ವಿಶ್ವಕಪ್ ಬೆನ್ನಲ್ಲೇ ಐಸಿಸಿಯಿಂದ ಹೊಸ ರೂಲ್ಸ್, ವುಮೆನ್ಸ್ ಕ್ರಿಕೆಟ್‌ನಲ್ಲಿ ಮಂಗಳಮುಖಿಯರಿಗೆ ನಿಷೇಧ!

By Suvarna NewsFirst Published Nov 21, 2023, 8:35 PM IST
Highlights

ವಿಶ್ವಕಪ್ 2023 ಟೂರ್ನಿ ಅದ್ಧೂರಿಯಾಗಿ ಅಂತ್ಯಗೊಂಡಿದೆ. ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ವಿಶ್ವಕಪ್ ಟೂರ್ನಿ ಬೆನ್ನಲ್ಲೇ ಐಸಿಸಿ ಹೊಸ ನಿಯಮ ಜಾರಿಗೊಳಿಸಿದೆ. ಐಸಿಸಿ ಮಹಿಳಾ ಕ್ರಿಕೆಟ್‌ನಲ್ಲಿ ಮಂಗಳಮುಖಿಯರನ್ನು ನಿಷೇಧಿಸಿದೆ. ಏನಿದು ಹೊಸ ನಿಯಮ? ಇಲ್ಲಿದೆ ವಿವರ.

ದುಬೈ(ನ.21) ಐಸಿಸಿ ವಿಶ್ವಕಪ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಭಾರತ ತಂಡ ನಿರಾಸೆ ಅನುಭವಿಸಿದರೂ, ಮತ್ತೊಮ್ಮೆ ಬಿಸಿಸಿಐ ಅದ್ಧೂರಿಯಾಗಿ ಟೂರ್ನಿ ಆಯೋಜಿಸಿದೆ. ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಐಸಿಸಿ ಮಹತ್ವದ ನಿಯಮ ಜಾರಿಗೊಳಿಸಿದೆ. ಐಸಿಸಿ ಮಹಿಳಾ ಕ್ರಿಕೆಟ್‌ನಿಂದ ಮಂಗಳಮುಖಿಯರಿಗೆ ನಿಷೇಧ ಹೇರಿದೆ. ಎಲ್ಲಾ ಮಂಗಳಮುಖಿಯರನ್ನು ಮಹಿಳಾ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ ಎಂದು ಐಸಿಸಿ ಹೇಳಿದೆ. ನ್ಯಾಯಸಮ್ಮತೆ ಕ್ರಿಕೆಟ್ ಟೂರ್ನಿಗಾಗಿ  ಈ ನಿರ್ಧಾರ ಮಾಡಲಾಗಿದೆ ಎಂದು ಐಸಿಸಿ ಹೇಳಿದೆ.

ಯಾವುದೇ ಪ್ಲೇಯರ್ ಪುರುಷನಿಂದ ಮಹಿಳೆಯಾಗಿ ಬದಲಾಗಿದ್ದರೆ ಅಥವಾ ಯಾವುದೇ ರೀತಿಯ ಸರ್ಜರಿ ಮಾಡಿ ಸಂಪೂರ್ಣವಾಗಿ ಮಹಿಳೆಯಾಗಿ ಬದಲಾಗಿದ್ದರೂ ಮಹಿಳಾ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ. ಕಳೆದ 9 ತಿಂಗಳಿನಿಂದ ಕ್ರಿಕೆಟ್ ತಜ್ಞರು, ಮಾಜಿ ಕ್ರಿಕೆಟಿಗರು, ಅಂತಾರಾಷ್ಟ್ರೀಯ ಕಾನೂನು ಸಲಹೆಗಾರರು ಸೇರಿದಂತೆ ಹಲವರು ಬಳಿ ಚರ್ಚಿಸಿ ಹೊಸ ಐಸಿಸಿ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ಐಸಿಸಿ ಹೇಳಿದೆ.

ಭಾವುಕರಾಗಿದ್ದ ಕೊಹ್ಲಿ-ರೋಹಿತ್ ಮುಖದಲ್ಲಿ ನಗು, ಮೋದಿ ಜೊತೆ ಕೈ ಕೈ ಹಿಡಿದ ಫೋಟೋ ವೈರಲ್!

ಮಹಿಳಾ ಕ್ರಿಕೆಟ್‌ನ ಸುರಕ್ಷತೆ, ನ್ಯಾಯಸಮ್ಮತೆ, ಸಮಗ್ರತೆ ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ಪ್ರಕಟಿಸಲಾಗಿದೆ. ಹೊಸ ನಿಯಮದ ಪ್ರಕಾರ  2 ವರ್ಷದಲ್ಲಿ ಮಹಿಳೆಯರ ಲಿಂಗ ಅರ್ಹತೆಯನ್ನು ಪರೀಕ್ಷಿಸಲಾಗುತ್ತದೆ. ಪುರಷರಾಗಿ ಬಳಿಕ ಮಹಿಳೆಯಾಗಿ ಬದಲಾಗುವುದರಿಂದ ಅವರಲ್ಲಿ ಪುರಷರ ಶಕ್ತಿ ಇರಲಿದೆ. ಇದರಿಂದ ಬೌಲಿಂಗ್ ವೇಗ, ಶಕ್ತಿ ಸಾಮರ್ಥ್ಯ ಹೆಚ್ಚಿರುತ್ತದೆ. ಮಂಗಳಮುಖಿಯರು ಮಹಿಳಾ ಕ್ರಿಕೆಟ್‌ನಲ್ಲಿ ಆಡುವುದರಿಂದ ಮಹಿಳಾ ಕ್ರಿಕೆಟ್ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಐಸಿಸಿ ಹೇಳಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಕೆನಡಾದ ಮಂಗಳಮುಖಿ ಪ್ಲೇಯರ್ ಡೇನಿಯಲ್ ಮೆಕ್‌ಗೆಹೆ ಬ್ರೆಜಿಲ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದರು. ಆದರೆ ಇದು ವಿವಾದಕ್ಕೆ ಕಾರಣವಾಗಿತ್ತು. ಇಷ್ಟೇ ಆಡುವ ಅವಕಾಶವೂ ಸಿಗಲಿಲ್ಲ. ಇದರ ಬೆನ್ನಲ್ಲೇ ಐಸಿಸಿ ನಿಯಮ ಪರಿಷ್ಕರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಿತ್ತು. ಈಜು, ಸೈಕ್ಲಿಂಗ್ ಸೇರಿದಂತೆ ಹಲವು ಕ್ರೀಡೆಯಲ್ಲಿ ಮಹಿಳಾ ವಿಭಾಗದಲ್ಲಿ ಮಂಗಳಮುಖಿಯರು ಸ್ಪರ್ಧಿಸುವುದನ್ನು ನಿಷೇಧಿಸಲಾಗಿದೆ. 

29 ಓವರಲ್ಲಿ 1 ಫೋರ್ ಹೊಡೆಯಲಾಗದ ಪಿಚ್ ಯಾಕೆ ಬೇಕಿತ್ತು? ಬಿಸಿಸಿಐ ವಿರುದ್ದ ನಟ ಕಿಶೋರ್ ಗರಂ!

ಐಸಿಸಿ ಹಲವು ನಿಯಮಗಳು ಕಾಲಕ್ಕೆ ತಕ್ಕಂತೆ ಬದಲಾಗಿದೆ. ಪ್ರಮುಖವಾಗಿ ಆಧುನಿಕ ಕ್ರಿಕೆಟ್‌ನಲ್ಲಿ ಸ್ಪರ್ಧೆ ಹಾಗೂ ಅಭಿಮಾನಿಗಳಲ್ಲಿನ ರೋಚಕತೆ ಹೆಚ್ಚಿಸಲು ಹಲವು ನಿಯಮಗಳನ್ನು ಬದಲಿಸಿದೆ. ಇದೀಗ ಮಹಿಳಾ ಕ್ರಿಕೆಟ್ ಹೆಚ್ಚು ಪಂದ್ಯಗಳು ಆಯೋಜನೆಗೊಳ್ಳುತ್ತಿದೆ. ಹೀಗಾಗಿ ಭಾರಿ ವಿವಾದಕ್ಕೂ ಮುನ್ನವೇ ಐಸಿಸಿ ನಿಯಮ ಬದಲಿಸಿದೆ.

click me!