ಅಭಿಮಾನಿ ತಲೆ ಮೇಲೆ ಇಶಾನ್ ಕಿಶನ್ ಆಟೋಗ್ರಾಫ್, ನಕ್ಕು ಸುಸ್ತಾದ ಟೀಂ ಇಂಡಿಯಾ ಕ್ರಿಕೆಟರ್ಸ್ ವಿಡಿಯೋ

Published : Jul 26, 2026, 06:43 PM IST
Ishan Kishan Unique Autograph

ಸಾರಾಂಶ

ಬೇಡ ಎಂದರೂ ಕೇಳಲಿಲ್ಲ, ಇಲ್ಲೇ ಸಹಿ ಮಾಡಬೇಕು ಎಂದು ಅಭಿಮಾನಿ ತನ್ನ ಬೋಳು ತಲೆ ತೋರಿಸಿಕೊಟ್ಟಿದ್ದಾರೆ. ಅಭಿಮಾನಿಯ ಮಾತಿಗೆ ಮಣಿದ ಟೀಂ ಇಂಡಿಯಾ ಕ್ರಿಕೆಟಿಗ ಇಶಾನ್ ಕಿಶನ್, ಆತನ ತಲೆ ಮೇಲೆ ಆಟೋಗ್ರಾಫ್ ಹಾಕಿದ್ದಾರೆ.

ಹರಾರೆ (ಜು.26) ಟೀಂ ಇಂಡಿಯಾ ಕ್ರಿಕೆಟಿಗರು ಎಲ್ಲೇ ಹೋದರು ಅಭಿಮಾನಿಗಳಿರುತ್ತಾರೆ. ಸದ್ಯ ಜಿಂಬಾಬ್ವೆಯಲ್ಲಿ ಟಿ20 ಸರಣಿ ಆಡುತ್ತಿರುವ ಟೀಂ ಇಂಡಿಯಾಗೆ ಕ್ರೀಡಾಂಗಣದಲ್ಲಿ ಭರ್ಜರಿ ಅಭಿಮಾನಿಗಳ ಬೆಂಬಲ ವ್ಯಕ್ತವಾಗುತ್ತಿದೆ. ಇದರ ನಡುವೆ ವಿಶೇಷ ಘಟನೆಯೊಂದು ನಡೆದಿದೆ. ಅಭಿಮಾನಿಯೊಬ್ಬರು ಇಶಾನ್ ಕಿಶನ್ ಬಳಿ ಆಟೋಗ್ರಾಪ್ ಪಡೆದಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ಆಟೋಗ್ರಾಫ್ ಪಡೆದುದ್ದು, ಜರ್ಸಿ ಮೇಲೆ, ಪುಸ್ತಕ, ಬ್ಯಾಟ್, ಬಾಲ್ ಯಾವುದೂ ಅಲ್ಲ, ತನ್ನ ಬೋಳು ತಲೆ ಮೇಲೆ.

ಆಟೋಗ್ರಾಫ್ ನೀಡಲು ಹೋದ ಕಿಶನ್‌ಗೆ ಅಚ್ಚರಿ

ಹರಾರೆಯಲ್ಲಿ ನಡೆಯುತ್ತಿರುವ ಟಿ20 ಸರಣಿ ವೇಳೆ ಈ ಘಟನೆ ನಡೆದಿದೆ. ಪೆವಿಲಿಯನ್‌ನತ್ತ ಬರುತ್ತಿದ್ದ ಇಶಾನ್ ಕಿಶನ್ ಕೂಗಿ ಕರೆದ ಅಭಿಮಾನಿ ಆಟೋಗ್ರಾಫ್ ನೀಡುವಂತೆ ಮನವಿ ಮಾಡಿದ್ದಾರೆ. ಸರಿ ಎಂದು ಹತ್ತಿರ ಹೋದಾಗ ಇಶಾನ್ ಕಿಶನ್‌ಗೆ ಅಚ್ಚರಿಯಾಗಿದೆ. ಆಟೋಗ್ರಾಫ್ ಹಾಕಲು ತನ್ನ ಬೋಳು ತಲೆ ತೋರಿಸಿದ ಅಭಿಮಾನಿ, ಇಲ್ಲಿ ಸಹಿ ಮಾಡಿ ಎಂದಿದ್ದಾನೆ. ತಕ್ಷಣವೇ ಇಶಾನ್ ಕಿಶನ್ ಬೇಡ ಎಂದು ನಗುತ್ತಲೇ ಹೇಳಿದ್ದಾರೆ. ಆದರೆ ಅಭಿಮಾನಿ ಮಾತ್ರ ಕೇಳಲೇ ಇಲ್ಲ. ಇಲ್ಲೆ ಆಟೋಗ್ರಾಫ್ ಸಹಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇಶಾನ್ ಕಿಶನ್ ಕೈಹಿಡಿದು ಇಲ್ಲಿ ಸಹಿ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಅಭಿಮಾನಿಯ ಒತ್ತಾಯಕ್ಕೆ ಇಶಾನ್ ಕಿಶನ್ ಬೋಳು ತಲೆ ಮೇಲೆ ಸಹಿ ಮಾಡಿದ್ದಾರೆ. ಅಭಿಮಾನಿಯ ನಡೆ ಇಶಾನ್ ಕಿಶನ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡಿತ್ತು. ಇತ್ತ ಬೋಳು ತಲೆ ಮೇಲೆ ಇಶಾನ್ ಕಿಶನ್ ಆಟೋಗ್ರಾಫ್ ಪಡೆದ ಅಭಿಮಾನಿ ಸಂಭ್ರಮಾಚರಿಸಿದ್ದಾರೆ.

2ನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 44 ಎಸೆತದಲ್ಲಿ 81 ರನ್ ಸಿಡಿಸಿದ್ದರು. ಅದ್ಭುತ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ರೂವಾರಿಯಾದ ಇಶಾನ್ ಕಿಶನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದರು. ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ 29 ರನ್ ಸಿಡಿಸಿ ಔಟಾಗಿದ್ದರು.

ಜಿಂಬಾಬ್ವೆ ವಿರುದ್ದದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಆರಂಭಿಕ 2 ಪಂದ್ಯ ಗೆದ್ದು ಸರಣಿ ಕೈವಶ ಮಾಡಿದೆ. ಮೂರನೇ ಪಂದ್ಯದಲ್ಲಿ ಜಿಂಬಾಬ್ವೆಗೆ 193 ರನ್ ಟಾರ್ಗೆಟ್ ನೀಡಿದೆ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳಾ ಏಷ್ಯಾಕಪ್‌ ಟಿ20: ಇಂದು ಭಾರತ ಎದುರು ಪಾಕಿಸ್ತಾನಕ್ಕೆ ಡು ಆರ್ ಡೈ ಮ್ಯಾಚ್! ಎಷ್ಟು ಗಂಟೆಗೆ ಆರಂಭ? ನೇರ ಪ್ರಸಾರ ಎಲ್ಲಿ?
Cricket: ಹಿಟ್‌ಮ್ಯಾನ್ ಅಸಲಿ ವೈರಿ ಯಾರು? ಟೀಂ ಇಂಡಿಯಾದಲ್ಲಿ ನಡೀತಿರೋ ಈ ಕಳಪೆ ಗೇಮ್ ಪ್ಲಾನ್ ಏನು? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್!