148 ವರ್ಷಗಳ ಕ್ರಿಕೆಟ್‌ ಇತಿಹಾಸದಲ್ಲಿ ಯಾರೂ ಮಾಡಲಾಗದ ದಾಖಲೆಯ ಸನಿಹ ವಿರಾಟ್‌ ಕೊಹ್ಲಿ!

Published : Oct 17, 2025, 11:08 PM IST
Virat Kohli ODI Record

ಸಾರಾಂಶ

Virat Kohli Chasing 148-Year-Old Unique Record ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ, ವಿರಾಟ್ ಕೊಹ್ಲಿ ಐತಿಹಾಸಿಕ ವಿಶ್ವದಾಖಲೆಯ ಹೊಸ್ತಿಲಲ್ಲಿದ್ದಾರೆ. ಇನ್ನೊಂದು ಶತಕ ಬಾರಿಸಿದರೆ, ಅವರು ಏಕದಿನ ಮಾದರಿಯಲ್ಲಿ 52 ಶತಕಗಳನ್ನು ಪೂರೈಸಲಿದ್ದಾರೆ.

ನವದೆಹಲಿ (ಅ.17): ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಏಳು ತಿಂಗಳ ನಂತರ ತಮ್ಮ ಮೊದಲ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ, ಭಾನುವಾರ ಪರ್ತ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡಲಿದೆ. ಈ ವರ್ಷದ ಆರಂಭದಲ್ಲಿ ಟೆಸ್ಟ್‌ನಿಂದ ನಿವೃತ್ತರಾದ ನಂತರ 36 ವರ್ಷದ ಭಾರತದ ಮಾಜಿ ನಾಯಕ ಏಕದಿನ ಕ್ರಿಕೆಟ್‌ನಲ್ಲಿ ಆಡುವ ಆಟಗಾರನಾಗಿದ್ದರೆ. 2024 ರಲ್ಲಿ ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಭಾರತ ಟಿ 20 ವಿಶ್ವಕಪ್ ಗೆದ್ದ ನಂತರ ಅವರು ಟಿ20 ಕ್ರಿಕೆಟ್‌ನಿಂದಲೂ ನಿವೃತ್ತರಾಗಿದ್ದರು. 2027ರ ಏಕದಿನ ವಿಶ್ವಕಪ್‌ನಲ್ಲಿ ಕೊಹ್ಲಿ ಆಡುವ ಬಗ್ಗೆ ಅನಿಶ್ಚಿತತೆಗಳು ಇರುವ ನಡುವೆವೇ, ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಸಮಯದಲ್ಲಿ ಅವರು ಅತ್ಯಂತ ಅಪರೂಪದ ವಿಶ್ವದಾಖಲೆಯನ್ನು ಕೊಹ್ಲಿ ಬೆನ್ನಟ್ಟಿದ್ದಾರೆ. ಇದು ಎಂಥಾ ದಾಖಲೆ ಎಂದರೆ ಕ್ರಿಕೆಟ್‌ನ 148 ವರ್ಷಗಳ ಇತಿಹಾಸದಲ್ಲಿ ಈ ದಾಖಲೆಯನ್ನು ಯಾರೂ ಮಾಡಿಲ್ಲ.

ಐಸಿಸಿ ಮಾನ್ಯತೆಯ ಕ್ರಿಕೆಟ್‌ನ ಒಂದೇ ಮಾದರಿಯಲ್ಲಿ ಗರಿಷ್ಠ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲು ವಿರಾಟ್‌ ಕೊಹ್ಲಿಗೆ ಇನ್ನೊಂದೇ ಶತಕ ಅಗತ್ಯವಿದೆ. ಸದ್ಯ ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ ಮಾದರಿಯಲ್ಲಿ 51 ಶತಕ ಬಾರಿಸಿದ್ದಾರೆ. ಆ ಮೂಲಕ ಸಚಿನ್‌ ತೆಂಡುಲ್ಕರ್‌ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಸಚಿನ್‌ ತೆಂಡುಲ್ಕರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 51 ಶತಕ ಬಾರಿಸಿದ್ದರು. ಕ್ರಿಕೆಟ್‌ ಹುಟ್ಟಿದಾಗಿನಿಂದ ಕೊಹ್ಲಿ ಹಾಗೂ ತೆಂಡುಲ್ಕರ್‌ ಹೊರತಾಗಿ ಮತ್ತೆ ಯಾವ ಬ್ಯಾಟ್ಸ್‌ಮನ್‌ಗಳು ಕೂಡ ಐಸಿಸಿಯ ಮಾನ್ಯತೆಯ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚಿನ ಶತಕ ಬಾರಿಸಿಲ್ಲ.

ಒಟ್ಟಾರೆ ಗರಿಷ್ಠ ಅಂತಾರಾಷ್ಟ್ರೀಯ ಶತಕ ಬಾರಿಸಿದಿ ಬ್ಯಾಟ್ಸಮನ್‌ಗಳ ಪಟ್ಟಿಯಲ್ಲಿ ಸಚಿನ್‌ ತೆಂಡುಲ್ಕರ್‌ 100 ಶತಕದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 51 ಟೆಸ್ಟ್‌ ಶತಕ ಹಾಗೂ 49 ಏಕದಿನ ಶತಕ ಬಾರಿಸಿದ್ದಾರೆ. ವಿರಾಟ್‌ ಕೊಹ್ಲಿ, 51 ಏಕದಿನ ಶತಕ, 30 ಟೆಸ್ಟ್‌ ಶತಕ ಹಾಗೂ 1 ಟಿ20 ಶತಕದೊಂದಿಗೆ 82 ಹಂಡ್ರೆಂಡ್‌ ಬಾರಿಸಿ 2ನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಫಾರ್ಮ್‌ ಅದ್ಭುತ!

ಇನ್ನು ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆಡಿದ 29 ಏಕದಿನದಿಂದ 89ರ ಸ್ಟ್ರೈಕ್‌ರೇಟ್‌ ಹಾಗೂ 51.03 ಸರಾಸರಿಯಲ್ಲಿ 1327 ರನ್‌ ಬಾರಿಸಿದ್ದಾರೆ. ಇದರಲ್ಲಿ 5 ಶತಕ, 6 ಅರ್ಧಶತಕ ಬಾರಿಸಿದ್ದಾರೆ. ಅಜೇಯ 133 ರನ್‌ ಅವರ ಗರಿಷ್ಠ ಮೊತ್ತ.

ಆಸ್ಟ್ರೇಲಿಯಾ ವಿರುದ್ಧ ಅವರ ಕೊನೆಯ ಐದು ಇನ್ನಿಂಗ್ಸ್‌ಗಳು: 54, 56, 85, 54 ಮತ್ತು 84, ಎಲ್ಲವೂ ಅರ್ಧಶತಕಗಳು. ಆಸ್ಟ್ರೇಲಿಯಾದಲ್ಲಿ ಅವರ ಕೊನೆಯ ಐದು ಇನ್ನಿಂಗ್ಸ್‌ಗಳು: 104, 46, 21, 89 ಮತ್ತು 63. ಕೊಹ್ಲಿ ಎಲ್ಲಾ ಸ್ವರೂಪಗಳಲ್ಲಿ (17) ಪ್ರವಾಸಿ ಆಟಗಾರನಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

ರೋಹಿತ್‌ ಶರ್ಮ ದಾಖಲೆ ಸರಿಗಟ್ತಾರಾ ಕೊಹ್ಲಿ?

ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಏಕದಿನ ಶತಕಗಳನ್ನು ಬಾರಿಸಿದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸರಿಗಟ್ಟುವ ಅವಕಾಶವೂ ಅವರಿಗಿದೆ. ರೋಹಿತ್ ನಾಲ್ಕು ಶತಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಕೊಹ್ಲಿ ಇದುವರೆಗೆ ಮೂರು ಶತಕಗಳನ್ನು ಗಳಿಸಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ