
ಕರಾಚಿ(ಸೆ.02): ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಉಗ್ರಗಾಮಿ ಗುಂಪಾದ ತಾಲಿಬಾನಿಗಳ ಕುರಿತಂತೆ ಮೃದು ದೋರಣೆ ತಳೆದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಈಗ ತಾಲಿಬಾನಿಗಳು ಬದಲಾವಣೆಯೊಂದಿಗೆ ಬಂದಿದ್ದಾರೆ. ಸ್ತ್ರೀಯರು ಉದ್ಯೋಗಕ್ಕೆ ಹೋಗಲು ಅವರು ಅವಕಾಶ ನೀಡಲಿದ್ದಾರೆ. ತಾಲಿಬಾನ್‌ಗೆ ಕ್ರಿಕೆಟ್ ತುಂಬಾ ಇಷ್ಟ. ಹಾಗಾಗಿ ಅಫ್ಘಾನಿಸ್ತಾನ ಪುರುಷ ಕ್ರಿಕೆಟ್ ತಂಡಕ್ಕೆ ಹೆಚ್ಚಿನ ಅನುಕೂಲ ದೊರೆಯಲಿದೆ. ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿಯು ನಡೆಯಲಿದೆ ಎಂದು ಮಾಧ್ಯಮಗಳಲ್ಲಿ ಅಫ್ರಿದಿ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದರು.
ಮುಖವಾಡ ಬಯಲು: ಉಗ್ರ ತಾಲಿಬಾನಿಗಳ ಪರ ಬ್ಯಾಟ್ ಬೀಸಿದ ಶಾಹಿದ್ ಅಫ್ರಿದಿ..!
ಅಫ್ರಿದಿಯ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ನೆಟ್ಟಿಗರು ಕಟು ಶಬ್ದಗಳಲ್ಲಿ ಪಾಕಿಸ್ತಾನದ ಮಾಜಿ ಆಲ್ರೌಂಡರ್‌ನನ್ನು ಟೀಕಿಸಿದ್ದಾರೆ. ಇವರೇ ನೋಡಿ ತಾಲಿಬಾನಿಗೆ ಬಹಿರಂಗವಾಗಿ ಬೆಂಬಲಿಸಿದಾತ. ಮಾನವೀಯತೆ ಹಾಗೂ ಸ್ತ್ರಿ ಸ್ವಾತಂತ್ರ್ಯಕ್ಕೆ ವಿರುದ್ದವಾಗಿರುವ ರಕ್ತಪಿಪಾಸು ಉಗ್ರಸಂಘಟನೆಯನ್ನು ಬೆಂಬಲಿಸುವ ಈತನೂ ಒಬ್ಬ ಜಿಹಾದಿಯೇ ಎಂದು ಟೀಕಿಸಿದ್ದಾರೆ.
ತಾಲಿಬಾನಿಗಳನ್ನು ಬೆಂಬಲಿಸುವ ಈತ ಮುಂದಿನ ಪಾಕಿಸ್ತಾನದ ಪ್ರಧಾನಿಯೆಂದು ಮತ್ತೆ ಕೆಲವರು ಲೇವಡಿ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.