ಇಂಗ್ಲೆಂಡ್ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ, ಕ್ರಿಕೆಟ್ ದೇವರ ದಾಖಲೆ ಮುರಿದ ಯುವ ಆಟಗಾರ

Published : Jul 04, 2026, 07:20 PM IST
Vaibhav Suryavanshi

ಸಾರಾಂಶ

ಇಂಗ್ಲೆಂಡ್ ನೆಲದಲ್ಲಿ ಭಾರತದ ಕಿರಿಯ ಆಟಗಾರ, ಜಗತ್ತಿನ ಕಣ್ಮಣಿ ವೈಭವ್ ಸೂರ್ಯವಂಶಿ ಅಬ್ಬರ ಶುರುವಾಗಿದೆ. ವೈಭವ್ ಸೂರ್ಯವಂಶಿ ಮೈದಾನಕ್ಕೆ ಕಾಲಿಡ್ತಿದ್ದಂತೆ ಹೊಸ ದಾಖಲೆ ಸೃಷ್ಟಿಯಾಗಿದೆ.

ಭಾರತ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಶುರುವಾಗ್ತಿದ್ದಂತೆ ಭಾರತ ಕ್ರಿಕೆಟ್ ನಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಕೊನೆಗೂ ವೈಭವ್ ಸೂರ್ಯವಂಶಿಗೆ ಅವಕಾಶ ಸಿಕ್ಕಿದೆ. ವೈಭವ್ ಸೂರ್ಯವಂಶಿ ಮೈದಾನಕ್ಕಿಳಿಯುತ್ತಿದ್ದಂತೆ ಹೊಸ ದಾಖಲೆ ಸೃಷ್ಟಿಯಾಗಿದೆ. ಅತಿ ಕಡಿಮೆ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರರಾಗಿದ್ದಾರೆ.

ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಸೂರ್ಯವಂಶಿ

ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆಯುತ್ತಿರುವ ಟಿ 20 ಪಂದ್ಯದಲ್ಲಿ, ವೈಭವ್ ಮೈದಾನಕ್ಕಿಳಿದ ತಕ್ಷಣ ಇತಿಹಾಸ ನಿರ್ಮಿಸಿದ್ದಾರೆ. ಭಾರತಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಎಡಗೈ ಬ್ಯಾಟ್ಸ್ಮನ್ ವೈಭವ್ ಪಾತ್ರರಾಗಿದ್ದಾರೆ. ಉಪನಾಯಕ ತಿಲಕ್ ವರ್ಮಾ ಅವರಿಗೆ ಚೊಚ್ಚಲ ಕ್ಯಾಪ್ ನೀಡಿದ್ರು. ವೈಭವ್ ಭಾರತಕ್ಕಾಗಿ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ 122 ನೇ ಆಟಗಾರ.

ಧರ್ಮಸಂಕಟಕ್ಕೆ ಸಿಲುಕಿದ ಕಾವ್ಯ ಮಾರನ್ ಖರೀದಿಸಿದ ಪಾಕಿಸ್ತಾನಿ ಆಟಗಾರ..!

ವೈಭವ್ ಸೂರ್ಯವಂಶಿ 15 ವರ್ಷ 99 ದಿನದಂದು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ. ಈ ಮೂಲಕ ವೈಭವ್, ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನವೆಂಬರ್ 15, 1989 ರಂದು ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವಾಗ ಅವರಿಗೆ 16 ವರ್ಷ 205 ದಿನಗಳಾಗಿತ್ತು.

ವೈಭವ್ ಸೂರ್ಯವಂಶಿ ಪುರುಷರ ಕ್ರಿಕೆಟ್ನಲ್ಲಿ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ನ ದಾಖಲೆಗಳಲ್ಲಿಯೂ ಅಗ್ರ ಸ್ಥಾನವನ್ನು ಗಳಿಸಿದ್ದಾರೆ. ಶೆಫಾಲಿ ವರ್ಮಾ ಭಾರತ ಮಹಿಳಾ ಕ್ರಿಕೆಟ್ನಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಶೆಫಾಲಿ 15 ವರ್ಷ ಮತ್ತು 239 ದಿನದಂದು ಭಾರತೀಯ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಅವರು ಸೆಪ್ಟೆಂಬರ್ 24, 2019 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಆಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.

ಸೋಲುಗಳ ಬೆನ್ನಲ್ಲೇ ಭಾರತ ಟಿ20 ತಂಡದಿಂದ ಹೊರಬಿದ್ದ ಸೂರ್ಯಕುಮಾರ್ ಹೇಳಿದ್ದೇನು? ವೈರಲ್ ವಿಡಿಯೋ

ಐಪಿಎಲ್ ಮತ್ತು ಶ್ರೀಲಂಕಾದಲ್ಲಿ ಅದ್ಭುತ ಪ್ರದರ್ಶನ

ಕಳೆದ ಕೆಲವು ತಿಂಗಳುಗಳಿಂದ ಭಾರತೀಯ ಕ್ರಿಕೆಟ್ನಲ್ಲಿ ವೈಭವ್ ಸೂರ್ಯವಂಶಿ ಹೆಸರು ಪ್ರತಿಧ್ವನಿಸುತ್ತಿದೆ. ಐಪಿಎಲ್ 2026 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ವೈಭವ್ ಬ್ಯಾಟ್ನಿಂದ ಸದ್ದು ಮಾಡಿದ್ದರು. ಅವರ ಬ್ಯಾಟಿಂಗ್ ಇಡೀ ಜಗತ್ತಿಗೆ ಅವರನ್ನು ಪರಿಚಯಿಸಿತ್ತು. ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ್ದ ವೈಭವ್, 776 ರನ್ ಗಳಿಸಿದ್ದರು.

ಐಪಿಎಲ್ ನಂತರ, ವೈಭವ್ ಸೂರ್ಯವಂಶಿ ಭಾರತ ಎ ಪರ ಆಡುವ ಅವಕಾಶ ಪಡೆದಿದ್ದರು. ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ನಲ್ಲಿ, ಅವರು ಮತ್ತೊಂದು ಪ್ರಮುಖ ದಾಖಲೆ ಬರೆದಿದ್ದರು. ಶ್ರೀಲಂಕಾ ಎ ವಿರುದ್ಧದ ಪ್ರಶಸ್ತಿ ಪಂದ್ಯದಲ್ಲಿ, ವೈಭವ್ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು. ಇದು ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಬ್ಯಾಟ್ಸ್ಮನ್ನ ಅತ್ಯಂತ ವೇಗದ ಅರ್ಧಶತಕವಾಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೋಲುಗಳ ಬೆನ್ನಲ್ಲೇ ಭಾರತ ಟಿ20 ತಂಡದಿಂದ ಹೊರಬಿದ್ದ ಸೂರ್ಯಕುಮಾರ್ ಹೇಳಿದ್ದೇನು? ವೈರಲ್ ವಿಡಿಯೋ
ಧರ್ಮಸಂಕಟಕ್ಕೆ ಸಿಲುಕಿದ ಕಾವ್ಯ ಮಾರನ್ ಖರೀದಿಸಿದ ಪಾಕಿಸ್ತಾನಿ ಆಟಗಾರ..!