ಬರೋಬ್ಬರಿ 103 ವರ್ಷಗಳ ಹಳೆಯ ದಾಖಲೆ ಮುರಿದ ಚಿನ್ಮಯ್ ಸುತಾರ್! ರಣಜಿ ಟ್ರೋಫಿಯಲ್ಲಿ ಸಂಚಲನ ಸೃಷ್ಟಿದ ಈತ ಯಾರು?

Published : Nov 06, 2026, 07:34 AM IST
Chinmay Sutar

ಸಾರಾಂಶ

ಮಿಜೋರಾಂ ತಂಡದ ಆಟಗಾರ ಚಿನ್ಮಯ್ ಸುತಾರ್ ರಣಜಿ ಟ್ರೋಫಿಯಲ್ಲಿ ಕೇವಲ 5 ಇನ್ನಿಂಗ್ಸ್‌ಗಳಲ್ಲಿ 834 ರನ್ ಗಳಿಸಿ 103 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ನಾಗಾಲ್ಯಾಂಡ್ ವಿರುದ್ಧ ಅಜೇಯ 400 ರನ್ ಸಿಡಿಸಿರುವ ಇವರು, ಟೀಂ ಇಂಡಿಯಾಗೆ ಆಯ್ಕೆಯಾಗುವ ನಿರೀಕ್ಷೆ ಮೂಡಿಸಿದ್ದಾರೆ.

ನವದೆಹಲಿ: ಕ್ರಿಕೆಟ್ ಅಂದ್ರೆ ಕೇವಲ ದೊಡ್ಡ ತಂಡ, ದೊಡ್ಡ ಆಟಗಾರರ ಆಟ ಅಲ್ಲ. ಕೆಲವೊಮ್ಮೆ ಸಣ್ಣ ರಾಜ್ಯದಿಂದ ಬಂದ ಒಬ್ಬ ಆಟಗಾರ ಇಡೀ ಪ್ರಪಂಚವೇ ತಿರುಗಿ ನೋಡೋ ಹಾಗೆ ಆಡ್ತಾರೆ. ಈಗ ಅಂಥದ್ದೇ ಒಂದು ಮ್ಯಾಜಿಕ್ ಮಾಡಿದ್ದು ಮಿಜೋರಾಂ ತಂಡದ ಆಟಗಾರ ಚಿನ್ಮಯ್ ಸುತಾರ್.

ಯಾರು ಈ ಚಿನ್ಮಯ್ ಸುತಾರ್?

29 ವರ್ಷದ ಚಿನ್ಮಯ್.. 2026-27ರ ರಣಜಿ ಟ್ರೋಫಿ ಪ್ಲೇಟ್ ಗ್ರೂಪ್‌ನಲ್ಲಿ ಆಡ್ತಾ ಇದ್ದಾರೆ. ಆಡಿದ್ದು ಕೇವಲ 4 ಪಂದ್ಯ. ಬ್ಯಾಟ್ ಮಾಡಿದ್ದು 5 ಇನ್ನಿಂಗ್ಸ್ ಮಾತ್ರ. ಆದ್ರೆ ಮಾಡಿದ ರನ್ ಎಷ್ಟು ಗೊತ್ತಾ? ಬರೋಬ್ಬರಿ 834 ರನ್! ಸರಾಸರಿ ಬರೋಬ್ಬರಿ 208.50.ಇದರಲ್ಲಿ 2 ಶತಕಗಳಿವೆ. ಅದರಲ್ಲಿ ಒಂದು ಅಜೇಯ 400 ರನ್‌ನ ಬೃಹತ್ ಇನ್ನಿಂಗ್ಸ್ ಕೂಡ ಇದೆ.

ನಾಗಾಲ್ಯಾಂಡ್ ವಿರುದ್ಧ ಆಡಿದ ಆ ಪಂದ್ಯದಲ್ಲಿ ಚಿನ್ಮಯ್ 400 ರನ್ ಹೊಡೆದು ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದ.ಈಗ ಚಿನ್ಮಯ್ ಮಾಡಿದ್ದು ಸಾಮಾನ್ಯ ದಾಖಲೆ ಅಲ್ಲ. ಬರೋಬ್ಬರಿ 103 ವರ್ಷ ಹಳೆಯ ವಿಶ್ವ ದಾಖಲೆಯನ್ನು ಮುರಿದಿದ್ದಾನೆ. ಈ ಹಿಂದೆ ಆಸ್ಟ್ರೇಲಿಯಾದ ದಿಗ್ಗಜ ಬಿಲ್ ಪೋನ್ಸ್‌ಫೋರ್ಡ್ 5 ಇನ್ನಿಂಗ್ಸ್‌ನಲ್ಲಿ 724 ರನ್ ಹೊಡೆದು ದಾಖಲೆ ಮಾಡಿದ್ದರು.

ಅದು 1921 ರಿಂದ 1923ರ ನಡುವೆ. ಆ ದಾಖಲೆಯನ್ನು ಯಾರೂ ಮುರಿಯಲು ಆಗಿರಲಿಲ್ಲ. ಈಗ 2026ರಲ್ಲಿ ನಮ್ಮ ಚಿನ್ಮಯ್ ಅದನ್ನು ಮುರಿದು ಹೊಸ ಇತಿಹಾಸ ಬರೆದಿದ್ದಾನೆ.ಇನ್ನು ಮುಂದಿನ ಇನ್ನಿಂಗ್ಸ್‌ನಲ್ಲಿ ಚಿನ್ಮಯ್ ಶೂನ್ಯಕ್ಕೆ ಔಟ್ ಆದರೂ ಕೂಡ ಮತ್ತೊಂದು ದಾಖಲೆ ಅವನ ಹೆಸರಿಗೆ ಬರುತ್ತೆ.

6 ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಹೊಡೆದ ದಾಖಲೆ ಈಗ ಅಫ್ಘಾನಿಸ್ತಾನದ ಬಶೀರ್ ಶಾ ಹೆಸರಲ್ಲಿದೆ. ಅವರು 831 ರನ್ ಹೊಡೆದಿದ್ದಾರೆ. ಚಿನ್ಮಯ್ ಈಗಾಗಲೇ 834 ರನ್ ಹೊಡೆದಿದ್ದಾರೆ. ಆ ದಾಖಲೆ ಕೂಡ ಈಗಾಗಲೇ ಅವನ ಕೈಯಲ್ಲಿದೆ.ಚಿನ್ಮಯ್‌ನ ಜರ್ನಿ ಶುರುವಾಗಿದ್ದು ಅಕ್ಟೋಬರ್ 11ರಂದು ಮಣಿಪುರ ವಿರುದ್ಧ. ಮೊದಲ ಪಂದ್ಯದಲ್ಲೇ 35 ಮತ್ತೆ 99 ರನ್ ಹೊಡೆದ. ಎರಡನೇ ಪಂದ್ಯದಲ್ಲಿ 400 ರನ್. ಮೂರನೇ ಪಂದ್ಯದಲ್ಲಿ ಮೇಘಾಲಯ ವಿರುದ್ಧ 125 ರನ್. ನಾಲ್ಕನೇ ಪಂದ್ಯದಲ್ಲಿ ಅರುಣಾಚಲ ವಿರುದ್ಧ 175 ರನ್. ಪ್ರತಿ ಪಂದ್ಯದಲ್ಲೂ ಶತಕ, ದ್ವಿಶತಕದ ಮಳೆ.ಈಗ ಎಲ್ಲರ ಬಾಯಲ್ಲಿ ಒಂದೇ ಮಾತು. ಚಿನ್ಮಯ್‌ಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುತ್ತಾ? ಈ ಫಾರ್ಮ್ ಮುಂದುವರಿದರೆ ಖಂಡಿತ ಅವನಿಗೆ ದೊಡ್ಡ ಅವಕಾಶ ಸಿಗೋದು ಗ್ಯಾರಂಟಿ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

8 ಮೇಡನ್ ಓವರ್, 4 ವಿಕೆಟ್: ರಣಜಿ ಟ್ರೋಫಿ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಮತ್ತೆ ಮಾರಕ ದಾಳಿ! ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಯಾವಾಗ?
Sara Tendulkar: ಅರ್ಜುನ್ ಮದುವೆ ಫಿಕ್ಸ್, ಸಾರಾ ಸರದಿ ಯಾವಾಗ? ಮ್ಯಾರೇಜ್‌ ಬಗ್ಗೆ ಸಚಿನ್ ಮಹತ್ವದ ಸುಳಿವು!