ಐಪಿಎಲ್‌ಗೆ ಬೇಡವಾದ ವಿದೇಶಿ ಕ್ರಿಕೆಟಿಗರಿಗೆ ಪಾಕ್‌ನಲ್ಲಿ ಬೇಡಿಕೆ!

By Naveen Kodase  |  First Published Dec 10, 2024, 12:55 PM IST

ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಆದ ಆಟಗಾರರಿಗೆ ಗಾಳ ಹಾಕಲು ಪಾಕಿಸ್ತಾನ ಸೂಪರ್ ಲೀಗ್ ಮುಂದಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಲಾಹೋರ್‌: ಇತ್ತೀಚೆಗೆ ಐಪಿಎಲ್‌ ಹರಾಜಿನಲ್ಲಿ ಯಾವುದೇ ತಂಡಕ್ಕೂ ಬಿಕರಿಯಾಗದೆ ಉಳಿದಿದ್ದ ವಿದೇಶಿ ಆಟಗಾರರ ಮೇಲೆ ಪಾಕಿಸ್ತಾನ ಸೂಪರ್‌ ಲೀಗ್‌(ಪಿಎಸ್‌ಎಲ್‌) ಫ್ರಾಂಚೈಸಿಗಳು ಕಣ್ಣಿಟ್ಟಿದ್ದು, ಅವರ ಹೆಸರುಗಳನ್ನು ಡ್ರಾಫ್ಟ್‌ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಐಪಿಎಲ್‌ ಹಾಗೂ ಪಿಎಸ್ಎಲ್‌ ಫೆಬ್ರವರಿ-ಮಾರ್ಚ್‌ನಲ್ಲಿ ಬಹುತೇಕ ಒಂದೇ ಸಮಯಕ್ಕೆ ನಡೆಯಲಿದ್ದು, ತಾರಾ ಆಟಗಾರರು ಐಪಿಎಲ್‌ಗೆ ಮಣೆ ಹಾಕಿದ್ದಾರೆ. 

ಹೀಗಾಗಿ ಐಪಿಎಲ್‌ನಲ್ಲಿ ಹರಾಜಾಗದೆ ಉಳಿದ ಆಟಗಾರರ ಪಟ್ಟಿ ಸಿದ್ಧಪಡಿಸಿರುವ ಪಿಎಸ್‌ಎಲ್‌ ಫ್ರಾಂಚೈಸಿಗಳು, ಅದನ್ನು ಪಾಕ್‌ ಕ್ರಿಕೆಟ್‌ ಮಂಡಳಿಗೆ ಸಲ್ಲಿಸಿ, ಅವರ ಸ್ಪರ್ಧೆ ಖಚಿತಪಡಿಸಿಕೊಳ್ಳಲು ಸೂಚಿಸಿದೆ. ಪ್ರಮುಖರಾದ ಡೇವಿಡ್‌ ವಾರ್ನರ್‌, ಕೇನ್ ವಿಲಿಯಮ್ಸನ್‌, ಸ್ಟೀವ್‌ ಸ್ಮಿತ್‌, ಡ್ಯಾರಿಲ್‌ ಮಿಚೆಲ್‌ ಪಿಎಸ್‌ಎಲ್‌ನಲ್ಲಿ ಆಡುವ ನಿರೀಕ್ಷೆಯಿದೆ.

Tap to resize

Latest Videos

ವಿಶ್ವ ಟೆಸ್ಟ್‌ ಫೈನಲ್‌ ರೇಸ್‌ ಮತ್ತಷ್ಟು ರೋಚಕ: ಭಾರತ, ಆಸ್ಟ್ರೇಲಿಯಾ, ದ.ಆಫ್ರಿಕಾ ನಡುವೆ ತ್ರಿಕೋನ ಸ್ಪರ್ಧೆ!

ಡಬ್ಲ್ಯುಪಿಎಲ್‌ ಹರಾಜಿನಲ್ಲಿ ಈ ಸಲ ಅನುಷ್ಕಾ ಶರ್ಮಾ, ಗಂಗೂಲಿ, ಫ್ಲಿಂಟಾಫ್‌ ಭಾಗಿ!

undefined

ಬೆಂಗಳೂರು: ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌) ಹರಾಜು ಡಿ.15ಕ್ಕೆ ಬೆಂಗಳೂರಿನಲ್ಲಿ ನಡೆಯಲಿದ್ದು, ಅನುಷ್ಕಾ ಶರ್ಮಾ, ಗಂಗೂಲಿ ಹಾಗೂ ಫ್ಲಿಂಟಾಫ್‌ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಇದು ಅಚ್ಚರಿಯಾದರೂ ಸತ್ಯ. 

ಹರಾಜಿನಲ್ಲಿ ಪಾಲ್ಗೊಳ್ಳಲಿರುವ 120 ಆಟಗಾರ್ತಿಯರ ಪಟ್ಟಿಯಲ್ಲಿ ಮಧ್ಯಪ್ರದೇಶದ ಅನುಷ್ಕಾ ಶರ್ಮಾ, ಬೆಂಗಾಲ್‌ನ ಸುಶ್ಮಿತಾ ಗಂಗೂಲಿ ಕೂಡಾ ಇದ್ದಾರೆ. ಇನ್ನು, ಆಸ್ಟ್ರೇಲಿಯಾದ 21 ವರ್ಷದ ಟೆಸ್‌ ಫ್ಲಿಂಟಾಫ್‌ ಕೂಡಾ ಹೆಸರು ನೋಂದಾಯಿಸಿಕೊಂಡಿದ್ದು, ಟೂರ್ನಿಯಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. 5 ಫ್ರಾಂಚೈಸಿಗಳು ಈಗಾಗಲೇ ಹಲವು ಆಟಗಾರ್ತಿಯರನ್ನು ತಂಡದಲ್ಲೇ ಉಳಿಸಿಕೊಂಡಿದ್ದು, ಅಗತ್ಯವಿರುವ ಆಟಗಾರ್ತಿಯರನ್ನು ಹರಾಜಿನಲ್ಲಿ ಖರೀದಿಸಲಿವೆ.

6 ತಿಂಗಳಲ್ಲಿ ಬರೋಬ್ಬರಿ 42 ಬ್ರ್ಯಾಂಡ್‌ ಜತೆ ಧೋನಿ ಒಪ್ಪಂದ! ಶಾರುಖ್ ಖಾನ್, ಅಮಿತಾಬ್ ಬಚ್ಚನ್ ರೆಕಾರ್ಡ್ ನುಚ್ಚುನೂರು

ಡಬ್ಲ್ಯುಪಿಎಲ್‌: ಹರಾಜಿನಲ್ಲಿ ರಾಜ್ಯದ ನಾಲ್ವರು ಸೇರಿ 120 ಆಟಗಾರ್ತಿಯರು

ಬೆಂಗಳೂರು: ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌) ಹರಾಜಿನಲ್ಲಿ ಈ ಬಾರಿ ಕರ್ನಾಟಕದ ನಾಲ್ವರು ಸೇರಿ ಒಟ್ಟು 120 ಮಂದಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಶುಭಾ ಸತೀಶ್‌, ಪ್ರತ್ಯುಷಾ ಸಿ., ಪ್ರತ್ಯೂಷಾ ಕುಮಾರ್‌ ಹಾಗೂ ನಿಕಿ ಪ್ರಸಾದ್‌ ಹರಾಜಿನಲ್ಲಿ ಅದೃಷ್ಠ ಪರೀಕ್ಷೆಗಿಳಿಯಲಿದ್ದಾರೆ. 91 ಭಾರತೀಯರು. 29 ವಿದೇಶಿಗರು ಹರಾಜು ಪಟ್ಟಿಯಲ್ಲಿದ್ದಾರೆ. ಡಿ.15ರಂದು ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ.

click me!