IPL 2023 ಧೋನಿ ಜಾದುಗೆ ಮಕಾಡೆ ಮಲಗಿದ ಡೆಲ್ಲಿ, ಸಿಎಸ್‌ಕೆ‌ಗೆ 27 ರನ್ ಗೆಲುವು!

Published : May 10, 2023, 11:18 PM IST
IPL 2023 ಧೋನಿ ಜಾದುಗೆ ಮಕಾಡೆ ಮಲಗಿದ ಡೆಲ್ಲಿ, ಸಿಎಸ್‌ಕೆ‌ಗೆ 27 ರನ್ ಗೆಲುವು!

ಸಾರಾಂಶ

ಡೆಲ್ಲಿ ವಿರುದ್ಧ ಧೋನಿ ಆಡಿದ್ದು ಕೇವಲ 9 ಎಸೆತ ಆದರೆ ಮಾಡಿದ ಮೋಡಿ ಅಷ್ಟಿಷ್ಟಲ್ಲ. ನಾಯಕನಾಗಿಯೂ ಧೋನಿ ಮ್ಯಾಜಿಕ್ ಮಾಡಿದ್ದಾರೆ. ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೆ ಶರಣಾಗಿದೆ.

ಚೆನ್ನೈ(ಮೇ.10): ಮೈದಾನದಲ್ಲಿ ನಾಯಕ ಎಂಎಸ್ ಧೋನಿ ಕ್ರೀಸ್‌ಗಳಿಯುತ್ತಿದ್ದಂತೆ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಬ್ಯಾಟಿಂಗ್ ಇಳಿದ ಧೋನಿ 2 ಭರ್ಜರಿ ಸಿಕ್ಸರ್ ಹಾಗೂ ಬೌಂಡರಿ ಮೂಲಕ ಅಬ್ಬರಿಸಿದರು. ಬ್ಯಾಟಿಂಗ್ ಹಾಗೂ ನಾಯಕನಾಗಿ ಧೋನಿ ಮಾಡಿದ ಮೋಡಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೋಲಿಗೆ ಗುರಿಯಾಗಿದೆ. ಡೆಲ್ಲಿ ವಿರುದ್ಧ ಸಿಎಸ್‌ಕೆ 27 ರನ್ ಗೆಲುವು ದಾಖಲಿಸಿದೆ. ಚೆನ್ನೈ ನೀಡಿದ 168 ರನ್ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್  140 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.

ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ನಾಯಕ ಡೇವಿಡ್ ವಾರ್ನರ್ ಡಕೌಟ್ ಆದರು. ಮೊದಲ ಓವರ್‌ನ 2ನೇ ಎಸೆತದಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಫಿಲಿಪ್ ಸಾಲ್ಟ್ ಹಾಗೂ ಮಿಚೆಲ್ ಮಾರ್ಶ್ ಜೊತೆಯಾಟವೂ ಹೆಚ್ಚು ಹೊತ್ತು ಇರಲಿಲ್ಲ. ಸಾಲ್ಟ್ 17 ರನ್ ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಮಾರ್ಶ್ 5 ರನ್ ಸಿಡಿಸಿ ಔಟಾದರು.

ವಿರಾಟ್ ಔಟಾಗಿದ್ದನ್ನು ಸಂಭ್ರಮಿಸಿದ ಆಫ್ಘಾನಿ ಕ್ರಿಕೆಟಿಗ ನವೀನ್ ಉಲ್-ಹಕ್‌..! ನೆಟ್ಟಿಗರ ಪ್ರತಿಕ್ರಿಯೆ ವೈರಲ್

ಮನೀಶ್ ಪಾಂಡೆ ಹಾಗೂ ರೀಲೆ ರೊಸೊ ಜೊತೆಯಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ ಚೇತರಿಸಿಕೊಂಡಿತು. ಡೆಲ್ಲಿ ತಂಡದಲ್ಲಿ ಮತ್ತೆ ಗೆಲುವಿನ ಆಸೆ ಚಿಗುರತೊಡಗಿತು. ಆದರೆ ಪಾಂಡೆ ರನ್ ರೇಟ್ ಕಳಪೆಯಾಗಿತ್ತು. 27 ರನ್ ಸಿಡಿಸಿ ಪಾಂಡೆ ಔಟಾದರು. ರಿಲೋ ರೂಸೋ 35 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ದಿಟ್ಟ ಹೋರಾಟ ನೀಡಿದ ಅಕ್ಸರ್ ಪಟೇಲ್ 12 ಎಸೆತದಲ್ಲಿ 21 ರನ್ ಸಿಡಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 48 ರನ್ ಅವಶ್ಯಕತೆ ಇತ್ತು.ಅಷ್ಟರಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಘಟಾನುಘಟಿ ಬ್ಯಾಟ್ಸ್‌ಮನ್ ಪೆವಿಲಿಯನ್ ಸೇರಿದ್ದರು. ಹೀಗಾಗಿ ಡೆಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿತು.

ಅಮನ್ ಹಕಿಮ್ ಖಾನ್ ಹಾಗೂ ಲಲಿತ್ ಯಾದವ್ ಹೋರಾಟ ಸಾಕಾಗಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ನಷ್ಟಕ್ಕೆ 140 ರನ್ ಸಿಡಿಸಿತು. ಇದರೊಂದಿಗೆ ಚನ್ನೈ ಸೂಪರ್ ಕಿಂಗ್ಸ್ 27 ರನ್ ಗೆಲುವ ದಾಖಲಿಸಿತು. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಚೆನ್ನೈ ಪಾಯಿಂಟ್ಸ್ 15ಕ್ಕೇರಿದೆ. 

RCB ಮಣಿಸಿ 2 IPL ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಮುಂಬೈ ಇಂಡಿಯನ್ಸ್‌

ಚೆನ್ನೈ ಸೂಪರ್ ಕಿಂಗ್ಸ್: ಚೆನ್ನೈ ಸೂಪರ್ ಕಿಂಗ್ಸ್ ಕೂಡ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಡೇವಿಡ್ ಕಾನ್ವೇ ಕೇವಲ 10 ರನ್ ಸಿಡಿಸಿ ಔಟಾದರು. ಇತ್ತ ರುತುರಾಜ್ ಗಾಯಕ್ವಾಡ್ 24 ರನ್ ಕಾಣಿಕೆ ನೀಡಿದರು. ಅಜಿಂಕ್ಯ ರಹಾನೆ 21 ರನ್ ಸಿಡಿಸಿ ನಿರ್ಗಮಿಸಿದ್ದಾರೆ. ಮೊಯಿನ್ ಆಲಿ 7 ರನ್  ಸಿಡಿಸಿ ನಿರಾಸೆ ಅನುಭವಿಸಿದರು. ಮೂರು ಸಿಕ್ಸರ್ ಮೂಲಕ ಅಬ್ಬರಿಸಿದ ಶಿವಂ ದುಬೆ 25 ರನ್ ಕಾಣಿಕೆ ನೀಡಿದರು.ಅಂಬಾಯಿಟು ರಾಯುಡು 23 ರನ್ ಸಿಡಿಸಿ ಔಟಾದರು. ರವೀಂದ್ರ ಜಡೇಜಾ 21 ರನ್ ಸಿಡಿಸಿದರು. ಎಂ.ಎಸ್.ಧೋನಿ 9 ಎಸೆತದಲ್ಲಿ 30 ರನ್ ಸಿಡಿಸಿದರು. ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್ ನಷ್ಟಕ್ಕೆ 167 ರನ್ ಸಿಡಿಸಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌
ಕುಲ್ದೀಪ್-ಪ್ರಸಿದ್ದ್ ಮಾರಕ ದಾಳಿ; ಏಕದಿನ ಸರಣಿ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಗುರಿ