ಅದೊಂದೇ ವರ್ಷದಲ್ಲಿ 2 ಸಲ ಹಾರ್ಟ್ ಬ್ರೇಕ್ ಆಗಿದೆ: ಆ ವಿಷಯದ ಬಗ್ಗೆ ಮೊದಲ ಸಲ ಮನಬಿಚ್ಚಿ ಮಾತಾಡಿದ ಕೊಹ್ಲಿ!

ವಿರಾಟ್ ಕೊಹ್ಲಿ ಅವರ ಹಾರ್ಟ್ ಬ್ರೇಕ್ ಕುರಿತ ವಿಡಿಯೋ ವೈರಲ್ ಆಗಿದೆ. 2016ರಲ್ಲಿ ಕ್ರಿಕೆಟ್‌ನಲ್ಲಿ ಎರಡು ಬಾರಿ ಹೃದಯಭಗ್ನವಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ, ಅದರಲ್ಲಿ ಟಿ20 ವಿಶ್ವಕಪ್ ಸೆಮಿಫೈನಲ್ ಸೋಲು ಮತ್ತು ಐಪಿಎಲ್ ಫೈನಲ್ ಸೋಲು ಸೇರಿವೆ.


ಬೆಂಗಳೂರು: ಟೀಂ ಇಂಡಿಯಾ ರನ್ ಮಷೀನ್ ಎಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ, ಸದ್ಯ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿದಿದ್ದಾರೆ. 18 ಐಪಿಎಲ್ ಆವೃತ್ತಿಯಲ್ಲೂ ಕೇವಲ ಒಂದೇ ತಂಡವನ್ನು ಪ್ರತಿನಿಧಿಸಿದ ಏಕೈಕ ಬ್ಯಾಟರ್ ಎನ್ನುವ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರದ್ದು. ಇನ್ನು ವಿರಾಟ್ ಕೊಹ್ಲಿ ತಮಗೆ ಹಾರ್ಟ್ ಬ್ರೇಕ್ ಆದ ಘಟನೆಯನ್ನು ಮೆಲುಕು ಹಾಕಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅರೇ ವಿರಾಟ್ ಕೊಹ್ಲಿಗೆ ಹಾರ್ಟ್ ಬ್ರೇಕ್ ಆಗಿದೆಯಾ? ಅನುಷ್ಕಾ ಶರ್ಮಾ ಜತೆಗೂಡಿ ಸುಂದರ ಸಂಸಾರ ನಡೆಸುತ್ತಿರುವ ವಿರುಷ್ಕಾ ಜೋಡಿಗೆ ವಮಿಕಾ ಹಾಗೂ ಅಕಾಯ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಒಲವನ್ನು ಹೊಂದಿದ್ದಾರೆ. ಹೀಗಿರುವ ವಿರಾಟ್ ಕೊಹ್ಲಿಗೆ ಹಾರ್ಟ್ ಬ್ರೇಕ್ ಆಗಿದ್ದು ನಿಜನಾ ಅಂತ ನೀವು ಕನ್‌ಪ್ಯೂಸ್ ಆಗಲು ಹೋಗಬೇಡಿ. ಇದು ಕ್ರಿಕೆಟ್‌ಗೆ ಸಂಬಂಧಿಸಿದ್ದ ವಿಷಯ.

Latest Videos

ನನ್ನ ಹಾರ್ಟ್‌ಬ್ರೇಕ್ ಎರಡು ಬಾರಿ ಆಗಿದೆ, ಅದೂ ಒಂದೇ ವರ್ಷದಲ್ಲಿ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಸುರೇಶ್ ರೈನಾ ಹಾಗೂ ಮತ್ತೋರ್ವ ಹೋಸ್ಟ್‌ ಜತೆಗಿನ ಮಾತುಕತೆ ವೇಳೆಯಲ್ಲಿ ವಿರಾಟ್ ಕೊಹ್ಲಿ, ತಮಗೆ 2016ರಲ್ಲಿ ಕ್ರಿಕೆಟ್‌ನಲ್ಲಿ ಎರಡು ಬಾರಿ ಹೃದಯಭಗ್ನವಾಗಿದೆ ಎಂದು ಹೇಳಿದ್ದಾರೆ.

ಆರ್‌ಸಿಬಿ ಎದುರಿನ ಪಂದ್ಯಕ್ಕೂ ಮುನ್ನ ಖಡಕ್ ಸಂದೇಶ ಕೊಟ್ಟ ಮುಂಬೈ ಇಂಡಿಯನ್ಸ್!

ಒಂದನೇಯದ್ದು, 2016ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೇಳೆಯಲ್ಲಿ. ಯಾಕೆಂದರೆ ಆಗ ಏನೇ ಬಂದರು ನಾನು ಎದುರಿಸುತ್ತೇನೆ ಎನ್ನುವಷ್ಟರ ಮಟ್ಟಕ್ಕೆ ಸಿದ್ದನಾಗಿದ್ದ ಸಂದರ್ಭವದು. ನೋ ಬಾಲ್ ಹಾಗೂ ಕೆಲವೊಂದು ಹಿನ್ನಡೆಗಳಿಂದಾಗಿ ನಾವು ಸೆಮಿಫೈನಲ್‌ನಲ್ಲಿ ಪಂದ್ಯವನ್ನು ಸೋತೆವು. ಆ ಶಾಕ್‌ನಿಂದ ಹೊರಬರಲು ತುಂಬಾ ಸಮಯ ಬೇಕಾಯಿತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. 2016ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಅದ್ಭುತ ಪ್ರದರ್ಶನದ ಮೂಲಕ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಸೆಮೀಸ್‌ನಲ್ಲಿ ವೆಸ್ಟ್‌ ಇಂಡೀಸ್ ಎದುರು ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು.

ಇನ್ನು ಎರಡನೆಯದ್ದು 2016ರ ಐಪಿಎಲ್ ಫೈನಲ್ ಸೋತಿದ್ದು. ಎಂತಹ ಅದ್ಭುತ ಪ್ರದರ್ಶನದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್ ಪ್ರವೇಶಿಸಿತ್ತು. ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ 200+ ರನ್ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಸ್ಪೋಟಕ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ನಾವು 100+ ಜತೆಯಾಟವಾಡಿದ್ದೆವು, ಇನ್ನು ಎಬಿ ಡಿವಿಲಿಯರ್ಸ್ ಔಟ್‌ ಆದಾಗ ನಮಗೆ 42 ಎಸೆತಗಳಲ್ಲಿ ಕೇವಲ 68 ರನ್‌ಗಳ ಅಗತ್ಯವಿತ್ತು. ಈಗಿನ ಕ್ರಿಕೆಟ್‌ ನೋಡಿದರೆ, 8 ವಿಕೆಟ್ ಕೈಯಲ್ಲಿದ್ದಾಗಲೂ ಪಂದ್ಯ ಸೋಲಲು ಸಾಧ್ಯವೇ? ಇದಕ್ಕಿಂತ ತುಂಬಾ ಹಾರ್ಟ್‌ ಬ್ರೇಕಿಂಗ್ ಆದ ಘಟನೆಯೆಂದರೆ, ಪಂದ್ಯ ಮುಗಿಸಿ ನಾವು ಖಾಸಗಿ ಹೋಟೆಲ್‌ಗೆ ತೆರಳಿದೆವು. ಹೋಟೆಲ್‌ನ ಬೇಸ್‌ಮೆಂಟ್ ಏರಿಯಾದಲ್ಲಿ ಭರ್ಜರಿ ಪಾರ್ಟಿ ಮಾಡಲು ಎಲ್ಲಾ ರೀತಿಯ ಸೆಟಪ್ ಮಾಡಲಾಗಿತ್ತು. ಆದರೆ ಅಲ್ಲಿ ಬರೀ 4 ಜನರಿದ್ದೆವು. ಎಲ್ಲರಿಗೂ ಎಷ್ಟು ಹಾರ್ಟ್ ಬ್ರೇಕಿಂಗ್ ಆಗಿತ್ತೆಂದರೇ, ಯಾರೂ ಹೋಟೆಲ್‌ ರೂಮ್‌ನಿಂದ ಕೆಳಗಿಳಿದು ಬರಲು ತಯಾರಿರಲಿಲ್ಲ. ಇವೆರಡು ನನ್ನ ಜೀವನದ ಹಾರ್ಟ್‌ ಬ್ರೇಕಿಂಗ್ ಕ್ಷಣಗಳು ಎಂದು ವಿರಾಟ್ ಕೊಹ್ಲಿ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: CSK ಸೋಲಿಸಿ ಡೆಲ್ಲಿಗೆ ಗೆಲುವು ತಂದುಕೊಟ್ಟ ಧೋನಿ-ವಿಜಯ್ ಶಂಕರ್! ಫ್ಯಾನ್ಸ್ ಗರಂ!

ಸದ್ಯ ವಿರಾಟ್ ಕೊಹ್ಲಿ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದು, ಇದೀಗ ಏಪ್ರಿಲ್ 07ರಂದು ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ದ ಕಣಕ್ಕಿಳಿಯಲು ರೆಡಿಯಾಗಿದ್ದಾರೆ.

 

click me!