
ರಾಂಚಿ(ನ.21) ಎಂ.ಎಸ್.ಧೋನಿಯನ್ನು 2024ರ ಐಪಿಎಲ್ ಟೂರ್ನಿಯಲ್ಲಿ ನೋಡಲು ಅಭಿಮಾನಿಗಳು ಕಾದುಕುಳಿತಿದ್ದಾರೆ. ಇತ್ತ ಧೋನಿ ಕೂಡ ಐಪಿಎಲ್‌ನಿಂದ ನಿವತ್ತಿಯಾಗಿಲ್ಲ ಅನ್ನೋದನ್ನು ಇತ್ತೀಚೆಗಷ್ಟೇ ಮತ್ತೊಮ್ಮೆ ಸ್ಪಷ್ಟಪಡಿಸಿದ್ದರು. ಹೀಗಾಗಿ 2024ರ ಐಪಿಎಲ್ ಟೂರ್ನಿಯಲ್ಲಿ ಧೋನಿಯನ್ನು ಮೈದಾನದಲ್ಲಿ ನೋಡಿ ಕಣ್ತುಂಬಿಕೊಳ್ಳಲು ಸಜ್ಜಾಗಿದ್ದಾರೆ. ಆದರೆ ಸದ್ಯದ ವಿಡಿಯೋವೊಂದು ಅಭಿಮಾನಿಗಳ ಆತಂಕ ಹೆಚ್ಚಿಸಿದೆ. ಧೋನಿ ಮೊಣಕಾಲು ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ ಟೂರ್ನಿ ಆಡೋದು ಅನುಮಾನವಾಗಿದೆ.
ಇತ್ತೀಚೆಗೆ ಧೋನಿ ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಿದ್ದರು. ಸಾಕ್ಷಿ ಧೋನಿ ಜೊತೆ ತೆರಳಿದ ಧೋನಿ ಕುಟುಂಬಸ್ಥರು, ಹಿರಿಯರನ್ನು ಭೇಟಿಯಾಗಿದ್ದರು. ತಾವು ಬಾಲ್ಯದಲ್ಲಿ ಅಜ್ಜ-ಅಜ್ಜಿ ಜೊತೆ ಕಳೆದ ದಿನಗಳನ್ನು ನೆನೆದಿದ್ದಾರೆ. ಇಷ್ಟೇ ಅಲ್ಲ ಆಗಿರುವ ಮಹತ್ತರ ಬದಲಾವಣೆ ಕುರಿತು ಮೆಲುಕು ಹಾಕಿದ್ದಾರೆ. ಇದೇ ವೇಳೆ ಪೂರ್ವಜರ ಕುಟುಂಬಸ್ಥರ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದರು. ಆದರೆ ಧೋನಿ ಪೂರ್ವಜರ ಮನೆ ಹತ್ತುವಾಗ ಹಾಗೂ ಇಳಿಯುವಾಗ ಹರಸಾಹಸ ಪಟ್ಟಿರುವ ವಿಡಿಯೋ ವೈರಲ್ ಆಗಿದೆ. ಮೊಣಕಾಲಿನ ಗಾಯದಿಂದ ಧೋನಿ ಮೆಟ್ಟಿಲುಗಳನ್ನು ಸಲೀಸಾಗಿ ಹತ್ತಲು ಸಾಧ್ಯವಾಗುತ್ತಿಲ್ಲ.
ನನ್ನ ಗರ್ಲ್‌ಫ್ರೆಂಡ್___!ಬ್ಯಾಚುಲರ್ ಹುಡುಗರಿಗೆ ಒಂದೇ ವಾಕ್ಯದಲ್ಲಿ ಪ್ರೀತಿ ಪಾಠ ಹೇಳಿದ ಧೋನಿ!
ಧೋನಿಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಧೋನಿಯ ಮೊಣಕಾಲಿನ ಗಾಯ ತೀವ್ರವಾಗಿದೆ ಅನ್ನೋ ಚರ್ಚೆ ಜೋರಾಗಿದೆ. ನಾಲ್ಕು ತಿಂಗಳಲ್ಲಿ ಧೋನಿ ಗಾಯದಿಂದ ಚೇತರಿಸಿಕೊಂಡು ಐಪಿಎಲ್ ಟೂರ್ನಿ ಆಡುವುದೇ ಅನುಮಾನವಾಗಿದೆ. ಇದಕ್ಕೆ ಪೂರಕವಾಗಿ ಮತ್ತೊಂದು ವಿಡಿಯೋ ಕೂಡ ಆತಂಕ ಹೆಚ್ಚಿಸಿದೆ.
ಧೋನಿ ಆಪ್ತ ಮಿತ್ರ, ಬ್ಯೂಸಿನೆಸ್ ಜೊಗಾರ ಅರುಣ್ ಪಾಂಡೆ ಮನೆಗೆ ಭೇಟಿ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಮನೆಗೆ ಬೇಟಿ ನೀಡಿದ್ದರು. ಈ ವೇಳೆ ಅರುಣ್ ಪಾಂಡೆ ಮನೆಯ ಮೆಟ್ಟಿಲು ಹತ್ತಲು ಧೋನಿ ಹರಸಾಹಸ ಪಟ್ಟಿದ್ದಾರೆ. ಈ ಎರಡೂ ವಿಡಿಯೋ ಕುರಿತು ಅಭಿಮಾನಿಗಳು ಚರ್ಚೆ ಆರಂಭಿಸಿದ್ದಾರೆ. ಧೋನಿ ಚೇತರಿಕೆ ಹಾಗೂ ಐಪಿಎಲ್ ಆಟದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಧೂಳೇಬ್ಬಿಸಿದ ಧೋನಿ ನ್ಯೂ ಲುಕ್..! ಯಾರಿದು ಹೀರೋ ಎಂದ ಫ್ಯಾನ್ಸ್
ಕಳೆದ ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ವಿದಾಯದ ಪ್ರಶ್ನೆಯನ್ನು ಧೋನಿಗೆ ಕೇಳಲಾಗಿತ್ತು. ಈ ವೇಳೆ ನಿವೃತ್ತಿಯಾಗಿಲ್ಲ ಅನ್ನೋದು ಸ್ಪಷ್ಟಪಡಿಸಿದ್ದರು. ಇದೇ ವೇಳೆ ಫಿಟ್ನೆಸ್ ಗಮನದಲ್ಲಿಟ್ಟುಕೊಂಡು ನಿರ್ಧಾರ ಪ್ರಕಟಿಸುವುದಾಗಿ ಧೋನಿ ಹೇಳಿದ್ದರು. ಧೋನಿ ಇಂಜುರಿ ಹಾಗೂ ಫಿಟ್ನೆಸ್ ಐಪಿಎಲ್ ಆಡುವ ಅನುಮಾನ ಹೆಚ್ಚಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.