ಆರ್‌ಸಿಬಿಯ ಮಾಜಿ ಮಾಲೀಕ, ಮದ್ಯದ ದೊರೆ, ಒಂದು ಕಾಲದಲ್ಲಿ ಕಿಂಗ್ ಆಫ್ ಗುಡ್ ಟೈಮ್ಸ್ ಎಂದೇ ಖ್ಯಾತಿ ಗಳಿಸಿದ್ದ ವಿಜಯ ಮಲ್ಯ ನಿನ್ನೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪ್ಲೇ ಆಪ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಆರ್‌ಸಿಬಿಯ ಮಾಜಿ ಮಾಲೀಕ, ಮದ್ಯದ ದೊರೆ, ಒಂದು ಕಾಲದಲ್ಲಿ ಕಿಂಗ್ ಆಫ್ ಗುಡ್ ಟೈಮ್ಸ್ ಎಂದೇ ಖ್ಯಾತಿ ಗಳಿಸಿದ್ದ ವಿಜಯ ಮಲ್ಯ ಈಗ ತಮ್ಮ ಬ್ಯಾಡ್ ಡೇಸ್‌ಗಳನ್ನು ಕಳೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅವರು ನಿನ್ನೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪ್ಲೇ ಆಪ್‌ಗೆ ಲಗ್ಗೆ ಇಟ್ಟ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ವಿಜಯ ಮಲ್ಯ ಅಭಿನಂದನೆಯ ಪೋಸ್ಟ್ ಹಾಕಿದ್ದು, ಇದಕ್ಕೆ ನೆಟ್ಟಿಗರು ಕೂಡ ಸಖತ್ ಆಗಿ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ದೇಶ ತೊರೆದು ಲಂಡನ್‌ನಲ್ಲಿ ನೆಲೆ ನಿಂತಿರುವ ಮದ್ಯದ ದೊರೆಯನ್ನು ಸಖತ್ ಆಗಿ ಕಾಲೆಳೆದಿದ್ದಾರೆ.
ಏನಂತ ಟ್ವಿಟ್ ಮಾಡಿದ್ರು ಮಲ್ಯ?
ಪ್ಲೇ ಹಂತಕ್ಕೆ ಲಗ್ಗೆ ಇಟ್ಟು ಐಪಿಎಲ್‌ನ ಟಾಪ್ 4ರಲ್ಲಿ ಸ್ಥಾನ ಪಡೆದ ಆರ್‌ಸಿಬಿ ತಂಡಕ್ಕೆ ಹೃದಯ ತುಂಬಿದ ಧನ್ಯವಾದಗಳು, ನಿರಾಶಾದಾಯಕ ಆರಂಭದ ನಂತರ ಉತ್ತಮ ನಿರ್ಣಯ ಮತ್ತು ಕೌಶಲ್ಯದಿಂದ ಆರ್‌ಸಿಬಿ ಗೆಲುವಿನ ಆವೇಗವನ್ನು ಸೃಷ್ಟಿಸಿದೆ. ಇಲ್ಲಿಂದ ಮುಂದಕ್ಕೆ ಟ್ರೋಫಿಯ ಕಡೆಗೆ ಮತ್ತು ಮೇಲಕ್ಕೆ ಎಂದು ಆರ್‌ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಕಾಮೆಂಟ್ ಮಾಡಿದ್ದಾರೆ. ನಿನ್ನೆ ರಾತ್ರಿ. 1 ಗಂಟೆ ಸುಮಾರಿಗೆ ಮಾಡಿದ ಈ ಪೋಸ್ಟ್ ನ್ನು 1.4 ಮಿಲಿಯನ್‌ಗೂ ಅಧಿಕ ಜನ ರಾತ್ರಿ ಬೆಳಗಾಗುವುದರೊಳಗೆ ವೀಕ್ಷಿಸಿದ್ದಾರೆ. ಸಾವಿರಾರು ಜನ ಕಾಮೆಂಟ್ ಮಾಡಿದ್ದಾರೆ.
ಸತ್ಯ ಜಯಿಸಲಿದೆ.. ಅನಿತಾ ಗೋಯಲ್ ನಿಧನಕ್ಕೆ ಸಂತಾಪ: ವಿಜಯ್ ಮಲ್ಯ ಮಾಡಿದ ಟ್ವಿಟ್ ಮರ್ಮವೇನು?
ನೆಟ್ಟಿಗರು ಸುಮ್ಮನಿರ್ತಾರಾ?
ಆದರೆ ವಿಜಯ್ ಮಲ್ಯ ಆರ್‌ಸಿಬಿಗೆ ಧನ್ಯವಾದ ಹೇಳುವ ಮೂಲಕ ಸಖತ್ ಆಗಿ ಟ್ರೋಲ್ ಆಗಿದ್ದಾರೆ. ಕೆಲ ನೆಟ್ಟಿಗರ ನಗು ತರಿಸುವ ವಿಶ್ಲೇಷಣೆ ಕಾಮೆಂಟ್‌ಗಳು ಇಲ್ಲಿವೆ ನೋಡಿ. ಬ್ರೋ ಬ್ಯಾಂಕ್‌ಗೆ ರಜಾ ದಿನ ಇರುವಂದೇ ಟ್ವಿಟ್ ಮಾಡಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು ಎಸ್‌ಬಿಐ (ಬ್ಯಾಂಕ್‌ಗೆ ಕೋಟ್ಯಾಂತರ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾದ ಆರೋಪ ವಿಜಯ್ ಮಲ್ಯ ಮೇಲಿದೆ) ನಿಮಗಾಗಿ ಕಾಯುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಆದರೆ ಇತ್ತ ಸಿಎಸ್‌ಕೆ ತಂಡ ಪ್ರತಿನಿಧಿಸುವ ಕ್ರಿಕೆಟಿಗ ಎಂಎಸ್ ಧೋನಿ ಎಸ್‌ಬಿಐನ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಹೀಗಾಗಿ ಒಬ್ಬರು ಎಸ್‌ಬಿಐನ ಲೂಟಿ ಮಾಡಿ ಎಸ್‌ಬಿಐನ ಸೋಲಿಸಿದರೆ, ಇತ್ತ ವಿರಾಟ್ ಕೊಹ್ಲಿ, ಎಸ್‌ಬಿಐನ ಅಂಬಾಸಿಡರ್ ಅನ್ನು ಫೀಲ್ಡ್‌ನಲ್ಲಿ ಸೋಲಿಸಿದರು. ಇಬ್ಬರಿಗೂ ಎಸ್‌ಬಿಐ ಕನೆಕ್ಷನ್ ಹೇಗಿದೆ ನೋಡಿ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಇದೇ ಕಾರಣಕ್ಕೆ ಆರ್‌ಸಿಬಿ ಸಿಎಸ್‌ಕೆಯನ್ನು ಸೋಲಿಸಿದೆ. ಏಕೆಂದರೆ ಧೋನಿ ಎಸ್‌ಬಿಐನ ಬ್ರಾಂಡ್ ಅಂಬಾಸಿಡರ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಆರ್‌ಸಿಬಿ ಟ್ರೋಫಿ ಎತ್ತುವ ವೇಳೆ ನಿಮ್ಮ ಉಪಸ್ಥಿತಿಯನ್ನು ನಾವು ನೋಡಲು ಬಯಸುತ್ತೇವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಚಾಂಪಿಯನ್ ಆರ್‌ಸಿಬಿ ಮಹಿಳಾ ತಂಡಕ್ಕೆ ವಿಶ್ ಮಾಡಿ ಟ್ರೋಲ್ ಆದ ವಿಜಯ್ ಮಲ್ಯ!
Heartiest congratulations to RCB for qualifying in the top four and reaching the IPL playoffs. Great determination and skill have created a winning momentum after a disappointing start. Onward and upward towards the trophy.
— Vijay Mallya (@TheVijayMallya)
Man Iooted & defeated SBI off the field and Virat Defeated SBI Ambassador on the field.
The SBI Connection 🤣🤣 pic.twitter.com/Wl3XdVftqz