ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಒಂದು ವಿಡಿಯೋ ವೈರಲ್ ಆಗಿದ್ದು, ಯಾರು ಸರಿ, ಯಾರು ತಪ್ಪು ಎನ್ನುವ ಚರ್ಚೆ ನಡೆಯುತ್ತಿದೆ. ಅದೃಷ್ಟ, ಶ್ರಮವಹಿಸಿ ದುಡಿಯುವವನ ಕೈ ಹಿಡಿದ್ರೆ ಏನೆಲ್ಲ ಮ್ಯಾಜಿಕ್ ಆಗಬಲ್ಲದು ಎಂಬುದಕ್ಕೆ ಇವರಿಬ್ಬರೇ ಸಾಕ್ಷ್ಯವಾಗಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ ವಿನೋದ್ ಕಾಂಬ್ಳಿ (Team India former captain Vinod Kambli) ಮತ್ತೊಮ್ಮೆ ಚರ್ಚೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (master blaster Sachin Tendulkar) ಜೊತೆ ಕಾರ್ಯಕ್ರಮವೊಂದರಲ್ಲಿ ವಿನೋದ್ ಕಾಂಬ್ಳಿ ಕಾಣಿಸಿಕೊಂಡಿದ್ದರು. ಕಾಂಬ್ಳಿ ಬಳಿ ಬಂದ ಸಚಿನ್, ಅವರ ಕೈಕುಲುಕಿ ಮಾತನಾಡಿಸಿದ್ರೆ, ಆರಂಭದಲ್ಲಿ ಗೊಂದಲಕ್ಕೊಳಗಾದ ಕಾಂಬ್ಳಿ ನಂತ್ರ ಸಚಿನ್ ಅವರನ್ನು ಗುರುತಿಸಿದ್ದರು. ಹಾಗೆಯೇ ಅಲ್ಲೇ ಕುಳಿತುಕೊಳ್ಳುವಂತೆ ಹಠ ಹಿಡಿದಿದ್ದರು. ಆದ್ರೆ ಆಯೋಜಕರು ಅಲ್ಲಿಗೆ ಬಂದು ಕಾಂಬ್ಳಿ ಮನಸ್ಸು ಒಲಿಸಿದ್ದರು. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಸಚಿನ್ ವರ್ತನೆ ಸಾಕಷ್ಟು ಟ್ರೋಲ್ ಆಗಿತ್ತು.
ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಬಾಲ್ಯದ ಗೆಳೆಯರು. ಒಂದೇ ಗುರುವಿನ ಬಳಿ ವಿದ್ಯೆ ಕಲಿತವರು. ಆದ್ರೆ ಇಬ್ಬರ ಮಧ್ಯೆ ಅದೆಷ್ಟು ವ್ಯತ್ಯಾಸವಿದೆ. ಫಿಟ್ ಆಗಿರುವ ಸಚಿನ್ ಮುಂದೆ ಕಾಂಬ್ಳಿ ವಯಸ್ಸಾದವರಂತೆ ಕಾಣ್ತಿದ್ದಾರೆ. ಕಾಂಬ್ಳಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎನ್ನುವ ಸುದ್ದಿ ಇದೆ. ಅತಿಯಾದ ಕುಡಿತವೇ ಇದಕ್ಕೆ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಾಂಬ್ಳಿ ಆರೋಗ್ಯ ಮಾತ್ರವಲ್ಲ ನೆಟ್ ವರ್ಥ್ ವಿಷ್ಯದಲ್ಲೂ ಅವರು ಸಚಿನ್ ಗಿಂತ ಬಲು ಹಿಂದಿದ್ದಾರೆ ಕಾಂಬ್ಳಿ.
ಐಪಿಎಲ್‌ಗೆ ಬೇಡವಾದ ವಿದೇಶಿ ಕ್ರಿಕೆಟಿಗರಿಗೆ ಪಾಕ್‌ನಲ್ಲಿ ಬೇಡಿಕೆ!
ನೋಡ್ತಾ ನೋಡ್ತಾ ಎಲ್ಲ ಬದಲಾಯ್ತು : ಮೊದಲೇ ಹೇಳಿದಂತೆ ಕಾಂಬ್ಳಿ ಮತ್ತು ಸಚಿನ್ ತೆಂಡೂಲ್ಕರ್ ಇಬ್ಬರೂ ಒಂದೇ ಗುರುವಿನಿಂದ ಕ್ರಿಕೆಟ್ ಕಲಿತವರು. ಇಬ್ಬರೂ ಮುಂಬೈನಲ್ಲಿ ರಮಾಕಾಂತ್ ಅಚ್ರೇಕರ್ ಅವರಿಂದ ಕ್ರಿಕೆಟ್ ತರಬೇತಿ ಪಡೆದಿದ್ದಾರೆ. ಬಾಲ್ಯದ ಸ್ನೇಹಿತರ ವಯಸ್ಸು ಈಗ 55 ವರ್ಷ. ತರಬೇತಿ ನಂತ್ರ ಸಚಿನ್ ತೆಂಡೂಲ್ಕರ್ 1989ರಲ್ಲಿ ಕ್ರಿಕೆಟ್ ವೃತ್ತಿ ಶುರು ಮಾಡಿದ್ದರು. ವಿನೋದ್ ಕಾಂಬ್ಳಿ ಟೀಂ ಇಂಡಿಯಾಕ್ಕೆ ಸೇರಿದ್ದು 1991ರಲ್ಲಿ. ಈ ಸಮಯದಲ್ಲಿ ಕಾಂಬ್ಳಿಯನ್ನು ಸಚಿನ್ ಜೊತೆ ಹೋಲಿಕೆ ಮಾಡಲಾಗ್ತಿತ್ತು. ಇನ್ನೊಂದು ಸಚಿನ್ ಅಂದ್ರೆ ಅದು ಕಾಂಬ್ಳಿ ಎಂದೇ ಬಿಂಬಿಸಲಾಗ್ತಾಯಿತ್ತು. ಆದ್ರೆ ನೋಡ್ತಾ ನೋಡ್ತಾ ಇದ್ದಂತೆ ಸಚಿನ್ ಆಕಾಶದೆತ್ತರಕ್ಕೆ ಸಾಗಿದ್ರೆ ಕಾಂಬ್ಳಿ ಜೀವನ ಪಾತಾಳಕ್ಕೆ ಕುಸಿದಿತ್ತು. ಆರ್ಥಿಕ ಸಂಕಷ್ಟ ಎದುರಿಸಬೇಕಾಯ್ತು. ಈಗ ಕಾಂಬ್ಳಿ ಗುರುತಿಸೋದೆ ಕಷ್ಟವಾಗಿದೆ.
undefined
ಸಚಿನ್ ಬಳಿ ಇದೆ ಇಷ್ಟು ಆಸ್ತಿ : ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್, ವೃತ್ತಿಯಲ್ಲಿ ತಿರುಗಿ ನೋಡಿದ್ದೇ ಇಲ್ಲ. ಸೋಲನ್ನೂ ಸವಾಲಾಗಿ ಸ್ವೀಕರಿಸಿ ಜಯಿಸಿದ ನಾಯಕ ಸಚಿನ್. ವರದಿ ಪ್ರಕಾರ ಸಚಿನ್ ಒಟ್ಟೂ 165 ಮಿಲಿಯನ್ ಡಾಲರ್ ಅಂದ್ರೆ 1400 ಕೋಟಿ ಆಸುಪಾಸು ಆಸ್ತಿಯನ್ನು ಹೊಂದಿದ್ದಾರೆ. ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ನಂತ್ರವೂ ಸಚಿನ್ ಗಳಿಕೆ ನಿಂತಿಲ್ಲ. ಬೇರೆ ಬೇರೆ ಮೂಲಗಳಿಂದ ಸಚಿನ್ ಸಂಪಾದನೆ ಮುಂದುವರೆಸಿದ್ದಾರೆ. ಅನೇಕ ಕಂಪನಿಗಳ ಜಾಹೀರಾತಿನಲ್ಲಿ ಸಚಿನ್ ಮಿಂಚುತ್ತಿದ್ದಾರೆ. ಬ್ಯುಸಿನೆಸ್ನಲ್ಲೂ ಸಚಿನ್ ಹಿಂದೆ ಬಿದ್ದಿಲ್ಲ. ಬಟ್ಟೆ ಬ್ರ್ಯಾಂಡ್ ಟ್ರೂ ಬ್ಲೂ ಮಾಲೀಕರಾಗಿರುವ ಅವರು ಮುಂಬೈ ಮತ್ತು ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಹೊಂದಿದ್ದಾರೆ. ಐಷಾರಾಮಿ ಕಾರುಗಳನ್ನು ಹೊಂದಿರುವ ಸಚಿನ್, ಮುಂಬೈನಿಂದ ಲಂಡನ್ವರೆಗೆ ಮನೆಗಳನ್ನು ಹೊಂದಿದ್ದಾರೆ.
'ಆದಷ್ಟು ಬೇಗ ಡಾಕ್ಟರ್ ಆಗ್ತೇನೆ': ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ಐಪಿಎಲ್‌ನ ಸ್ಟಾರ್
ಪೈಸೆ ಪೈಸೆ ಲೆಕ್ಕ ಹಾಕ್ತಿರುವ ವಿನೋದ್ ಕಾಂಬ್ಳಿ : ಇನ್ನು ಕಾಂಬ್ಳಿ ನೆಟ್ ವರ್ತ್ ಬಗ್ಗೆ ಮಾತನಾಡೋದಾದ್ರೆ ಒಂದು ಕಾಲದಲ್ಲಿ ಕೋಟ್ಯಾಧಿಪತಿಯಾಗಿದ್ದ ಕಾಂಬ್ಳಿ ಈಗ ಪೈಸೆ ಪೈಸೆ ಲೆಕ್ಕ ಹಾಕುವಂತಾಗಿದೆ. ಕ್ರಿಕೆಟ್ ವೃತ್ತಿಯಲ್ಲಿ ಉನ್ನತ ಹಂತದಲ್ಲಿದ್ದ ಸಂದರ್ಭದಲ್ಲಿ ವಿನೋದ್ ಕಾಂಬ್ಳಿ 1.5 ಮಿಲಿಯನ್ ಡಾಲರ್ ಸಂಪತ್ತು ಹೊಂದಿದ್ದರು. ಆದ್ರೆ 2022ರಲ್ಲಿ ಅವರ ಬಳಿ ಕೇವಲ 4 ಲಕ್ಷ ರೂಪಾಯಿ ಉಳಿದಿತ್ತು. ಈಗ ಕಾಂಬ್ಳಿ ಆರ್ಥಿಕ ಜೀವನ ಮತ್ತಷ್ಟು ಹದಗೆಟ್ಟಿದೆ. ಬಿಸಿಸಿಐ ನೀಡುವ ಪಿಂಚಣಿಯಲ್ಲಿ ಅವರು ಜೀವನ ಸಾಗಿಸ್ತಿದ್ದಾರೆ. ಸಂದರ್ಶನವೊಂದರಲ್ಲಿ ಕಾಂಬ್ಳಿ ತಮಗೆ ಬಿಸಿಸಿಐ 30 ಸಾವಿರ ತಿಂಗಳ ಪಿಂಚಣಿ ನೀಡುತ್ತೆ ಎಂದಿದ್ದರು. ಇದನ್ನು ಹೊರತುಪಡಿಸಿ ಕಾಂಬ್ಳಿ ಬಳಿ ಮುಂಬೈ ಬಾಂದ್ರಾದಲ್ಲಿ ಒಂದು ಮನೆಯಿದೆ.