Vijay Hazare Trophy: ನಾಕೌಟ್ ಪ್ರವೇಶಿಸುವ ಉತ್ಸಾಹದಲ್ಲಿ ಕರ್ನಾಟಕ

By Suvarna NewsFirst Published Dec 14, 2021, 8:47 AM IST
Highlights

* ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿಂದು ಕರ್ನಾಟಕಕ್ಕೆ ಬೆಂಗಾಲ್ ಸವಾಲ್‌

* ಕ್ವಾರ್ಟರ್‌ ಫೈನಲ್‌ ಮೇಲೆ ಕಣ್ಣಿಟ್ಟಿದೆ ಮನೀಶ್ ಪಾಂಡೆ ಬಳಗ

* ಗೆಲುವಿನೊಂದಿಗೆ ನಾಕೌಟ್ ಹಂತ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ ಕರ್ನಾಟಕ

ತಿರುವನಂತಪುರಂ(ಡಿ.14): ವಿಜಯ್‌ ಹಜಾರೆ ಏಕದಿನ ಟೂರ್ನಿಯಲ್ಲಿ (Vijay Hazare Trophy) ಕರ್ನಾಟಕ ತಂಡ ನಾಕೌಟ್‌ ಹಂತ ಪ್ರವೇಶಿಸುವ ಉತ್ಸಾಹದಲ್ಲಿದ್ದು ಮಂಗಳವಾರ ಎಲೈಟ್‌ ‘ಬಿ’ ಗುಂಪಿನ ಅಂತಿಮ ಪಂದ್ಯದಲ್ಲಿ ಬೆಂಗಾಲ್‌ ವಿರುದ್ಧ ಸೆಣಸಲಿದೆ. ಈಗಾಗಲೇ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 12 ಅಂಕಗಳೊಂದಿಗೆ ಗುಂಪಿನಲ್ಲಿ 2ನೇ ಸ್ಥಾನದಲ್ಲಿರುವ ಕರ್ನಾಟಕ ಕ್ರಿಕೆಟ್ ತಂಡ(Karnataka Cricket Team), ಈ ಪಂದ್ಯದಲ್ಲಿ ಜಯಿಸಿದರೆ ನಾಕೌಟ್‌ ಪ್ರವೇಶ ಖಚಿತವೆನಿಸಲಿದೆ. ತಂಡ ಸೋತರೂ ಅವಕಾಶವಿರಲಿದೆ.

ಮತ್ತೊಂದು ಪಂದ್ಯದಲ್ಲಿ ತಮಿಳುನಾಡು ತಂಡ (Tamil Nadu Cricket Team) ಬರೋಡಾ ವಿರುದ್ಧ ಕಣಕ್ಕಿಳಿಯಲಿದೆ. ತಮಿಳುನಾಡು ಸಹ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದ್ದು 12 ಅಂಕ ಹೊಂದಿದೆ. ಆದರೆ ತಮಿಳುನಾಡು ತಂಡದ ನೆಟ್‌ ರನ್‌ರೇಟ್‌ (+1.632) ಇದ್ದು ಮೊದಲ ಸ್ಥಾನದಲ್ಲಿದೆ. ಬರೋಡಾ ವಿರುದ್ಧ ತಮಿಳುನಾಡು ಸೋತು, ಬೆಂಗಾಲ್‌ಗೆ ಕರ್ನಾಟಕ ಸೋಲುಣಿಸಿದರೆ ಕರ್ನಾಟಕ ಅಗ್ರಸ್ಥಾನಕ್ಕೇರಿ ನೇರವಾಗಿ ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಒಂದೊಮ್ಮೆ ಕರ್ನಾಟಕ ಗೆದ್ದು, ತಮಿಳುನಾಡು ತಂಡವೂ ಗೆದ್ದರೆ ಆಗ ಕರ್ನಾಟಕ 2ನೇ ಸ್ಥಾನಕ್ಕೆ ತೃಪ್ತಿಪಟ್ಟು ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಆಡಬೇಕಾಗುತ್ತದೆ.

ತಲಾ 8 ಅಂಕಗಳೊಂದಿಗೆ ಕ್ರಮವಾಗಿ 3 ಹಾಗೂ 4ನೇ ಸ್ಥಾನದಲ್ಲಿರುವ ಪುದುಚೇರಿ ಹಾಗೂ ಬೆಂಗಾಲ್‌ ಅಂತಿಮ ಪಂದ್ಯಗಳಲ್ಲಿ ಗೆದ್ದರೂ ಕರ್ನಾಟಕಕ್ಕೆ ನಾಕೌಟ್‌ಗೇರಲು ಅವಕಾಶವಿರಲಿದೆ. ಪುದುಚೇರಿ ಹಾಗೂ ಬೆಂಗಾಲ್‌ ಎರಡೂ ತಂಡಗಳ ಕಳಪೆ ನೆಟ್‌ ರನ್‌ರೇಟ್‌ ಹೊಂದಿವೆ. ಕರ್ನಾಟಕ ಸೋತರೂ ನೆಟ್‌ ರನ್‌ರೇಟ್‌ ಉಳಿಸಿಕೊಂಡರೆ 2ನೇ ಸ್ಥಾನದಲ್ಲೇ ಉಳಿಯಬಹುದು.

ಕರ್ನಾಟಕ ಕ್ರಿಕೆಟ್ ತಂಡದ ಉಪನಾಯಕ ಆರ್‌.ಸಮರ್ಥ್ (Ravikumar Samarth) ಉತ್ತಮ ಲಯದಲ್ಲಿದ್ದು, ಅವರಿಂದ ತಂಡ ಮತ್ತೊಂದು ಭರ್ಜರಿ ಇನ್ನಿಂಗ್ಸ್‌ ನಿರೀಕ್ಷೆ ಮಾಡುತ್ತಿದೆ. ಮಧ್ಯಮ ಕ್ರಮಾಂಕ ಸ್ಥಿರ ಪ್ರದರ್ಶನ ತೋರಬೇಕಿದ್ದು, ನಾಯಕ ಮನೀಶ್‌ ಪಾಂಡೆ (Manish Pandey) ಮೇಲೆ ಒತ್ತಡವಿದೆ. ಸ್ಪಿನ್ನರ್‌ಗಳ ಅತ್ಯುತ್ತಮ ಪ್ರದರ್ಶನದಿಂದಾಗಿ ತಂಡ ಗೆಲುವಿನ ಓಟ ಮುಂದುವರಿಸುತ್ತಿದ್ದು, ಬೆಂಗಾಲ್‌ ವಿರುದ್ಧವೂ ಸ್ಪಿನ್ನರ್‌ಗಳೇ ತಂಡಕ್ಕೆ ಆಸರೆಯಾಗಬೇಕಿದೆ.

ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ

ವಿಕಲಾಂಗ ಕ್ರಿಕೆಟಿಗರ ನೆರವಿಗೆ ಬಿಸಿಸಿಐ ಸಮಿತಿ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಬಿಸಿಸಿಐ (BCCI) ಸೋಮವಾರ ಭಾರತದ ವಿಕಲಾಂಗ ಕ್ರಿಕೆಟ್‌ ತಂಡಗಳಿಗೆ ಆರ್ಥಿಕ ನೆರವು ನೀಡಲು ಸಮಿತಿಯೊಂದನ್ನು ರಚಿಸಿದೆ. ಭಾರತೀಯ ವಿಕಲಾಂಗ ಕ್ರಿಕೆಟ್‌ ಸಮಿತಿ(ಡಿಸಿಸಿಐ)ಗೆ ಬಿಸಿಸಿಐ ಮಾನ್ಯತೆ ನೀಡಿದ್ದು, ಇನ್ಮುಂದೆ ಭಾರತದ ಅಂಧ, ಕಿವುಡ, ವೀಲ್ಹ್‌ಚೇರ್‌ ಸೇರಿದಂತೆ ವಿವಿಧ ವಿಕಲಾಂಗ ತಂಡಗಳು ಬಿಸಿಸಿಐ ಅಡಿಯಲ್ಲೇ ದೇಶವನ್ನು ಪ್ರತಿನಿಧಿಸಬಹುದಾಗಿದೆ.

India tour South Africa ಟೀಂ ಇಂಡಿಯಾ ಬಿಗ್ ಶಾಕ್, ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಔಟ್!

ಬಿಸಿಸಿಐ ಮಾನ್ಯತೆ ದೊರೆತಿರುವ ಕಾರಣ ವಿಕಲಾಂಗ ತಂಡಗಳ ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ಕ್ರಿಕೆಟ್‌ ಆಟವನ್ನು ವೃತ್ತಿಯಾಗಿ ಸ್ವೀಕರಿಸಲು ಆಟಗಾರರಿಗೆ ಅನುಕೂಲವಾಗಲಿದೆ. ಬಿಸಿಸಿಐ ನಿರ್ಧಾರವನ್ನು ಭಾರತ ಟೆಸ್ಟ್‌, ಏಕದಿನ ತಂಡದ ನಾಯಕಿ ಮಿಥಾಲಿ ರಾಜ್‌ (Mithali Raj) ಸೇರಿ ಅನೇಕ ಕ್ರಿಕೆಟಿಗರು ಶ್ಲಾಘಿಸಿದ್ದಾರೆ.

Pak vs WI: ವಿಂಡೀಸ್ ವಿರುದ್ದ ಪಾಕಿಸ್ತಾನಕ್ಕೆ ಭರ್ಜರಿ ಜಯ..!

ಕರಾಚಿ: ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ 63 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದರ ಜತೆಗೆ 2021ರಲ್ಲಿ 18ನೇ ಟಿ20 ಪಂದ್ಯಗಳನ್ನು ಗೆದ್ದು ಹೊಸ ದಾಖಲೆ ಬರೆದಿದೆ.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡವು ಆರಂಭಿಕ ಆಘಾತದ ಹೊರತಾಗಿಯೂ 6 ವಿಕೆಟ್ ಕಳೆದುಕೊಂಡು ಬರೋಬ್ಬರಿ 200 ರನ್ ಬಾರಿಸಿತ್ತು. ಈ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 19 ಓವರ್‌ಗಳಲ್ಲಿ 137 ರನ್‌ ಬಾರಿಸಿ ಆಲೌಟ್ ಆಯಿತು.

click me!