ನಡೆದಾಡಲೂ ಕಷ್ಟಪಡುವ ವಿನೋದ್ ಕಾಂಬ್ಳಿ ಕೈಹಿಡಿದು ವಾಂಖೇಡೆ ಮೈದಾನಕ್ಕೆ ಕರೆತಂದ ಪತ್ನಿ ಆಂಡ್ರಿಯಾ!

Published : Jan 20, 2025, 11:50 AM IST
ನಡೆದಾಡಲೂ ಕಷ್ಟಪಡುವ ವಿನೋದ್ ಕಾಂಬ್ಳಿ ಕೈಹಿಡಿದು ವಾಂಖೇಡೆ ಮೈದಾನಕ್ಕೆ ಕರೆತಂದ ಪತ್ನಿ ಆಂಡ್ರಿಯಾ!

ಸಾರಾಂಶ

ವಾಂಖೇಡೆ ಕ್ರೀಡಾಂಗಣದ 50ನೇ ವರ್ಷಾಚರಣೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ವಿನೋದ್ ಕಾಂಬ್ಳಿ ಪತ್ನಿಯ ಸಹಾಯದಿಂದ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಹಲವು ಹಿರಿಯ ಕ್ರಿಕೆಟಿಗರಿಗೆ ಸನ್ಮಾನಿಸಲಾಯಿತು.

ಮುಂಬೈ: ವಾಂಖೇಡೆ ಕ್ರೀಡಾಂಗಣಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿಎ) ಸುವರ್ಣ ಸಂಭ್ರಮಾಚರಣೆ ನಡೆಸುತ್ತಿದೆ. ಇನ್ನು ಇತ್ತೀಚಿಗಿನ ಕೆಲ ವರ್ಷಗಳಿಂದ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಕೂಡಾ ಈ ಸಮಾರಂಭದಲ್ಲಿ ಹಾಜರಾಗಿ ಗಮನ ಸೆಳೆದಿದ್ದಾರೆ. ಸರಿಯಾಗಿ ಓಡಾಡಲೂ ಕಷ್ಟಪಡುವ ವಿನೋದ್ ಕಾಂಬ್ಳಿಗೆ ಪತ್ನಿ ಆಂಡ್ರಿಯಾ ಕೈಹಿಡಿದು ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಮುಂಬೈ ಮೂಲದ ಪ್ರತಿಭಾನ್ವಿತ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ, ಅನಾರೋಗ್ಯದ ಸಮಸ್ಯೆಯಿಂದ ಕಳೆದ ತಿಂಗಳು ಆಸ್ಪತ್ರೆಗೆ ದಾಖಲಾಗಿದ್ದರು. ಪುಣೆಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ಸಾಗಿದ್ದ ವಿಚಾರ ಗೊತ್ತೇ ಇದೆ. ಈಗಲೂ ಸರಿಯಾಗಿ ಓಡಾಡಲು ವಿನೋದ್ ಕಾಂಬ್ಳಿ ಕಷ್ಟಪಡುತ್ತಿದ್ದಾರೆ. ಇದೆಲ್ಲದರ ನಡುವೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್, ವಾಂಖೇಡೆ ಮೈದಾನದ ಸುವರ್ಣ ಮಹೋತ್ಸವ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ವಿನೋದ್ ಕಾಂಬ್ಳಿಗೆ ಆಹ್ವಾನ ನೀಡಿತ್ತು. ಈ ಕಾರ್ಯಕ್ರಮಕ್ಕೆ ವಿನೋದ್ ಕಾಂಬ್ಳಿ ಅವರನ್ನು ಪತ್ನಿ ಆಂಡ್ರಿಯಾ ಹೆವಿಟ್‌ ಕೈಹಿಡಿದುಕೊಂಡೇ ಸ್ಟೇಡಿಯಂಗೆ ಕರೆದುಕೊಂಡು ಬಂದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಸೊಕ್ಕು ಮಾಡಿದ ಸಂಜು ಸ್ಯಾಮ್ಸನ್‌ಗೆ ಬಿಗ್ ಶಾಕ್? ತನಿಖೆಗೆ ಮುಂದಾದ ಬಿಸಿಸಿಐ!

ಇನ್ನು ಕೆಲದಿನಗಳ ಹಿಂದಷ್ಟೇ ಭಾರತ ಹಾಗೂ ಮುಂಬೈ ತಂಡವನ್ನು ಪ್ರತಿನಿಧಿಸಿದ ಕ್ರಿಕೆಟಿಗರಿಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿತ್ತು. ಈ ಸಂದರ್ಭದಲ್ಲೂ ಹಲವು ಹಿರಿಕಿರಿಯ ಮುಂಬೈ ಮೂಲದ ಕ್ರಿಕೆಟಿಗರು ಹಾಜರಿದ್ದರು. ಆ ಕಾರ್ಯಕ್ರಮದಲ್ಲೂ ವಿನೋದ್ ಕಾಂಬ್ಳಿ ಭಾಗವಹಿಸಿದ್ದರು.

ಟೀಂ ಇಂಡಿಯಾ ಜೆರ್ಸಿ ತೊಟ್ಟು ವಿನೋದ್ ಕಾಂಬ್ಳಿ ಆಸ್ಪತ್ರೆಯಿಂದ ಡಿಸ್ಚಾರ್ಜ್! ಮಹತ್ವದ ಸಂದೇಶ ಸಾರಿದ ಮಾಜಿ ಕ್ರಿಕೆಟರ್

50ರ ಸಂಭ್ರಮ: ಮುಂಬೈ ಮೈದಾನ ಸಿಬ್ಬಂದಿಗೆ ಅಕ್ಕಿ, ಬ್ರಶ್‌, ಪೆನ್‌, ಪೇಸ್ಟ್‌ ಗಿಫ್ಟ್‌!

ಮುಂಬೈ: ವಾಂಖೇಡೆ ಕ್ರೀಡಾಂಗಣಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿಎ) ಸುವರ್ಣ ಸಂಭ್ರಮಾಚರಣೆ ನಡೆಸುತ್ತಿದೆ. ಇದರ ಭಾಗವಾಗಿ ಕ್ರೀಡಾಂಗಣದ 178 ಸಿಬ್ಬಂದಿಗೆ 30ಕ್ಕೂ ಹೆಚ್ಚು ವಸ್ತುಗಳಿರುವ ಬೃಹತ್‌ ಕಿಟ್‌ ಉಡುಗೊರೆಯಾಗಿ ನೀಡಿದೆ. ಇದರಲ್ಲಿ ಅಕ್ಕಿ, ಗೋಧಿ, ಬ್ಲಾಂಕೆಟ್‌, ಬ್ರಶ್‌, ಪೆನ್‌, ಶೂ, ಬೆಡ್‌ಶೀಟ್‌, ಟಿ ಶರ್ಟ್‌, ಜಾಕೆಟ್‌, ಸನ್‌ಗ್ಲಾಸ್‌, ಕೊಡೆ, ಬಾಟಲ್‌ ಸೇರಿ ಅಗತ್ಯ ವಸ್ತುಗಳಿವೆ. ‘ಸಿಬ್ಬಂದಿಗೆ ಹಣ ಯಾವಾಗಲೂ ಕೊಡುತ್ತಿರುತ್ತೇವೆ. ಆದರೆ ಈ ಬಾರಿ ಭಿನ್ನವಾಗಿರಲಿ ಎಂದು ಅತ್ಯಗತ್ಯ ವಸ್ತುಗಳನ್ನು ನೀಡಿದ್ದೇವೆ’ ಎಂದು ಎಂಸಿಎ ಅಧ್ಯಕ್ಷ ಅಜಿಂಕ್ಯಾ ನಾಯ್ಕ್‌ ತಿಳಿಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ