
ಮುಂಬೈ (ಮೇ.11): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಹಾಗೂ ಅವರ ಪತ್ನಿ ಬಾಲಿವುಡ್ ಸ್ಟಾರ್ ಅನುಷ್ಕಾ ಶರ್ಮ, ಮುಂಬೈನ ಜುಹುವಿನಲ್ಲಿರುವ ತಮ್ಮ 'ಒನ್8 ಕಮ್ಯೂನ್' ರೆಸ್ಟೋರೆಂಟ್‌ನಲ್ಲಿ ಆರ್‌ಸಿಬಿ ಆಟಗಾರರು ಹಾಗೂ ಸಿಬ್ಬಂದಿಗಳಿಗೆ ವಿಶೇಷ ಡಿನ್ನರ್ ಏರ್ಪಡಿಸಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡ ಬಳಿಕವೇ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಬುಧವಾರ ಸಂಜೆ ಇಡೀ ತಂಡಕ್ಕೆ ವಿಶೇಷ ಡಿನ್ನರ್ ಏರ್ಪಡಿಸಿದ್ದಾರೆ. ಹಾಲಿ ಆರ್‌ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವೇಗಿಗಳಾದ ಮೊಹಮದ್ ಸಿರಾಜ್, ಜೋಸ್ ಹ್ಯಾಸಲ್‌ವುಡ್, ವೇಯ್ನ ಪರ್ನೆಲ್ ಹಾಗೂ ಆಲ್ರೌಂಡರ್ ವಾನಿಂದು ಹಸರಂಗ ಸೇರಿದಂತೆ ಇನ್ನೂ ಹಲವು ಟೀಮ್ ಬಸ್‌ನಲ್ಲಿ ರೆಸ್ಟೋರೆಂಟ್‌ಗೆ ಆಗಮಿಸಿದರು. ಹೆಚ್ಚಿನ ಪ್ಲೇಯರ್‌ಗಳು ಕ್ಯಾಶ್ಯುಯೆಲ್ಸ್ ಧರಿಸಿದ್ದರೆ, ಇನ್ನೂ ಕೆಲವರು ತಮ್ಮ ಕುಟುಂಬದೊಂದಿಗೆ ಜುಹುವಿನಲ್ಲಿರುವ ಒನ್8 ಕಮ್ಯೂನ್‌ಗೆ ಹೋಗಿದ್ದರು.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಎಂದಿನಂತೆ ಅದ್ಭುತವಾಗಿ ಕಾಣಿಸಿಕೊಂಡರು. ಸ್ಲೀವ್‌ಲೆಸ್ ಸ್ಟ್ರಿಪ್ಡ್ ವೈಟ್ ಶರ್ಟ್ ಹಾಗೂ ಪ್ಯಾಂಟ್ ಧರಿಸಿ ಅನುಷ್ಕಾ ಶರ್ಮ ಆಗಮಿಸಿದ್ದರೆ, ವಿರಾಟ್ ಕೊಹ್ಲಿ ಪ್ರಿಂಟೆಡ್‌ಶರ್ಟ್ ಧರಿಸಿದ್ದರು. ರೆಸ್ಟಾರೆಂಟ್‌ನ ಹೊರಗೆ ದಂಪತಿಗಳು ಪಾಪರಾಜಿಗಾಗಿ ಪೋಸ್ ನೀಡುತ್ತಿದ್ದಾಗ, ಪಾಪರಾಜಿ ಒಬ್ಬರು ಅನುಷ್ಕಾ ಅವರನ್ನು 'ಸರ್' ಎಂದು ತಪ್ಪಾಗಿ ಕರೆದಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇಂಥ ಕಾಲೆಳೆಯುವ ಅವಕಾಶವನ್ನೂ ಎಂದಿಗೂ ಮಿಸ್ ಮಾಡಿಕೊಳ್ಳೋದಿಲ್ಲ. ಸಿಕ್ಕಿದ್ದೇ ಚಾನ್ಸ್ ಎಂದುಕೊಂಡು ಕ್ಯಾಮೆರಾಮೆನ್‌ನ ಕಾಲೆಳೆದಿದ್ದಾರೆ. ಪಾಪರಾಜಿಗಳನ್ನು ಉದ್ದೇಶಿಸಿ ಮಾತನಾಅಡಿದ ಕೊಹ್ಲಿ, ಯಾಕೆ ನೀವು ಒಂದು ಸಾರಿ ವಿರಾಟ್ ಮ್ಯಾಮ್ ಎಂದು ಕರೆಯಬಾರದು' (ವಿರಾಟ್ ಮಾಮ್ ಭೀ ಬೋಲ್ ದೇ ಏಕ್ ಬಾರ್)' ಎಂದು ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಪಾಪರಾಜಿಗಳು ಹಾಗೂ ಅನುಷ್ಕಾ ಶರ್ಮ ನಕ್ಕಿದ್ದಾರೆ. ಇದರ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಸ್ತುತ ಆರ್‌ಸಿಬಿ ತಂಡದ ಭಾಗವಾಗಿ ಐಪಿಎಲ್ 2023ಯಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ, ಆಡಿದ 11 ಪಂದ್ಯಗಳಿಂದ ಆರು ಅರ್ಧಶತಕ ಬಾರಿಸಿರುವ ವಿರಾಟ್ ಕೊಹ್ಲಿ ಒಟ್ಟು 420 ರನ್ ಬಾರಿಸಿದ್ದಾರೆ. ಇನ್ನು ನಾಯಕ ಫಾಫ್ ಡು ಪ್ಲೆಸಿಸ್ 11 ಪಂದ್ಯಗಳಿಂದ 6 ಅರ್ಧಶತಕದೊಂದಿಗೆ 576 ರನ್ ಬಾರಿಸುವ ಮೂಲಕ ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿರುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.
IPL 2023: ಐಪಿಎಲ್‌ನಲ್ಲಿ ಅರ್ಧಶತಕಗಳ 'ಫಿಫ್ಟಿ' ದಾಖಲಿಸಿದ ದಿಗ್ಗಜ, ಆರ್‌ಸಿಬಿ ಸವಾಲಿನ ಮೊತ್ತ!
ಇನ್ನೊಂದೆಡೆ ರಬ್ ನೆ ಬನಾ ದಿ ಜೋಡಿ ನಟಿ, ತಮ್ಮ ಸಹೋದರ ಕರ್ಣೀಶ್ ಶರ್ಮ ನಿರ್ಮಾಣದ 'ಚಾಕ್ಡಾ ಎಕ್ಸ್‌ಪ್ರೆಸ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪಂದ್ಯದ ನಡುವೆ ನಡುವೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಕಪಲ್ ಗೋಲ್ಸ್‌ಅನ್ನೂ ನಿಭಾಯಿಸುತ್ತಿದ್ದಾರೆ. ಒಮ್ಮೊಮ್ಮೆ ದೆಹಲಿ ಹಾಗೂ ಬೆಂಗಳೂರಿನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ವಿರಾಟ್ ಕೊಹ್ಲಿ ತಮ್ಮ ಪತ್ನಿ ಜೊತೆಗಿರುವ ಸುಂದರ ಚಿತ್ರವನ್ನು ಹಂಚಿಕೊಂಡಿದ್ದರು.
ಕಾನ್ಸ್ ಫಿಲ್ಮ್ ಫೆಸ್ಟಿವಲ್ 2023: ಪತಿ ಜೊತೆ ಫ್ರೆಂಚ್ ರಾಯಭಾರಿ ಭೇಟಿಯಾದ ಅನುಷ್ಕಾ ಶರ್ಮಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.