗುತ್ತದೆ. ಇದರ ಮೇಲೆಯೂ ಗುರಿ ಇಟ್ಟಿದ್ದಾರೆ.

18,000 ರನ್‌ಗಳ ಮೈಲಿಗಲ್ಲು

ಕೊಹ್ಲಿ ಮುಂದೆ ಇರುವ ಇನ್ನೊದು ಗುರಿ ಅಂದರೆ 18,000 ರನ್‌ಗಳ ಮೈಲಿಗಲ್ಲು ತಲುಪುವುದು. ಪ್ರಸ್ತುತ 15,183 ರನ್‌ಗಳನ್ನು ಹೊಂದಿದ್ದಾರೆ. ಅಂದರೆ 18,000 ರನ್‌ಗಳನ್ನು ಪೂರ್ಣಗೊಳಿಸಲು ಅವರಿಗೆ ಇನ್ನೂ 2,817 ರನ್‌ಗಳ ಅಗತ್ಯವಿದೆ. ಸಚಿನ್ ತೆಂಡೂಲ್ಕರ್ ಏಕದಿನ ಪಂದ್ಯಗಳಲ್ಲಿ 18,426 ರನ್‌ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ 18,000 ರನ್‌ಗಳನ್ನು ತಲುಪಿದರೂ, ಸಚಿನ್ ದಾಖಲೆಯನ್ನು ಮೀರಿಸಲು ಅವರಿಗೆ ಇನ್ನೂ 426 ರನ್‌ಗಳು ಬೇಕಾಗುತ್ತವೆ. 2027ರ ವಿಶ್ವಕಪ್ ವರೆಗೆ ಅಥವಾ ಅದಕ್ಕೂ ಮೀರಿದ ಏಕದಿನ ಪಂದ್ಯಗಳನ್ನು ಆಡುವುದನ್ನು ಮುಂದುವರಿಸಿದರೆ ಮಾತ್ರ ಈ ಗುರಿ ಸಾಧಿಸಲು ಸಾಧ್ಯವಾಗುತ್ತದೆ.

ಎರಡನೇ ಬಾರಿಗೆ ಏಕದಿನ ವಿಶ್ವಕಪ್

ಕೊಹ್ಲಿ 2011 ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಈಗ ಅವರು 2027ರ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಮತ್ತೊಮ್ಮೆ ಟ್ರೋಫಿಯನ್ನು ಎತ್ತಿ ಹಿಡಿಯುವ ಕನಸು ಕಂಡಿದ್ದಾರೆ.

100 ಅಂತರರಾಷ್ಟ್ರೀಯ ಶತಕಗಳ ದಾಖಲೆ

100 ಶತಕಗಳ ಮೇಲೆ ಕೊಹ್ಲಿ ಕಣ್ಣಿಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ 100 ಅಂತರರಾಷ್ಟ್ರೀಯ ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಮೂರು ಸ್ವರೂಪಗಳಲ್ಲಿ 86 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್‌ಗಳಲ್ಲಿ 30, ಏಕದಿನಗಳಲ್ಲಿ 55 ಮತ್ತು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಶತಕ ಸೇರಿವೆ. ಇನ್ನು ಕೊಹ್ಲಿಗೆ 100 ಶತಕ ಬಾರಿಸಲು ಇನ್ನೂ 14 ಶತಕಗಳ ಅಗತ್ಯ ಇದೆ. ಪ್ರಸ್ತುತ ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿರುವುದರಿಂದ ಈ ಗುರಿ ತಲುಪುವುದು ತುಂಬಾ ಕಷ್ಟಕರ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

₹40 ಕೋಟಿ ಕೊಟ್ಟರೆ ಮಾತ್ರ ತಂಡದಲ್ಲಿ ಉಳಿಯುತ್ತೇನೆ! ಐಪಿಎಲ್ ಫ್ರಾಂಚೈಸಿಗೆ ಸ್ಟಾರ್ ಆಟಗಾರನ ಖಡಕ್ ಕಂಡೀಷನ್; ಯಾರು ಆ ಕ್ರಿಕೆಟಿಗ?
ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ, ಟೆಸ್ಟ್ ಆಡಲೂ ಫಿಟ್ ಎಂದ ಮಾಜಿ ಕೋಚ್ ರವಿಶಾಸ್ತ್ರಿ