ವಿಶ್ವಕಪ್‌ನಲ್ಲಿ ಭಾಗವಹಿಸಲ್ಲ ಎಂದ ಪಿಸಿಬಿ ಯು ಟರ್ನ್

Published : Jan 27, 2020, 01:04 PM IST
ವಿಶ್ವಕಪ್‌ನಲ್ಲಿ ಭಾಗವಹಿಸಲ್ಲ ಎಂದ  ಪಿಸಿಬಿ ಯು ಟರ್ನ್

ಸಾರಾಂಶ

ಒಂದು ವೇಳೆ ಏಷ್ಯಾಕಪ್ ಆಡಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ, ನಾವು 2021ರ ಟಿ20 ವಿಶ್ವಕಪ್ ಬಹಿಷ್ಕರಿಸುತ್ತೇವೆ ಎಂದಿದ್ದ ಪಿಸಿಬಿ ಸಿಇಒ ಇದೀಗ ಉಲ್ಟಾ ಹೊಡಿದಿದ್ದಾರೆ. ಈಗೇನು ಹೇಳಿದ್ದಾರೆ ಎನ್ನುವುನ್ನು ನೀವೊಮ್ಮೆ ನೋಡಿ..

ಲಾಹೋರ್‌: ಭಾರತ ಈ ವರ್ಷ ನಡೆಯಲಿರುವ ಏಷ್ಯಾ ಕಪ್‌ನಲ್ಲಿ ಪಾಲ್ಗೊಳ್ಳದೇ ಇದ್ದಲ್ಲಿ 2021ರ ಟಿ20 ವಿಶ್ವಕಪ್‌ನಿಂದ ಪಾಕಿಸ್ತಾನ ದೂರ ಉಳಿಯುವುದಾಗಿ ಹೇಳಿದ್ದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಸಿಇಒ ವಾಸೀಂ ಖಾನ್‌ ಈಗ ಉಲ್ಟಾಹೊಡೆದಿದ್ದಾರೆ. 

ಏಷ್ಯಾಕಪ್‌ಗೆ ಬರದಿದ್ದರೆ, ಟಿ20 ವಿಶ್ವಕಪ್‌ಗೆ ಬರಲ್ಲ! ಪಾಕ್ ಎಚ್ಚರಿಕೆ

ತಮ್ಮ ಈ ಹೇಳಿಕೆಗೆ ಕ್ರಿಕೆಟ್‌ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳು ಬಂದ ಹಿನ್ನೆಲೆಯಲ್ಲಿ, ಇದಕ್ಕೆ ಪ್ರತಿಕ್ರಿಯಿಸಿರುವ ಅವರು ಅಂತಹ ಯಾವುದೇ ಹೇಳಿಕೆಗಳನ್ನು ನಾನು ನೀಡಿಲ್ಲ. ಇವೆಲ್ಲವೂ ಆಧಾರ ರಹಿತವಾದ ಸುದ್ದಿಗಳು ಎಂದಿದ್ದಾರೆ. 

ಭಾರತ ಏಷ್ಯಾಕಪ್‌ನಲ್ಲಿ ಪಾಲ್ಗೊಳ್ಳದೇ ಇದ್ದರೆ ಅದನ್ನು ನಿಭಾಯಿಸಲು ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌(ಎಸಿಸಿ) ಇದೆ. ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿದೆಯಷ್ಟೆ. ಈ ವಿಚಾರವಾಗಿ ನಾನು ಯಾವುದೇ ಹೇಳಿಕೆ ನೀಡಿಲ್ಲ. ಏಷ್ಯಾಕಪ್‌ ಆತಿಥ್ಯವನ್ನೂ ಬದಲಾವಣೆ ಮಾಡುವ ಸಾಧ್ಯತೆಗಳು ಇಲ್ಲ. ಪಾಕಿಸ್ತಾನದಲ್ಲೇ ನಡೆಯುತ್ತದೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

19 ಬೌಂಡರಿ, 8 ಸಿಕ್ಸರ್, 143 ಎಸೆತಗಳಲ್ಲಿ 173 ರನ್..! ತಂದೆ ಸೆಹ್ವಾಗ್‌ ರೀತಿ ಮೈದಾನದಲ್ಲಿ ಘರ್ಜಿಸಿದ ಆರ್ಯವೀರ್..!
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಪ್ರತಿ ಏಕದಿನ ಪಂದ್ಯ ಆಡಿದ ಬಳಿಕ ಬಿಸಿಸಿಐನಿಂದ ಗಳಿಸುವ ಸಂಬಳ ಎಷ್ಟು?