ವಿರುಷ್ಕಾ ಜೋಡಿ ಒಟ್ಟು ಆದಾಯ 1,200 ಕೋಟಿ, ಗಳಿಕೆಯಲ್ಲಿ ಕೊಹ್ಲಿಗಿಲ್ಲ ಸರಿಸಾಟಿ!

By Suvarna News  |  First Published Jan 27, 2020, 6:52 PM IST

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ  ವಿಶ್ವ ಕ್ರೀಡಾ ಕ್ಷೇತ್ರದಲ್ಲೇ ಗರಿಷ್ಠ ಆದಾಯ ಗಳಿಸುತ್ತಿರುವ ಪಟ್ಟಿಯಲ್ಲಿ ಟಾಪ್ 10 ಪಟ್ಟಿಯಲ್ಲಿದ್ದಾರೆ. ಕ್ರಿಕೆಟಿಗರ ಪೈಕಿ ಕೊಹ್ಲಿಯೇ ನಂಬರ್ 1.  ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ. ಇವರಿಬ್ಬರು ಒಟ್ಟು ಆದಾಯ ಸಾವಿರ ಕೋಟಿ ದಾಟಿದೆ.


ಮುಂಬೈ(ಜ.27): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ವಿಶ್ವದ ಬೆಸ್ಟ್ ಕಪಲ್. ಜನಪ್ರಿಯ ಮಾತ್ರವಲ್ಲ ಪವರ್‌ಫುಲ್ ಕಪಲ್ ಕೂಡ ಹೌದು. ವಿರಾಟ್ ಕೊಹ್ಲಿ 2019ರ ಸಾಲಿನಲ್ಲಿ 252.72 ಆದಾಯ ಗಳಿಸಿದ್ದಾರೆ. ಬಿಸಿಸಿಐ ಗುತ್ತಿಗೆ, ಪಂದ್ಯದ ಸಂಭಾವನೆ, ಐಪಿಎಲ್, ಜಾಹೀರಾತು, ಎಂಡೋರ್ಸ್‌ಮೆಂಟ್, ರೆಸ್ಟೋರೆಂಟ್‌ಗಳಿಂದ ಕೊಹ್ಲಿ ಕೋಟಿ ಕೋಟಿ ಆದಾಯ ಗಳಿಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವಿರುಷ್ಕಾ ದಂಪತಿಗೆ ಔತಣಕೂಟ ಆಯೋಜಿಸಿದ ಸುನಿಲ್ ಚೆಟ್ರಿ!

Tap to resize

Latest Videos

ಕೊಹ್ಲಿ ಒಟ್ಟು ಆದಾಯ 900  ಕೋಟಿ ರೂಪಾಯಿ. ಇತ್ತ ಅನುಷ್ಕಾ ಶರ್ಮಾ ಕಳೆದ ವರ್ಷ 28. 67 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಅನುಷ್ಕಾ ಒಟ್ಟು ಆದಾಯ 350 ಕೋಟಿ ರೂಪಾಯಿ. ಕೊಹ್ಲಿ ಹಾಗೂ ಅನುಷ್ಕಾ ಜೋಡಿಯ ಒಟ್ಟು ಆದಾಯ 1200 ಕೋಟಿ ರೂಪಾಯಿಗೂ ಅಧಿಕ.

ಇದನ್ನೂ ಓದಿ:ಮದುವೆ ವಾರ್ಷಿಕೋತ್ಸವ: ಅನುಷ್ಕಾಗೆ 2 ಭರ್ಜರಿ ಗಿಫ್ಟ್ ನೀಡಿದ ಕೊಹ್ಲಿ! 

ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿ ಆವೃತ್ತಿಗೆ 17 ಕೋಟಿ ರೂಪಾಯಿ ನೀಡುತ್ತಿದೆ. 7 ಕೋಟಿ ರೂಪಾಯಿ ಬಿಸಿಸಿಐ ವಾರ್ಷಿಕ ಗುತ್ತಿಗೆ, ಇನ್ನು ಪುಮಾ  5 ವರ್ಷಕ್ಕೆ 100 ಕೋಟಿ ರೂಪಾಯಿ ನೀಡುತ್ತಿದೆ. ಮಿಂತ್ರ, ಉಬರ್, ಆಡಿ, MRF, ಮಾನ್ಯಾವರ್, ಟಿಸ್ಸಾಟ್ ಸೇರಿದಂತೆ ಹಲವು ಬ್ರ್ಯಾಂಡ್ ರಾಯಭಾರಿಯಾಗಿಯೂ ಆದಾಯ ಗಳಿಸುತ್ತಿದ್ದಾರೆ. 

ಅನುಷ್ಕಾ ಶರ್ಮಾ ಪ್ರತಿ ಚಿತ್ರಕ್ಕೆ 12 ರಿಂದ 15 ಕೋಟಿ ರೂಪಾಯಿ ಚಾರ್ಜ ಮಾಡುತ್ತಾರೆ. ಇದುವರೆದೆ ಅನುಷ್ಕಾ 19 ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಇನ್ನು ಹಲವು ಜಾಹೀರಾತುಗಳಿಂದಲೂ ಅನುಷ್ಕಾ ಆದಾಯ ಗಳಿಸುತ್ತಿದ್ದಾರೆ. 

ಇದನ್ನೂ ಓದಿ:ವಿದಾಯದ ನಂತರದ ಪ್ಲಾನ್ ಬಹಿರಂಗಪಡಿಸಿದ ವಿರಾಟ್ ಕೊಹ್ಲಿ!.

ಆದಾಯ ಹೊರತು ಪಡಿಸಿದರೆ, ಕೊಹ್ಲಿ ಹಾಗೂ ಅನುಷ್ಕಾ 2017ರಲ್ಲಿ ಮುಂಬೈನ ವರ್ಲಿಯಲ್ಲಿ 35 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ. ಇನ್ನು ಗುರುಗಾಂವ್‌ನಲ್ಲಿ 80  ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇನ್ನು ದುಬಾರಿ ಮೌಲ್ಯದ ಹಲವು ಕಾರುಗಳಿವೆ. 

click me!