ವಿಕೆಟ್ ಪತನದ ನಡುವೆ ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ!

By Suvarna NewsFirst Published Sep 2, 2021, 6:06 PM IST
Highlights
  • ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ
  • ದಿಢೀರ್ 3 ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿದ ಭಾರತ
  • ಸಂಕಷ್ಟದ ನಡುವೆ ನಾಯಕ ವಿರಾಟ್ ಕೊಹ್ಲಿ ದಾಖಲೆ

ಲಂಡನ್(ಸೆ.2):  ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಟೀಂ ಇಂಡಿಯಾಗೆ ಒಂದೆಡೆ ಆಘಾತ, ಮತ್ತೊಂದೆಡೆ ಸಂತಸ. 3ನೇ ಟೆಸ್ಟ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಹಾಗೂ ಟೆಸ್ಟ್ ಸರಣಿಯಲ್ಲಿ ಮೇಲುಗೈ ಸಾಧಿಸಲು ಕಣಕ್ಕಿಳಿದ ಟೀಂ ಇಂಡಿಯಾ ದಿಢೀರ್ 3 ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಈ ಆತಂಕದ ನಡುವೆ ನಾಯಕ ವಿರಾಟ್ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ದಾಖಲೆ ಮುರಿದಿದ್ದಾರೆ.

Ind vs Eng 4ನೇ ಟೆಸ್ಟ್‌ಗೂ ಅಶ್ವಿನ್‌ಗಿಲ್ಲ ಸ್ಥಾನ: ಆಯ್ಕೆ ಸಮಿತಿಗೆ ಬುದ್ದಿಯಿಲ್ಲ ಎಂದ ಇಂಗ್ಲೆಂಡ್‌ ಮಾಜಿ ನಾಯಕ..!

3 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ. ಲಂಚ್ ಬ್ರೇಕ್ ವೇಳೆ ವಿರಾಟ್ ಕೊಹ್ಲಿ ಅಜೇಯ 18 ರನ್ ಸಿಡಿಸಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಕಡಿಮೆ ಇನ್ನಿಂಗ್ಸ್‌ನಲ್ಲಿ 23,000 ರನ್ ದಾಖಲಿಸಿದ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

ವಿರಾಟ್ ಕೊಹ್ಲಿ 490 ಇನ್ನಿಂಗ್ಸ್‌ಗಳಲ್ಲಿ 23,000 ಅಂತಾರಾಷ್ಟ್ರೀಯ ರನ್ ಸಿಡಿಸಿ ಸಚಿನ್ ದಾಖಲೆ ಮುರಿದರು. ಸಚಿನ್‌ಗಿಂತ 32 ಇನ್ನಿಂಗ್ಸ್ ಮುಂಚಿತವಾಗಿ ಕೊಹ್ಲಿ ಈ ಸಾಧನೆ ಮಾಡಿದರು. ಇನ್ನು 23,000 ಅಂತಾರಾಷ್ಟ್ರೀಯ ರನ್ ಸಾಧನೆ ಮಾಡಿದ 7ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು.

ಅತೀ ಕಡಿಮೆ ಇನ್ನಿಂಗ್ಸ್‌ನಲ್ಲಿ ಅಂತಾರಾಷ್ಟ್ರೀಯ 23,000 ರನ್ ಸಾಧನೆ
490 ಇನ್ನಿಂಗ್ಸ್ - ವಿರಾಟ್ ಕೊಹ್ಲಿ
522 ಇನ್ನಿಂಗ್ಸ್- ಸಚಿನ್ ತೆಂಡುಲ್ಕರ್
544 ಇನ್ನಿಂಗ್ಸ್- ರಿಕಿ ಪಾಂಟಿಂಗ್
551 ಇನ್ನಿಂಗ್ಸ್- ಜಾಕ್ ಕಾಲಿಸ್
568 ಇನ್ನಿಂಗ್ಸ್- ಕುಮಾರ ಸಂಗಕ್ಕಾರ
576 ಇನ್ನಿಂಗ್ಸ್- ರಾಹುಲ್ ದ್ರಾವಿಡ್
645 ಇನ್ನಿಂಗ್ಸ್- ಮಹೇಲಾ ಜಯವರ್ದನೆ

Ind vs Eng ಓವಲ್ ಟೆಸ್ಟ್‌: ಟಾಸ್ ಗೆದ್ದ ಇಂಗ್ಲೆಂಡ್‌ ಬೌಲಿಂಗ್ ಆಯ್ಕೆ
 
2019ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ರನ್ ಅಬ್ಬರ ಕಡಿಮೆಯಾಗಿದೆ. 2019ರ ನವೆಂಬರ್ ತಿಂಗಳಿನಿಂದ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಒಂದು ಶತಕ ಸಿಡಿಸಿಲ್ಲ. ಕೊಹ್ಲಿ ಕಳಪೆ ಪ್ರದರ್ಶನ ಟೀಂ ಇಂಡಿಯಾಗೆ ತೀವ್ರ ಹಿನ್ನಡೆ ತಂದಿದೆ. ಆದರೆ ಇಂದಿನ ಪಂದ್ಯದಲ್ಲಿ ಕೊಹ್ಲಿ ಉತ್ತಮ ಮೊತ್ತ ಪೇರಿಸುವ ಸೂಚನೆ ನೀಡಿದ್ದಾರೆ. ಈಗಾಗಲೇ 3 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾಗೆ ಕೊಹ್ಲಿ ಇನ್ನಿಂಗ್ಸ್ ಅತೀ ಅವಶ್ಯಕವಾಗಿದೆ.

click me!