ವಿಶ್ವಕಪ್ ಗೆದ್ದು ಒಂದು ವಾರ ಕಳೆದಿದೆ. ಏಕದಿನ ವಿಶ್ವಕಪ್ ಗೆದ್ದ ಅರ್ಧ ಆಸಿಸ್ ತಂಡ ತವರಿಗೆ ತೆರಳಿದ್ದೂ ಆಗಿದೆ. ಟ್ರೋಫಿ ಕೂಡ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಜೊತೆ ಆಸ್ಟ್ರೇಲಿಯಾವನ್ನ ಸೇರಿದೆ. ಇದೀಗ ಆಸಿಸ್ ಆಟಗಾರರ ಹುಚ್ಚಾಟ ಶುರುವಾಗಿದೆ. ಕಾಂಗರೂಗಳ ಕಮಂಗಿ ಆಟಕ್ಕೆ ಭಾರತೀಯ ಫ್ಯಾನ್ಸ್ ಕೆಂಡಾಮಂಡಲರಾಗಿದ್ದಾರೆ.
ಬೆಂಗಳೂರು(ನ.27): ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಮುಗಿದು ಒಂದು ವಾರವೇ ಕಳೆದಿದೆ. ಆದ್ರೂ, ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಬೇಸರ ಮಾತ್ರ ಕಡಿಮೆಯಾಗಿಲ್ಲ. ಸೋಲಿನ ಸೂತಕದ ಛಾಯೆ, ಭಾರತೀಯ ಕ್ರಿಕೆಟ್ ಲೋಕವನ್ನೂ ಇನ್ನೂ ಆವರಿಸಿದೆ. ಆ ಸೋಲಿನ ನೋವಲ್ಲೇ ಇದ್ದ ಅಭಿಮಾನಿಗಳು ಇದ್ದಕ್ಕಿದ್ದಂತೆ ರೊಚ್ಚಿಗೆದ್ದಿದ್ದಾರೆ. ಆಸಿಸ್ ಆಟಗಾರರ ಮೇಲೆ ಕೆಂಡ ಕಾರ್ತಿದ್ದಾರೆ.
ವಿಶ್ವಕಪ್ ಗೆದ್ದ ಕಾಂಗರೂಗಳ ‘ಕಮಂಗಿ’ ಆಟ.!
undefined
ವಿಶ್ವಕಪ್ ಗೆದ್ದು ಒಂದು ವಾರ ಕಳೆದಿದೆ. ಏಕದಿನ ವಿಶ್ವಕಪ್ ಗೆದ್ದ ಅರ್ಧ ಆಸಿಸ್ ತಂಡ ತವರಿಗೆ ತೆರಳಿದ್ದೂ ಆಗಿದೆ. ಟ್ರೋಫಿ ಕೂಡ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಜೊತೆ ಆಸ್ಟ್ರೇಲಿಯಾವನ್ನ ಸೇರಿದೆ. ಇದೀಗ ಆಸಿಸ್ ಆಟಗಾರರ ಹುಚ್ಚಾಟ ಶುರುವಾಗಿದೆ. ಕಾಂಗರೂಗಳ ಕಮಂಗಿ ಆಟಕ್ಕೆ ಭಾರತೀಯ ಫ್ಯಾನ್ಸ್ ಕೆಂಡಾಮಂಡಲರಾಗಿದ್ದಾರೆ.
'ಹಣಕ್ಕಿಂತ ನಿಯತ್ತು ಮುಖ್ಯ': ಎದುರಾಳಿ IPL ಫ್ರಾಂಚೈಸಿ 20 ಕೋಟಿ ಆಫರ್ ತಿರಸ್ಕರಿಸಿದ RCB ಹುಲಿ ವಿರಾಟ್ ಕೊಹ್ಲಿ..!
ಬಾಲ ಬಿಚ್ಚಿದ ಆಸ್ಟ್ರೇಲಿಯಾದ ಪ್ರತಿಷ್ಟಿತ ಪತ್ರಿಕೆ.!
ವಿಶ್ವಕಪ್ ಟೂರ್ನಿ ಅಂತ್ಯವಾಗಿ ವಾರ ಕಳೆದ್ರೂ, ಭಾರತೀಯ ಕ್ರಿಕೆಟ್ ವಲಯದ ದುಖಃ ಕಡಿಮೆಯಾಗಿಲ್ಲ. ಸೋಲಿನ ಹತಾಶೆ, ಬೇಸರ ಎಲ್ಲರನ್ನ ಆವರಿಸಿದೆ. ರೋಹಿತ್, ವಿರಾಟ್ ಸೇರಿದಂತೆ ವಿಶ್ವಕಪ್ ತಂಡದ ಹಲವು ಆಟಗಾರರು ಇನ್ನೂ ಬಹಿರಂಗವಾಗಿ ಕಾಣಿಸಿಕೊಂಡೇ ಇಲ್ಲ. ಭಾರತೀಯ ಕ್ರಿಕೆಟ್ ಲೋಕ ನೋವಿನಲ್ಲಿರುವಾಗ ಆಸಿಸ್ ಫ್ಯಾನ್ಸ್ ಬಾಲ ಬಿಚ್ಚಿದ್ದಾರೆ. ಇದಕ್ಕೆ ಆಸಿಸ್ ಆಟಗಾರರು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ.
ಕೊಹ್ಲಿ, ರೋಹಿತ್‌ರನ್ನು ಹೀಯಾಳಿಸಿದ ಆಸಿಸ್ ಪತ್ರಿಕೆ.!
ಯೆಸ್, ಆಸ್ಟ್ರೇಲಿಯಾ ಪ್ರತಿಷ್ಟಿತ ಪತ್ರಿಕೆ ಎನ್ನಿಸಿಕೊಂಡಿರುವ ದಿ ಬಿಟೋಟಾ ಅಡ್ವೋಕೇಟ್ಯ ಹುಚ್ಚಾಟದ ಕಥೆಯಿದು. ಈ ಪತ್ರಿಕೆ ಒಂದು ಕೆಟ್ಟದಾದ ಒಂದು ವರದಿ ಬರೆದು ಅದನ್ನ ಶೇರ್ ಮಾಡಿದೆ. ಸೌತ್ ಆಸ್ಟ್ರೇಲಿಯನ್ ಅಂದ್ರೆ, ಫೈನಲ್ ಪಂದ್ಯದ ಮ್ಯಾಚ್ ವಿನ್ನರ್ ಟ್ರಾವಿಸ್ ಹೆಡ್, ವಿಶ್ವ ದಾಖಲೆಯ 11 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬರ್ಥದ ಹೆಡ್ಲೈನ್ ಇರುವ ಸುದ್ದಿ ಅದು. ಈ ಸುದ್ದಿಗೆ ಬಳಸಲಾಗಿರುವ ಫೋಟೋದಲ್ಲಿ ಹಲವು ನರ್ಸ್ಗಳು ಮಕ್ಕಳನ್ನ ಎತ್ತಿಕೊಂಡಿದ್ದಾರೆ. ಆ ಮಕ್ಕಳ ಮುಖಕ್ಕೆ ಕೊಹ್ಲಿ, ರೋಹಿತ್, ಬೂಮ್ರಾ ಸೇರಿದಂತೆ ಟೀಮ್ ಇಂಡಿಯಾ ಆಟಗಾರರ ಮುಖವನ್ನ ಅಂಟಿಸಲಾಗಿದೆ.
ರೋಹಿತ್ ಶರ್ಮಾ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ರೆ ಟೀಂ ಇಂಡಿಯಾ ಮುಂದಿನ ಕ್ಯಾಪ್ಟನ್ ಯಾರು?
ಟೀಂ ಇಂಡಿಯಾ ಫ್ಯಾನ್ಸ್ ಮಾತ್ರವಲ್ಲ, ಜಂಟಲ್ಮನ್ ಗೇಮ್‌ನ ಅರಾಧಿಸೋ ಯಾವೊಬ್ಬ ಅಭಿಮಾನಿ ಕೂಡ ಇಂತಾ ಅಸಹ್ಯಕರವಾದ, ಅಗೌರವ ತೋರುವ, ಇನ್ನೊಬ್ಬರನ್ನ ಹೀಯಾಳಿಸುವ ಸುದ್ದಿಯನ್ನ ಇಷ್ಟಪಡಲ್ಲ. ಅಂತಾದ್ರಲ್ಲಿ ವಿಶ್ವಕಪ್ನಲ್ಲಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ ಪ್ಯಾಟ್ ಕಮಿನ್ಸ್, ಈ ಸುದ್ದಿಯನ್ನ ಲೈಕ್ ಮಾಡಿ, ಕಮೆಂಟ್ ಮಾಡಿದ್ದಾರೆ. ಆ ಮನಸ್ಥಿತಿ ಎಂತದ್ದು ಅನ್ನೋದನ್ನ ನೀವೆ ಉಹಿಸಿ..
ಪ್ಯಾಟ್ ಕಮಿನ್ಸ್ ಮಾತ್ರವಲ್ಲ. ಟೀಂ ಇಂಡಿಯಾ ಆಟಗಾರರನ್ನ ಹೀಯಾಳಿಸಿದ ಈ ಸುದ್ದಿಯ ಲಿಂಕ್ ಅನ್ನ ಗ್ಲೆನ್ ಮ್ಯಾಕ್ಸ್‌ವೆಲ್, ಮಾಜಿ ಕ್ರಿಕೆಟಿಗ ಆ್ಯರೋನ್ ಫಿಂಚ್ ಕೂಡ ಆರಂಭದಲ್ಲಿ ಲೈಕ್ ಮಾಡಿದ್ರಂತೆ. ಆದ್ರೆ, ಪೋಸ್ಟ್ ವೈರಲ್ ಆಗ್ತಿದ್ದಂತೆ ಅಲರ್ಟ್ ಆಗಿ ಅನ್ಲೈಕ್ ಮಾಡಿದ್ದಾರೆ.
ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ದರ್ಪ.!
ಏಕದಿನ ವಿಶ್ವಕಪ್ ಟ್ರೋಫಿಗಿರುವ ಮೌಲ್ಯ ಬೇರೆ. ದುಡ್ಡಿನ ಅರ್ಥದಲ್ಲಿ ಅಲ್ಲ. ಇದಕ್ಕಿರುವ ಇತಿಹಾಸ, ಈ ಟ್ರೋಫಿಗಿರುವ ಘನತೆ ಬೇರೆಯದ್ದು. ಅಂತಾ ಟ್ರೋಫಿಯನ್ನ ಗೌರವಿಸಬೇಕೆ ವಿನಃ ಕಾಲ ಕಸವಾಗಿಸಬಾರದಲ್ವಾ.? ಆದ್ರೆ, ಈ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಆ ಟ್ರೋಫಿಯ ಮೇಲೆ ಕಾಲಿಟ್ಟು ದರ್ಪ ಮೆರೆದ್ರು. ದುರಹಂಕಾರದ ಪರಮಾವಧಿಯಲ್ವೇ ಇದು..?
ಶರದ್ ಪವಾರ್‌ಗೆ ಅಗೌರವ ತೋರಿತ್ತು ಪಾಂಟಿಂಗ್ & ಟೀಮ್.!
ಅದು 2006 ಚಾಂಪಿಯನ್ಸ್ ಟ್ರೋಫಿ ಫೈನಲ್ ಪ್ರಸೆಂಟೇಶನ್. ಬಿಸಿಸಿಐ ಅಧ್ಯಕ್ಷರಾಗಿದ್ದ ಶರದ್ ಪವಾರ್ ಟ್ರೋಫಿ ಕೊಡಲು ಮಾಡಲು ಬಂದಾಗ ಆಸಿಸ್ ಕ್ಯಾಪ್ಟನ್ ರಿಕಿ ಪಾಂಟಿಂಗ್ ಅವಮಾನಿಸಿದ್ರು. ಕನಿಷ್ಟ ಗೌರವ ನೀಡುವ ಸೌಜನ್ಯವನ್ನ ಕೂಡ ಆಸಿಸ್‌ನ ನಾಯಕ ಸೋ ಕಾಲ್ಡ್ ಲೆಜೆಂಡ್ ಅಂದು ಪ್ರದರ್ಶಿಸಿರಲಿಲ್ಲ.
ಈ ಇನ್ನಿಂಡೆಂಟ್ಗಳು ಮಾತ್ರವಲ್ಲ, ಭಾರತೀಯ ಆಟಗಾರರು, ಫ್ಯಾನ್ಸ್ ವಿಚಾರದಲ್ಲಿ ಹಿಂದಿನಿಂದಲೂ ಕಾಂಗರೂಗಳದ್ದು, ದುರಹಂಕಾರದ ನಡೆಯೇ. ಭಾರತೀಯ ಆಟಗಾರರನ್ನ ಸ್ಲೆಡ್ಜ್ ಮಾಡೋದು ಆಟಗಾರರ ಕೆಲಸವಾದ್ರೆ, ಅನಾವಶ್ಯಕ ವಿವಾದಗಳನ್ನ ಸೃಷ್ಟಿಸೋದು ಅಲ್ಲಿ ಮೀಡಿಯಾಗಳ ಕೆಲಸ. ದಶಕಕ್ಕೂ ಹಿಂದಿನ ಕಾಲದ ಮಂಕಿಗೇಟ್ ವಿವಾದದಿಂದ ಹಿಡಿದು ಈ ಹಿಂದಿನ ಪ್ರವಾಸದಲ್ಲಿ ಸಿರಾಜ್ರನ್ನ ಜನಾಂಗೀಯವಾಗಿ ನಿಂದನೆ ಮಾಡುವವರೆಗೆ ಕಾಂಗರೂಗಳ ಕಮಂಗಿ ಆಟ ನಡೆಯುತ್ತಲೇ ಬಂದಿದೆ.