ರೋಹಿತ್ ಶರ್ಮಾ, ಕೊಹ್ಲಿ ಅಭಿಮಾನಿಗಳಿಗೆ ಬಂಪರ್, ಖುಷಿ ಸುದ್ದಿ ನೀಡಿದ ಬಿಸಿಸಿಐ

Published : Jun 03, 2026, 11:51 AM IST
Virat Kohli Rohit Sharma

ಸಾರಾಂಶ

ಈಗಷ್ಟೇ ಐಪಿಎಲ್ ಗುಂಗಿನಿಂದ ಹೊರ ಬರ್ತಿರುವ ಅಭಿಮಾನಿಗಳು ಟೀಂ ಇಂಡಿಯಾ ಆಟ ನೋಡಲು ಕಾಯ್ತಿದ್ದಾರೆ. ಟೀಮ್ ಇಂಡಿಯಾ, ಆರಂಭದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೆಣೆಸಾಡಲಿದೆ. ಈ ಮಧ್ಯೆ ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದೆ. 

ಇಂಡಿಯಾ ಟೀಂನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇದ್ರೆ ಅದ್ರ ಮಜವೇ ಬೇರೆ. ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅಭಿಮಾನಿಗಳ ಸಂಖ್ಯೆ ಕೋಟಿಯಲ್ಲಿದೆ. ಈ ಇಬ್ಬರು ಆಟಗಾರರ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡ ಬಿಸಿಸಿಐ ಮಹತ್ವದ ಹೆಜ್ಜೆ ಇಟ್ಟಿದೆ. ಇಬ್ಬರೂ ಆಟಗಾರರು ಈ ವರ್ಷ ಹಿಂದಿಗಿಂತ ಹೆಚ್ಚು ಪಂದ್ಯಗಳನ್ನು ಆಡಲಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳ ಸಂಖ್ಯೆ ಹೆಚ್ಚಳ

ಟೀಮ್ ಇಂಡಿಯಾ ಈ ವರ್ಷದ ಅಕ್ಟೋಬರ್ನಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಮೊದಲು, ಟೀಂ ಇಂಡಿಯಾ ಮೂರು ಏಕದಿನ ಪಂದ್ಯಗಳನ್ನಾಡುವ ನಿರ್ಧಾರ ಮಾಡಿತ್ತು. ಆದ್ರೀಗ ಅದ್ರ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಈ ಪ್ರವಾಸಕ್ಕಾಗಿ ಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಭಾರತೀಯ ತಂಡವು ಅಕ್ಟೋಬರ್ 22 ರಿಂದ ತನ್ನ ಪ್ರವಾಸವನ್ನು ಪ್ರಾರಂಭಿಸಲಿದ್ದು, ಈ ಪ್ರವಾಸವು ಐದು ಟಿ 20 , ಐದು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರುತ್ತದೆ.

ಕಾಲು ಸ್ವಲ್ಪ ನೆಲದ ಮೇಲೆ ಇರಲಿ..': ವೈಭವ್ ಸೂರ್ಯವಂಶಿಗೆ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಖಡಕ್

ಈ ವರ್ಷ ರೋಹಿತ್ ಮತ್ತು ವಿರಾಟ್ ಎಷ್ಟು ಏಕದಿನ ಪಂದ್ಯ ಆಡ್ಬಹುದು?

2026 ರಲ್ಲಿ, ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಸರಣಿ ಆಡಿತ್ತು. ಇದರಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೂರು ಪಂದ್ಯಗಳನ್ನು ಆಡಿದ್ದರು. ಐಪಿಎಲ್ ಮುಗಿದಿದ್ದು ಈಗ ಆರಂಭದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ, ಶರ್ಮಾ ಆಡಲಿದ್ದಾರೆ. ಮೂರು ಏಕದಿನ ಪಂದ್ಯಗಳಲ್ಲಿ ಕೊಹ್ಲಿ- ಶರ್ಮಾ ಮೈದಾನಕ್ಕೆ ಇಳಿಯಲಿದ್ದಾರೆ. ನಂತರ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಮತ್ತೆ ಮೂರು ಏಕದಿನ ಪಂದ್ಯ ನಡೆಯಲಿದೆ. ಅಲ್ಲಿಯೂ ಕೊಹ್ಲಿ ಮತ್ತು ಶರ್ಮಾ ಮೈದಾನಕ್ಕಿಳಿಯಲಿದ್ದಾರೆ. ಈ ಪ್ರವಾಸದ ನಂತ್ರ ಭಾರತ ಮತ್ತು ಶ್ರೀಲಂಕಾ ನಡುವೆ ಮೂರು ಏಕದಿನ ಪಂದ್ಯ ನಡೆಯಲಿದೆ. ಇದರ ನಂತರ, ಟೀಮ್ ಇಂಡಿಯಾ ಬಾಂಗ್ಲಾದೇಶ ವಿರುದ್ಧ ಮೂರು ಏಕದಿನ ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ. ವರ್ಷದ ನಂತರ, ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಎಂಟು ಏಕದಿನ ಪಂದ್ಯಗಳು ನಡೆಯಲಿವೆ. ಒಟ್ಟಾರೆಯಾಗಿ, ಈ ಇಬ್ಬರು ಅನುಭವಿಗಳು ಈ ವರ್ಷ ಟೀಮ್ ಇಂಡಿಯಾ ಪರ 20 ಏಕದಿನ ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ.

ಮಹಾರಾಜ ಟ್ರೋಫಿ: ಬೆಂಗಳೂರಿಗೆ ಒಲಿದ ಫೈನಲ್ ಭಾಗ್ಯ!

ಟಿ 20 ಹಾಗೂ ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಮತ್ತು ಶರ್ಮಾ ಅವರನ್ನು ಮಿಸ್ ಮಾಡಿಕೊಳ್ತಿರುವ ಅಭಿಮಾನಿಗಳು ಈ ಬಾರಿ ಸ್ವಲ್ಪ ಖುಷಿಯಾಗಿದ್ದಾರೆ. ಏಕದಿನ ಪಂದ್ಯಗಳಲ್ಲಾದ್ರೂ ಇಬ್ಬರು ದಿಗ್ಗಜ ಆಟಗಾರರನ್ನು ಹೆಚ್ಚು ನೋಡುವ ಅವಕಾಶ ಸಿಕ್ತಿರೋದಕ್ಕೆ ಸಮಾಧಾನಗೊಂಡಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಕಾಲು ಸ್ವಲ್ಪ ನೆಲದ ಮೇಲೆ ಇರಲಿ..': ವೈಭವ್ ಸೂರ್ಯವಂಶಿಗೆ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಖಡಕ್ ವಾರ್ನಿಂಗ್
ಮಹಾರಾಜ ಟ್ರೋಫಿ: ಬೆಂಗಳೂರಿಗೆ ಒಲಿದ ಫೈನಲ್ ಭಾಗ್ಯ!