
ನವದೆಹಲಿ(ಜು.08): ಭಾರತ- ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ಆರಂಭಕ್ಕೆ ಇನ್ನು 4 ದಿನ ಮಾತ್ರ ಬಾಕಿಯಿದೆ. WTC ಫೈನಲ್ ನಂತರ ಮತ್ತೆ ಫೀಲ್ಡ್ಗಿಳಿಯಲು ರೋಹಿತ್ ಶರ್ಮಾ ಪಡೆ ರೆಡಿಯಾಗಿದೆ. ಈಗಾಗ್ಲೇ ಕೆರಿಬಿಯನ್ ನಾಡಿಗೆ ತಲುಪಿರೋ ಆಟಗಾರರು ಭರ್ಜರಿ ಪ್ರಾಕ್ಟೀಸ್ ಆರಂಭಿಸಿದ್ದಾರೆ. ರನ್ಮಷಿನ್ ವಿರಾಟ್ ಕೊಹ್ಲಿ ಕೂಡ ನೆಟ್ಸ್ನಲ್ಲಿ ಬೆವರು ಹರಿಸುತ್ತಿದ್ದಾರೆ.
ಅಶ್ವಿನ್ ಬೌಲಿಂಗ್ನಲ್ಲಿ ರಿವರ್ಸ್ ಸ್ವೀಪ್ ಪ್ರಾಕ್ಟೀಸ್..!
ವಿರಾಟ್ ಕೊಹ್ಲಿ ಪಕ್ಕಾ ಕ್ಲಾಸ್ ಪ್ಲೇಯರ್. ಕ್ರಿಕೆಟಿಂಗ್ ಶಾಟ್ಸ್ ಮೂಲಕವೇ ಕೊಹ್ಲಿ ಅಬ್ಬರಿಸ್ತಾರೆ. ವಿರಾಟ್ ಕೊಹ್ಲಿ ಬೇರೆ ಬ್ಯಾಟ್ಸ್ಮನ್ಗಳಂತೆ ಡಿಫ್ರೆಂಟ್ ಶಾಟ್ಗಳನ್ನ ಆಡಲ್ಲ. ಆದ್ರೆ, ವಿಂಡೀಸ್ ನಾಡಲ್ಲಿ ಅಬ್ಬರಿಸಲು ಕೊಹ್ಲಿ ಡಿಫ್ರೆಂಟ್ ಶಾಟ್ಗಳನ್ನ ಆಡ್ತಿದ್ದಾರೆ. ಸ್ಪಿನ್ನರ್ ಆರ್.ಅಶ್ವಿನ್ ಬೌಲಿಂಗ್ನಲ್ಲಿ ರಿವರ್ಸ್ ಸ್ವೀಪ್ ಆಡೋದನ್ನ ಪ್ರಾಕ್ಟೀಸ್ ಮಾಡ್ತಿದ್ದಾರೆ.
ಯುವ ಬ್ಯಾಟ್ಸ್ಮನ್ಗಳಿಗೆ ಕೊಹ್ಲಿ ಬ್ಯಾಟಿಂಗ್ ಕೋಚ್..!
ಯೆಸ್, ತಂಡದ ಪ್ರಾಕ್ಟೀಸ್ ವೇಳೆ ಕೊಹ್ಲಿ ಬ್ಯಾಟಿಂಗ್ ಕೋಚ್ ಆಗಿದ್ರು. ಯುವ ಬ್ಯಾಟ್ಸ್ಮನ್ಗಳಿಗೆ ಬ್ಯಾಟಿಂಗ್ ಟಿಪ್ಸ್ ನೀಡಿದ್ರು. ಎಡಗೈ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ಗೆ ಕೆಲ ಅಮೂಲ್ಯ ಸಲಹೆನಗಳನ್ನ ನೀಡಿದ್ರು. ಇನ್ನು ಐಪಿಎಲ್ ಟೂರ್ನಿಯಲ್ಲೂ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಪಂದ್ಯ ಮುಗಿಯುತ್ತಿದ್ದಂತೆಯೇ ಯುವ ಆಟಗಾರರಿಗೆ ಅಮೂಲ್ಯ ಬ್ಯಾಟಿಂಗ್ ಸಲಹೆ ನೀಡುತ್ತಿದ್ದರು.
ಸಂಬಳ ಹೆಚ್ಚಿಸಿಕೊಂಡ ಅಜಿತ್ ಅಗರ್ಕರ್ ಮುಂದೆ ಸಾಲು ಸಾಲು ಸವಾಲು..!
ವಿಂಡೀಸ್ ನೆಲದಲ್ಲಿ ಹಳೆ ಖದರ್ಗೆ ಮರಳ್ತಾರಾ ಕೊಹ್ಲಿ..?
ಟೆಸ್ಟ್ ಕ್ರಿಕೆಟ್ನಲ್ಲಿ ಕೊಹ್ಲಿ, ತಮ್ಮ ಹಿಂದಿನ ಖದರ್ ಕಳೆದುಕೊಂಡಿದ್ದಾರೆ. ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಮಕಾಡೆ ಮಲಗಿದ್ರು. ಆದ್ರೆ, ಕೊನೆಯ ಟೆಸ್ಟ್ನಲ್ಲಿ ಶತಕ ಸಿಡಿಸಿದ್ರು. ಇದರಿಂದ WTC ಫೈನಲ್ನಲ್ಲಿ ಕೊಹ್ಲಿ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಡಲಾಗಿತ್ತು. ಆದ್ರೆ, ತಮ್ಮ ಮೇಲಿನ ನಿರೀಕ್ಷೆಗಳನ್ನ ತಲುಪುವಲ್ಲಿ ಕೊಹ್ಲಿ ಫೇಲ್ ಆದ್ರು. ಆದ್ರೆ, ವೆಸ್ಟ್ ಇಂಡೀಸ್ನಲ್ಲಿ ಸ್ಟ್ರಾಂಗ್ ಕಮ್ಬ್ಯಾಕ್ ಮಾಡೋ ಪಣ ತೊಟ್ಟಿದ್ದಾರೆ.
ವಿರಾಟ್ ಕೊಹ್ಲಿ ಈವರೆಗೆ ವೆಸ್ಟ್ ಇಂಡೀಸ್ನಲ್ಲಿ 13 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಕೇವಲ 35.61ರ ಸರಾಸರಿಯಲ್ಲಿ 463 ರನ್ ಕಲೆಹಾಕಿದ್ದಾರೆ. 1 ಶತಕ ಮತ್ತು 2 ಅರ್ಧಶತಕ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿ ರೇಂಜ್ಗೆ ಈ ಅಂಕಿ-ಅಂಶಗಳು ಏನೇನೂ ಅಲ್ಲ. ಅದೇನೆ ಇರಲಿ, ಈ ಬಾರಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಅಬ್ಬರಿಸಲಿ. ಆ ಮೂಲಕ ಟೆಸ್ಟ್ನಲ್ಲೂ ಹಳೆಯ ಖದರ್ಗೆ ಮರಳಲಿ ಎನ್ನುವುದು ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಹಾರೈಕೆಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.