
ಕೊಲಂಬೊ: ಸಾವು ಎನ್ನುವುದು ಹೇಗೆಲ್ಲಾ ಬರುತ್ತೆ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಖುಷಿ ಖುಷಿಯಿಂದ ಕ್ರಿಕೆಟ್ ಮೈದಾನದಲ್ಲಿ ಆಡುತ್ತಿದ್ದ ಶ್ರೀಲಂಕಾದ ಹಿರಿಯ ಆಟಗಾರನ ಪ್ರಾಣಪಕ್ಷಿ ಹಾರಿ ಹೋಗಿದೆ. ಲಂಕಾದ 46 ವರ್ಷದ ಆಟಗಾರನೊಬ್ಬ ಮೈದಾನದಲ್ಲೇ ಕುಸಿದು ಬಿಟ್ಟು ಪ್ರಾಣಬಿಟ್ಟಿರುವ ಆಘಾತಕಾರಿ ಘಟನೆ ಇದೀಗ ಬೆಳಕಿಗೆ ಬಂದಿದೆ. ಶಾಲೆಯೊಂದರ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ವೇಳೆಯಲ್ಲಿ ಈ ದುರಂತ ಸಂಭವಿಸಿದೆ.
ವೈರ್ ನ್ಯೂಸ್ ವರದಿಯ ಪ್ರಕಾರ, ಬ್ಯಾಟಿಂಗ್ ಮಾಡುತ್ತಿದ್ದ ಆಟಗಾರ ಮೂರು ಎಸೆತಗಳನ್ನು ಎದುರಿಸಿ ಆರು ರನ್ ಗಳಿಸಿದ್ದ. ಈ ವೇಳೆ ಬ್ಯಾಟರ್ ಇದ್ದಕ್ಕಿದ್ದಂತೆಯೇ ಪಿಚ್‌ನಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಮೈದಾನದಲ್ಲಿದ್ದ ಎಲ್ಲಾ ಆಟಗಾರರು ಬ್ಯಾಟರ್‌ನತ್ತ ಓಡಿದ್ದಾರೆ. ತಕ್ಷಣವೇ ವೈದ್ಯಕೀಯ ತಂಡವು ಮೈದಾನದತ್ತ ಓಡಿ ಬಂದಿದೆ. ಇದಾಗಿ ಕೆಲ ಸಮಯದಲ್ಲೇ ಆ ಬ್ಯಾಟರ್‌ನನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ವೈದ್ಯರು ಆ ಆಟಗಾರ ಸಾವನ್ನಪ್ಪಿರುವ ವಿಚಾರವನ್ನು ಖಚಿತಪಡಿಸಿದರು. ಈ ಪಂದ್ಯವು ಆನ್‌ಲೈನ್‌ನಲ್ಲಿ ನೇರ ಪ್ರಸಾರವಾಗುತ್ತಿತ್ತು. ಶ್ರೀಲಂಕಾದ ಬೆರುವಾಲಾದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಹೀಗಿದೆ ನೋಡಿ ಆ ವೈರಲ್ ವಿಡಿಯೋ:
Heartbreaking tragedy in Beruwala. Sri Lanka 🇱🇰
A young cricketer collapsed and passed away while batting during a school old boys’ association cricket carnival today. He was on 6* off 3 balls when he suffered a suspected heart attack. The tournament has been suspended. pic.twitter.com/tUvjzbWuwH— Nibraz Ramzan (@nibraz88cricket) July 5, 2026
ಮಾಥ್ಯಮಗಳ ಪ್ರಾಥಮಿಕ ವರದಿಗಳ ಪ್ರಕಾರ, 46 ವರ್ಷದ ಆ ಆಟಗಾರನಿಗೆ ಹೃದಯಘಾತ ಸಂಭವಿಸಿರಬಹುದು ಎಂದು ಊಹಿಸಲಾಗುತ್ತಿದೆ. ಆದರೆ ಈ ಕುರಿತಂತೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬೆರುವಾಲಾದಲ್ಲಿ ನಡೆದ ಈ ದುರ್ಘಟನೆ ಇಡೀ ಶ್ರೀಲಂಕಾದ ಕ್ರಿಕೆಟ್ ವಲಯ ಒಂದು ರೀತಿ ಆಘಾತಕ್ಕೊಳಗಾಗಿದ್ದು, ಕಂಬನಿ ಮಿಡಿದಿದೆ.
ಬೆರುವಾಲಾದಲ್ಲಿ ಸಾವನ್ನಪ್ಪಿದ 46 ವರ್ಷದ ಆಟಗಾರನ ಹೆಸರು ಝುಲ್ಫಿಕರ್. ಲೈವ್ ಸ್ಕೋರ್‌ಕಾರ್ಡ್ ವರದಿ ಪ್ರಕಾರ, ಝುಲ್ಫಿಕರ್ ಆಡುತ್ತಿದ್ದಾಗ ಅವರ ತಂಡದ ಸ್ಕೋರ್ 3.4 ಓವರ್‌ಗೆ 5 ವಿಕೆಟ್ ನಷ್ಟಕ್ಕೆ 37 ರನ್‌ಗಳಾಗಿದ್ದವು. ಈ ದುರ್ಘಟನೆ ನಡೆಯುತ್ತಿದ್ದಂತೆಯೇ, ಈ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.