ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ಕರ್ನಾಟಕದ ವೇಗಿಗಳ ದಾಳಿಗೆ ತತ್ತರಿಸಿ 36.3 ಓವರ್‌ಗಳಲ್ಲಿ 143 ರನ್‌ಗೆ ಸರ್ವಪತನ ಕಂಡಿತು. ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ತಂಡವನ್ನು ಆಯುಶ್ ಬದೋನಿ(100) ಏಕಾಂಗಿ ಹೋರಾಟದ ಮೂಲಕ ಅಲ್ಪ ಮೇಲೆತ್ತಿದರು. ಬೇರೆ ಯಾವುದೇ ಬ್ಯಾಟರ್ 15ಕ್ಕಿಂತ ಹೆಚ್ಚಿನ ರನ್ ಗಳಿಸಲಿಲ್ಲ. ವಾಸುಕಿ ಕೌಶಿಕ್, ವಿದ್ವತ್ ಕಾವೇರಪ್ಪ ತಲಾ 3, ವಿಜಯ್‌ಕುಮಾರ್ ವೈಶಾಖ್, ಕೆ.ಗೌತಮ್ ತಲಾ 2 ವಿಕೆಟ್ ಕಿತ್ತರು.
ಅಹಮದಾಬಾದ್(ನ.28): ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. 2019-20ರ ಬಳಿಕ ಮತ್ತೊಮ್ಮೆ ಪ್ರಶಸ್ತಿ ಎತ್ತಿಹಿಡಿಯುವ ನಿರೀಕ್ಷೆಯೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಕರ್ನಾಟಕ, ಸೋಮವಾರ ಬಲಿಷ್ಠ ಡೆಲ್ಲಿ ವಿರುದ್ಧ 6 ವಿಕೆಟ್ ಗೆಲುವು ಸಾಧಿಸಿತು. ಇದರೊಂದಿಗೆ ‘ಸಿ’ ಗುಂಪಿನಲ್ಲಿ 12 ಅಂಕಗಳೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿತು.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ಕರ್ನಾಟಕದ ವೇಗಿಗಳ ದಾಳಿಗೆ ತತ್ತರಿಸಿ 36.3 ಓವರ್‌ಗಳಲ್ಲಿ 143 ರನ್‌ಗೆ ಸರ್ವಪತನ ಕಂಡಿತು. ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ತಂಡವನ್ನು ಆಯುಶ್ ಬದೋನಿ(100) ಏಕಾಂಗಿ ಹೋರಾಟದ ಮೂಲಕ ಅಲ್ಪ ಮೇಲೆತ್ತಿದರು. ಬೇರೆ ಯಾವುದೇ ಬ್ಯಾಟರ್ 15ಕ್ಕಿಂತ ಹೆಚ್ಚಿನ ರನ್ ಗಳಿಸಲಿಲ್ಲ. ವಾಸುಕಿ ಕೌಶಿಕ್, ವಿದ್ವತ್ ಕಾವೇರಪ್ಪ ತಲಾ 3, ವಿಜಯ್‌ಕುಮಾರ್ ವೈಶಾಖ್, ಕೆ.ಗೌತಮ್ ತಲಾ 2 ವಿಕೆಟ್ ಕಿತ್ತರು.
undefined
ಏಷ್ಯಾಕಪ್ ಬಳಿಕ ಪಾಕ್‌ಗೆ ಮತ್ತೊಂದು ಶಾಕ್, ಐಸಿಸಿ ಚಾಂಪಿಯನ್ಸ್ ಟ್ರೋಫಿ ದುಬೈಗೆ ಶಿಫ್ಟ್ ಸಾಧ್ಯತೆ!
ಸುಲಭ ಗುರಿಯನ್ನು ಕರ್ನಾಟಕ 27.3 ಓವರ್‌ಗಳಲ್ಲೇ ಬೆನ್ನತ್ತಿ ಗೆದ್ದಿತು. ಮತ್ತೆ ತಂಡಕ್ಕೆ ಆಸರೆಯಾದ ದೇವದತ್ ಪಡಿಕ್ಕಲ್(70) ಸತತ 3ನೇ ಪಂದ್ಯದಲ್ಲೂ 70+ ರನ್ ಕಲೆಹಾಕಿದರು. ಮನೀಶ್ ಪಾಂಡೆ 28 ರನ್ ಕೊಡುಗೆ ನೀಡಿದರು. ರಾಜ್ಯ ತಂಡ ತನ್ನ 4ನೇ ಪಂದ್ಯದಲ್ಲಿ ಬುಧವಾರ ಬಿಹಾರ ವಿರುದ್ಧ ಸೆಣಸಾಡಲಿದೆ.
ಸ್ಕೋರ್:
ಡೆಲ್ಲಿ 36.3 ಓವರಲ್ಲಿ 143/10(ಆಯುಶ್ 100, ಕೌಶಿಕ್ 3-19, ಕಾವೇರಪ್ಪ 3-25)
ಕರ್ನಾಟಕ 27.3 ಓವರಲ್ಲಿ 144/4(ಪಡಿಕ್ಕಲ್ 70, ಮನೀಶ್ 28*, ಮಯಾಂಕ್ ಯಾದವ್ 1-18)
ಮುಂಬೈ, ವಿದರ್ಭ ರಾಜಸ್ಥಾನಕ್ಕೆ ಜಯ
ಸೋಮವಾರ ಮುಂಬೈ, ವಿದರ್ಭ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಹರ್ಯಾಣ ತಂಡಗಳೂ ಟೂರ್ನಿಯ ಹ್ಯಾಟ್ರಿಕ್ ಗೆಲುವಿನ ರುಚಿ ಅನುಭವಿಸಿದವು. ಇತರ ಪಂದ್ಯಗಳಲ್ಲಿ ತಮಿಳುನಾಡು, ಸರ್ವಿಸಸ್, ಬರೋಡಾ, ಜಾರ್ಖಂಡ್, ಕೇರಳ, ಗುಜರಾತ್, ಪುದುಚೇರಿ, ಅಸ್ಸಾಂ ಕೂಡಾ ಜಯಗಳಿಸಿದವು.
ಆಟಗಾರರ ರೀಟೈನ್ & ರಿಲೀಸ್ ಬಳಿಕ ಯಾವ ಫ್ರಾಂಚೈಸಿ ಬಳಿ ಎಷ್ಟು ಹಣ ಉಳಿದಿದೆ..?
ಶ್ರೀಲಂಕಾ ಕ್ರಿಕೆಟ್‌ನ ವಜಾ ಮಾಡಿದ್ದ ಕ್ರೀಡಾ ಸಚಿವ ಸಂಪುಟದಿಂದಲೇ ವಜಾ!
ಕೊಲಂಬೊ: ಇತ್ತೀಚೆಗಷ್ಟೇ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ)ಯನ್ನು ವಜಾಗೊಳಿಸಿದ್ದ ಲಂಕಾ ಸರ್ಕಾರದ ಕ್ರೀಡಾ ಸಚಿವ ರೋಶನ್ ರಣಸಿಂಘೆ ಅವರನ್ನು ಅಲ್ಲಿನ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹುದ್ದೆಯಿಂದಲೇ ವಜಾಗೊಳಿಸಿದ್ದಾರೆ. ಸೋಮವಾರ ಸಂಸತ್‌ನಲ್ಲಿ ಮಾತನಾಡಿದ್ದ ರೋಶನ್, ಲಂಕಾ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ಬಹಿರಂಗಪಡಿಸಿದ್ದಕ್ಕೆ ನನ್ನ ಜೀವ ಅಪಾಯದಲ್ಲಿದೆ. ನನ್ನನ್ನು ಯಾವ ಕ್ಷಣದಲ್ಲಿ ಬೇಕಾದರೂ ಕೊಲ್ಲಬಹುದು. ನನಗೇನಾದರೂ ಸಂಭವಿಸಿದರೆ ಅದಕ್ಕೆ ಅಧ್ಯಕ್ಷರೇ ಹೊಣೆ’ ಎಂದಿದ್ದರು. ಬಳಿಕ ಕೆಲ ಗಂಟೆಗಳಲ್ಲೇ ರೋಶನ್‌ರನ್ನು ಅಧ್ಯಕ್ಷ ರನಿಲ್ ವಜಾಗೊಳಿಸಿ ಆದೇಶಿಸಿದ್ದಾರೆ.