ವೈಭವ್ ಸೂರ್ಯವಂಶಿ ಅಬ್ಬರ, ಜಿಂಬಾಬ್ವೆ ವಿರುದ್ಧ ಟಿ20 ಸರಣಿಯಲ್ಲಿ ಭಾರತಕ್ಕೆ ಕ್ಲೀನ್ ಸ್ವೀಪ್ ಗೆಲುವು

Published : Jul 26, 2026, 08:18 PM IST
Zimbabwe vs India

ಸಾರಾಂಶ

3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ರನ್ ಗೆಲುವು ದಾಖಲಿಸಿದೆ. ಈ ಮೂಲಕ 3-0 ಅಂತರದ ಮೂಲಕ ಸರಣಿ ಕ್ಲೀನ್ ಸ್ಪೀಪ್ ಮಾಡಿಕೊಂಡಿದೆ. ಕೊನೆಯ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರ ಭಾರತದ ಗೆಲುವಿನಲ್ಲಿ ಪ್ರಮುಖ ಕಾರಣವಾಗಿದೆ.

ಹರಾರೆ (ಜು.26) ಸತತ ಸರಣಿ ಸೋಲಿನಿಂದ ಕಂಗೆಟ್ಟಿದ್ದ ಟೀಂ ಇಂಡಿಯಾ ಇದೀಗ ಜಿಂಬಾಬ್ವೆ ವಿರುದ್ದ 3-0 ಅಂತರದಲ್ಲಿ ಸರಣಿ ಕೈವಶ ಮಾಡಿದೆ. 3ನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, ಟೀಂ ಇಂಡಿಯಾದ ಸಂಘಟಿತ ದಾಳಿ ಮೂಲಕ ರನ್ ಗೆಲುವು ದಾಖಲಿಸಿದೆ. ಭಾರತ ನೀಡಿದ 193 ರನ್ ಗುರಿ ಬೆನ್ನಟ್ಟಲು ವಿಫಲವಾದ ಜಿಂಬಾಬ್ವೆ ರನ್ ಸಿಡಿಸಿ ಸೋಲೊಪ್ಪಿಕೊಂಡಿತು.

ರ್ಯಾನ್ ಬರ್ಲ್ ಏಕಾಂಗಿ ಹೋರಾಟ ಸಾಕಾಗಲಿಲ್ಲ

ಜಿಂಬಾಬ್ವೆ ತಂಡ ಮತ್ತೆ ಬ್ಯಾಟಿಂಗ್‌ನಲ್ಲಿ ಎಡವಿತು. ಭಾರತ ನೀಡಿದ ಟಾರ್ಗೆಟ್ ಚೇಸ್ ಮಾಡಲು ಸಾಧ್ಯವಾಗಲಿಲ್ಲ. ಆರಂಭಿಕ ಆಘಾತ, ಮಧ್ಯಮ ಕ್ರಮಾಂಕದ ಕುಸಿತದ ನಡುವೆ ರ್ಯಾನ್ ಬರ್ಲ್ ಹೋರಾಟ ನೀಡಿದರು. ಏಕಾಂಗಿ ಹೋರಾಟ ನೀಡಿ ಹಾಫ್ ಸೆಂಚುರಿ ಸಿಡಿಸಿದರು. ಆದರೆ ರ್ಯಾನ್ ಬರ್ಲ್ ಹೋರಾಟಕ್ಕೆ ಯಾರಿಂದಲೂ ಸಾಥ್ ಸಿಗಲಿಲ್ಲ. ಪರಿಣಾಮ 7 ವಿಕೆಟ್ ನಷ್ಟಕ್ಕೆ ರನ್ ಸಿಡಿಸಿ ಸೋಲಿಗೆ ಶರಣಾಯಿತು.

ಅಬ್ಬರಿಸಿದ ವೈಭವ್ ಸೂರ್ಯವಂಶಿ

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ನೀಡಿದರು. ಅಭಿಷೇಕ್ ಶರ್ಮಾ ಕೇವಲ 2 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಆದರೆ ವೈಭವ್ ಸೂರ್ಯವಂಶಿ ಆಟಕ್ಕೆ ಜಿಂಬಾಬ್ವೆ ಬಳಲಿ ಬೆಂಡಾಯಿತು. 49 ಎಸೆತದಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 81 ರನ್ ಸಿಡಿಸಿದರು. ವೈಭವ್ ಸೂರ್ಯವಂಶಿ ನೀಡಿದ ಆರಂಭದಿಂದ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು.

ಇಶಾನ್ ಕಿಶನ್ 29, ನಾಯಕ ಶ್ರೇಯಸ್ ಅಯ್ಯರ್ 25, ರಿಂಕು ಸಿಂಗ್ 25 ರನ್ ಹಾಗೂ ತಿಲಕ್ ವರ್ಮಾ ಅಜೇಯ 11 ರನ್ ಸಿಡಿಸಿದರು. ಈ ಮೂಲಕ ಭಾರತ 5 ವಿಕೆಟ್ ಕಳೆದುಕೊಂಡು 192 ರನ್ ಸಿಡಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಭಿಮಾನಿ ತಲೆ ಮೇಲೆ ಇಶಾನ್ ಕಿಶನ್ ಆಟೋಗ್ರಾಫ್, ನಕ್ಕು ಸುಸ್ತಾದ ಟೀಂ ಇಂಡಿಯಾ ಕ್ರಿಕೆಟರ್ಸ್ ವಿಡಿಯೋ
Kargil Vijay Divas: ಶತ್ರುಗಳ ಅಡಗುತಾಣದಲ್ಲೇ ಇಂಡಿಯನ್ ಸೋಲ್ಡಜರ್ಸ್ ಹಬ್ಬದೂಟ! ಕರಾಚಿ ಹಲ್ವಾ, ಡ್ರೈಪ್ರೂಟ್ಸ್‌ ತಿಂದ ವೀರರಿಗೆ ಕಾದಿತ್ತಾ ವಿಷದ ಆಘಾತ?