ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯ ಮಿಂಚಿನ ಆಟ
ಸೆಮೀಸ್‌ನಲ್ಲಿ ಉತ್ತರ ವಲಯವನ್ನು 211 ರನ್‌ಗಳಿಗೆ ಕಟ್ಟಿ ಹಾಕಿದ ದಕ್ಷಿಣ ವಲಯ
5 ವಿಕೆಟ್ ಕಬಳಿಸಿ ಮಿಂಚಿದ ಕನ್ನಡಿಗ ವೇಗಿ ವೈಶಾಖ್ ವಿಜಯ್‌ಕುಮಾರ್
ಬೆಂಗಳೂರು(ಜು.08): ದುಲೀಪ್ ಟ್ರೋಪಿ ಟೂರ್ನಿಯಲ್ಲಿ ಉತ್ತರ ವಲಯದ ವಿರುದ್ಧ ದಕ್ಷಿಣ ವಲಯ ಸೆಮಿಫೈನಲ್‌ನಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ. ಮೊದಲ ಇನಿಂಗ್ಸ್‌ನಲ್ಲಿ 3 ರನ್ ಮುನ್ನಡೆ ಗಳಿಸಿದ್ದ ಉತ್ತರ ವಲಯ, ಆರ್‌ಸಿಬಿ ವೇಗಿ ವಿ ವೈಶಾಖ್ ಮಾರಕ ದಾಳಿಗೆ ತತ್ತರಿಸಿ ಕೇವಲ 211 ರನ್‌ಗಳಿಗೆ ಸರ್ವಪತನ ಕಂಡಿದೆ. ಇದೀಗ ದಕ್ಷಿಣ ವಲಯ ತಂಡಕ್ಕೆ 215 ರನ್ ಗುರಿ ಲಭಿಸಿದ್ದು, 3ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 21 ರನ್ ಗಳಿಸಿದೆ. ಕೊನೆ ದಿನವಾದ ಶನಿವಾರ ತಂಡ 194 ರನ್ ಗಳಿಸಬೇಕಿದೆ.
ಗುರುವಾರ 2ನೇ ಇನ್ನಿಂಗ್್ಸನಲ್ಲಿ 2 ವಿಕೆಟ್ ಕಳೆದುಕೊಂಡು 51 ರನ್ ಗಳಿಸಿದ್ದ ಉತ್ತರ ವಲಯ ಶುಕ್ರವಾರ 211 ರನ್‌ಗೆ ಸರ್ವಪತನ ಕಂಡಿತು. ಪ್ರಭ್ಸಿಮ್ರನ್ ಸಿಂಗ್ 93 ಎಸೆತಗಳಲ್ಲಿ ಹೋರಾಟದ 63 ರನ್ ಸಿಡಿಸಿದರು. ವೈಶಾಕ್ 5 ವಿಕೆಟ್ ಗೊಂಚಲು ಪಡೆದರೆ, ಮೊದಲ ಇನ್ನಿಂಗ್್ಸನಲ್ಲಿ 5 ವಿಕೆಟ್ ಕಬಳಿಸಿದ್ದ ವಿದ್ವತ್ ಕಾವೇರಪ್ಪ 2 ವಿಕೆಟ್ ಕಿತ್ತರು. ಉಳಿದ 3 ವಿಕೆಟ್ ಸ್ಪಿನ್ನರ್ ಸಾಯಿ ಕಿಶೋರ್ ಪಾಲಾಯಿತು.
undefined
ಸ್ಕೋರ್: ಉತ್ತರ ವಲಯ 198/10 ಮತ್ತು 211/10 (ಪ್ರಭ್ಸಿಮ್ರನ್ 63, ಹರ್ಷಿತ್ 38, ವೈಶಾಕ್ 5-76)
ದಕ್ಷಿಣ ವಲಯ 195/10 ಮತ್ತು 21/0 (3ನೇ ದಿನದಂತ್ಯಕ್ಕೆ)(ಮಯಾಂಕ್ 15*, ಸುಧರ್ಶನ್ 05*)
ಫೈನಲ್ ಸನಿಹಕ್ಕೆ ಪಶ್ಚಿಮ ವಲಯ
ಪಶ್ಚಿಮ ವಲಯ ಈ ಬಾರಿಯೂ ಫೈನಲ್ಗೇರುವುದು ಬಹುತೇಕ ಖಚಿವಾಗಿದೆ. ಕೇಂದ್ರ ವಲಯದ ವಿರುದ್ಧ 2ನೇ ಇನ್ನಿಂಗ್್ಸನಲ್ಲಿ 3ನೇ ದಿನದಂತ್ಯಕ್ಕೆ ಪಶ್ಚಿಮ ವಲಯ 9 ವಿಕೆಟ್‌ಗೆ 292 ರನ್ ಗಳಿಸಿದ್ದು, ಒಟ್ಟು 384 ರನ್ ಮುನ್ನಡೆ ಪಡೆದಿದೆ. ಒಂದು ವೇಳೆ ಪಂದ್ಯ ಡ್ರಾಗೊಂಡರೂ ಮೊದಲ ಇನ್ನಿಂಗ್‌್ಸ ಮುನ್ನಡೆ ಆಧಾರದಲ್ಲಿ ಪಶ್ಚಿಮ ವಲಯ ಫೈನಲ್ ಪ್ರವೇಶಿಸಲಿದೆ. 2ನೇ ದಿನ 3 ವಿಕೆಟ್‌ಗೆ 149 ರನ್ ಗಳಿಸಿದ್ದ ಪಶ್ಚಿಮ ವಲಯಕ್ಕೆ ಚೇತೇಶ್ವರ್ ಪೂಜಾರ 133 ರನ್ ಸಿಡಿಸಿ ತಂಡಕ್ಕೆ ಮತ್ತೆ ಆಸರೆಯಾದರು. ಸೌರಭ್ 4 ವಿಕೆಟ್ ಕಿತ್ತರು.
ಏಷ್ಯಾಡ್: ಭಾರತ ಕ್ರಿಕೆಟ್ ತಂಡಗಳ ಸ್ಪರ್ಧೆ ಖಚಿತ
ಮುಂಬೈ: ಚೀನಾದ ಹ್ಯಾಂಗ್ಝೂನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತ ಕ್ರಿಕೆಟ್ ತಂಡಗಳು ಪಾಲ್ಗೊಳ್ಳುವುದು ಖಚಿತವಾಗಿದೆ. ಶುಕ್ರವಾರ ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಇದನ್ನು ಅನುಮೋದಿಸಲಾಯಿತು. ಪುರುಷರ ವಿಭಾಗದಲ್ಲಿ ಭಾರತದ 2ನೇ ದರ್ಜೆಯ ತಂಡವನ್ನು ಆಡಿಸಲು ಬಿಸಿಸಿಐ ನಿರ್ಧರಿಸಿದೆ. ಆದರೆ ಮಹಿಳಾ ವಿಭಾಗದಲ್ಲಿ ಮೊದಲ ದರ್ಜೆಯ ತಂಡವನ್ನೇ ಬಿಸಿಸಿಐ ಕಣಕ್ಕಿಳಿಸಲಿದೆ.
'ನೀವು ನನಗೆ ಟೆಕ್ಸ್ಟ್ ಮಾಡಿ ಸಾಕು': ತನ್ನ ಬಗ್ಗೆ ಟ್ವೀಟ್ ಮಾಡೋರಿಗೆ ರಿಯಾನ್ ಪರಾಗ್ ತಿರುಗೇಟು..!
ಇದೇ ವೇಳೆ ಅ.16ರಿಂದ ಆರಂಭಗೊಳ್ಳಲಿರುವ ಮುಷ್ತಾಕ್ ಅಲಿ ಟಿ20ಯಲ್ಲಿ ಐಪಿಎಲ್ ಮಾದರಿಯ ಇಂಪ್ಯಾಕ್ಟ್ ಆಟಗಾರ ನಿಯಮ ಜಾರಿಗೆ ಬಿಸಿಸಿಐ ನಿರ್ಧರಿಸಿದೆ. ಮುಷ್ತಾಕ್ ಅಲಿ ಟಿ20ಯಲ್ಲಿ ಕಳೆದ ಋುತುವಿನಲ್ಲೇ ಈ ನಿಯಮ ಮೊದಲ ಬಾರಿ ಜಾರಿಗೊಳಿಸಲಾಗಿತ್ತು. ಆದರೆ 14ನೇ ಓವರ್ ಮುಕ್ತಾಯಕ್ಕೂ ಮುನ್ನ ಇಂಪ್ಯಾಕ್ಟ್ ಆಟಗಾರನನ್ನು ಬಳಸಬೇಕಿತ್ತು.
ಒಂದೇ ದಿನದಲ್ಲಿ ನಿವೃತ್ತಿ ಹಿಂಪಡೆದ ತಮೀಮ್!
ಚಿತ್ತಗಾಂಗ್: ಗುರುವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದ ಬಾಂಗ್ಲಾದೇಶದ ಕ್ರಿಕೆಟಿಗ ತಮೀಮ್ ಇಕ್ಬಾಲ್, ಒಂದೇ ದಿನಕ್ಕೆ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಸೂಚನೆ ಮೇರೆಗೆ ನಿವೃತ್ತಿ ಹಿಂಪಡೆದಿದ್ದಾಗಿ ತಮೀಮ್ ತಿಳಿಸಿದ್ದು, ಒಂದೂವರೆ ತಿಂಗಳ ಬಳಿಕ ಮತ್ತೆ ಆಡುವುದಾಗಿ ಹೇಳಿದ್ದಾರೆ. ಶುಕ್ರವಾರ ಬಾಂಗ್ಲಾ ಮಾಜಿ ನಾಯಕ ಮುಶ್ರಫೆ ಮೊರ್ತಜಾ ಹಾಗೂ ತಮೀಮ್ ಪ್ರಧಾನಿಯನ್ನು ಭೇಟಿಯಾಗಿದ್ದರು. ಈ ವೇಳೆ ನಿವೃತ್ತಿ ಹಿಂಪಡೆದು ಕ್ರಿಕೆಟ್ಗೆ ಮರಳುವಂತೆ ಪ್ರಧಾನಿ ಸೂಚಿಸಿದ್ದಾರೆ.