'ಅದೆಲ್ಲಾ ಕ್ರಿಕೆಟ್‌ನಲ್ಲಿ ಕಾಮನ್'; ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಅನುಭವಿಸಿದ ಘಟನೆ ಬಿಚ್ಚಿಟ್ಟ ವೈಭವ್ ಸೂರ್ಯವಂಶಿ

Published : Jul 22, 2026, 09:52 PM IST
Vaibhav Sooryavanshi

ಸಾರಾಂಶ

ಇಂಗ್ಲೆಂಡ್ ಸರಣಿಯಿಂದ ಕೈಬಿಟ್ಟ ಬಳಿಕ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಮತ್ತೆ ಪುಟಿದೇಳಲು ಸಜ್ಜಾಗಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಗೆ ಆತ್ಮವಿಶ್ವಾಸದಿಂದಿರುವ ಅವರು, ಈ ಹಿಂದೆ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಶತಕ ಸಿಡಿಸಿದ್ದ ಹರಾರೆ ಮೈದಾನದಲ್ಲೇ ಮತ್ತೆ ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದ್ದಾರೆ.

ಹರಾರೆ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮೂಲಕ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಯುವ ಆಟಗಾರ ವೈಭವ್ ಸೂರ್ಯವಂಶಿ, ಆ ಸರಣಿಯಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಹೀಗಾಗಿ, ಇಂಗ್ಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯದಿಂದ ವೈಭವ್ ಅವರನ್ನು ಕೈಬಿಡಲಾಗಿತ್ತು. ಈ ಸರಣಿಯನ್ನು ಭಾರತ 0-4 ಅಂತರದಲ್ಲಿ ಹೀನಾಯವಾಗಿ ಸೋತಿತ್ತು. ಕೇವಲ ಮೂರು ಇನ್ನಿಂಗ್ಸ್‌ಗಳ ನಂತರ ಯುವ ಓಪನರ್‌ನನ್ನು ತಂಡದಿಂದ ಕೈಬಿಟ್ಟ ಮ್ಯಾನೇಜ್‌ಮೆಂಟ್ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗರಿಂದ ದೊಡ್ಡ ಮಟ್ಟದ ಟೀಕೆ ವ್ಯಕ್ತವಾಗಿತ್ತು.

ಈ ಬಗ್ಗೆ ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವೈಭವ್, "ಕಳೆದ ನಾಲ್ಕು ತಿಂಗಳಲ್ಲಿ ಸಾಕಷ್ಟು ಏರಿಳಿತಗಳನ್ನು ನೋಡಿದ್ದೇನೆ. ಇದೆಲ್ಲಾ ಕ್ರಿಕೆಟ್‌ನ ಒಂದು ಭಾಗ, ಇದು ಹೀಗೆಯೇ ಮುಂದುವರಿಯುತ್ತೆ. ಆದರೆ ನಾನು ನನ್ನ ಆಟದ ಮೇಲೆ ಗಮನ ಹರಿಸಿ, ತಂಡಕ್ಕಾಗಿ 100% ಶ್ರಮ ಹಾಕಬೇಕು. ನನಗೆ ಬೇಕಾದ ಎಲ್ಲಾ ಮಾರ್ಗದರ್ಶನವನ್ನು ಕೋಚ್‌ಗಳು ನೀಡುತ್ತಿದ್ದಾರೆ. ಅಗತ್ಯವಿರುವ ತರಬೇತಿಯೂ ಸಿಗುತ್ತಿದೆ. ನಾನೀಗ ಆತ್ಮವಿಶ್ವಾಸದಿಂದ ಇದ್ದೇನೆ," ಎಂದು ಹೇಳಿದ್ದಾರೆ.

ಹರಾರೆ ಮೈದಾನದಲ್ಲೇ ಈಗಾಗಲೇ ಶತಕ ಚಚ್ಚಿರುವ ವೈಭವ್ ಸೂರ್ಯವಂಶಿ!

ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದ ಪ್ಲೇಯಿಂಗ್ XI ನಿಂದ ಕೈಬಿಟ್ಟಾಗ ವೈಭವ್ ತೀವ್ರ ನಿರಾಸೆಗೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ ಇಂತಹ ಹಿನ್ನಡೆಗಳನ್ನು ಎದುರಿಸುವುದು ಕಷ್ಟ. ಆದರೆ, ತನ್ನ ಸುತ್ತಮುತ್ತಲಿನವರಿಂದ ಸಿಕ್ಕ ಬೆಂಬಲವು ಮುಂದೆ ಸಾಗಲು ಮತ್ತು ಆಟದ ಮೇಲೆ ಗಮನ ಕೇಂದ್ರೀಕರಿಸಲು ಸಹಾಯ ಮಾಡಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನಡೆದ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ವೈಭವ್ ಪ್ರಮುಖ ಪಾತ್ರ ವಹಿಸಿದ್ದರು.

ಇದೇ ಹರಾರೆ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅವರು ಕೇವಲ 80 ಎಸೆತಗಳಲ್ಲಿ 175 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಈ ಮೈದಾನದೊಂದಿಗಿನ ನಂಟಿನ ಬಗ್ಗೆ ಮಾತನಾಡಿದ ಅವರು, "ಈ ಗ್ರೌಂಡ್‌ನಲ್ಲಿ ನನಗೆ ತುಂಬಾ ನೆನಪುಗಳಿವೆ. ಕೇವಲ ನಾಲ್ಕು ತಿಂಗಳ ಹಿಂದೆ, ನಾವು ಇಲ್ಲಿ ಅಂಡರ್-19 ವಿಶ್ವಕಪ್ ಫೈನಲ್ ಆಡಿ ಟ್ರೋಫಿ ಗೆದ್ದಿದ್ದೆವು. ಹಾಗಾಗಿ ಇದೊಂದು ವಿಶೇಷವಾದ ಮೈದಾನ. ಭಾರತವನ್ನು ಪ್ರತಿನಿಧಿಸುವುದು ಪ್ರತಿಯೊಬ್ಬರ ಕನಸು, ಅದೊಂದು ವಿಶೇಷ ಕ್ಷಣ. ನಾನು ಇದನ್ನು ನಿಜವಾಗಿಯೂ ಎಂಜಾಯ್ ಮಾಡುತ್ತಿದ್ದೇನೆ," ಎಂದು ವೈಭವ್ ತಿಳಿಸಿದರು.

"ಅಂಡರ್-19 ವಿಶ್ವಕಪ್ ಆಡುವಾಗ ಇಲ್ಲಿನ ಪಿಚ್‌ಗಳು ಮತ್ತು ಪರಿಸ್ಥಿತಿಗಳ ಬಗ್ಗೆ ನನಗೆ ಒಳ್ಳೆಯ ಕಲ್ಪನೆ ಸಿಕ್ಕಿದೆ. ಹಾಗಾಗಿ, ಆ ಟೂರ್ನಿಯಿಂದ ನಾನು ಪಡೆದ ಅನುಭವವನ್ನು ಈಗಿನ ಪಂದ್ಯಗಳಲ್ಲಿ ಬಳಸಿಕೊಂಡು ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇನೆ. ನಾನು ಮಾಡಿದ ಅಭ್ಯಾಸ ಮತ್ತು ನನ್ನ ಆಟದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತ-ಜಿಂಬಾಬ್ವೆ ಟಿ20 ಸರಣಿ ಕಿರು ಮಾಹಿತಿ

ಭಾರತ-ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಜುಲೈ 23ರಿಂದ ಆರಂಭವಾಗಲಿದ್ದು, ಮೂರೂ ಪಂದ್ಯಗಳು ಹರಾರೆ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆಯಲಿವೆ. ಇನ್ನು ಭಾರತೀಯ ಕಾಲಮಾನ ಸಂಜೆ 4.30ರಿಂದ ಪಂದ್ಯಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಈ ಬಾರಿ ಜಿಯೋ ಫೈಬರ್‌ ಸಂಪರ್ಕ ಹೊಂದಿರುವವರು ಯುನೈಟ್8 ಚಾನೆಲ್‌ನಲ್ಲಿ ಈ ಮ್ಯಾಚ್ ವೀಕ್ಷಿಸಬಹುದು. ಇದರ ಜತೆಗೆ ಡಿಡಿ ಸ್ಪೋರ್ಟ್ಸ್ ಹಾಗೂ ಓಟಿಟಿಯಲ್ಲಿ ಫ್ಯಾನ್‌ ಕೋಡ್‌ನಲ್ಲೂ ಭಾರತ-ಜಿಂಬಾಬ್ವೆ ನಡುವಿನ ಟಿ20 ಮ್ಯಾಚ್ ವೀಕ್ಷಿಸಬಹುದಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಇದೇ ಮೈದಾನದಲ್ಲಿ ಇತಿಹಾಸ ಬರೆದಿದ್ದೆವು': ಹರಾರೆ ತಲುಪುತ್ತಿದ್ದಂತೆ ಭಾವಕರಾದ ವೈಭವ್ ಸೂರ್ಯವಂಶಿ!
ಟೀಂ ಇಂಡಿಯಾದ ಮೊದಲ ಟಿ20 ಕ್ಯಾಪ್ಟನ್ ಯಾರು ಗೊತ್ತಾ? ಧೋನಿಯಂತೂ ಅಲ್ಲವೇ ಅಲ್ಲ