ರಣಜಿ ಟ್ರೋಫಿ: ವಾಸುಕಿ ಕೌಶಿಕ್ ವೇಗಕ್ಕೆ ಉತ್ತರ ಪ್ರದೇಶ ತತ್ತರ!

Published : Nov 14, 2024, 08:40 AM IST
ರಣಜಿ ಟ್ರೋಫಿ: ವಾಸುಕಿ ಕೌಶಿಕ್ ವೇಗಕ್ಕೆ ಉತ್ತರ ಪ್ರದೇಶ ತತ್ತರ!

ಸಾರಾಂಶ

ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತರ ಪ್ರದೇಶ ಎದುರು ಕರ್ನಾಟಕ ತಂಡವು ಮೊದಲ ದಿನವೇ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. ವಿ ಕೌಶಿಕ್ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಲಖನೌ: ಸತತ 2ನೇ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದ ವೇಗಿ ವಾಸುಕಿ ಕೌಶಿಕ್, ಉತ್ತರ ಪ್ರದೇಶ ವಿರುದ್ಧದ 'ಸಿ' ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲ ದಿನವೇ ಮೇಲುಗೈ ಸಾಧಿಸಲು ನೆರವಾದರು. ಕೌಶಿಕ್‌ ವೇಗದ ದಾಳಿಗೆ ತತ್ತರಿಸಿದ ಉತ್ತರ ಪ್ರದೇಶ ಮೊದಲ ಇನ್ನಿಂಗ್ನಲ್ಲಿ ಕೇವಲ 89 ರನ್‌ಗೆ ಆಲೌಟ್ ಆಯಿತು. 

ಎಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೌಶಿಕ್ 16 ಓವರಲ್ಲಿ 8 ಮೇಡನ್ ಹಾಕಿ ಕೇವಲ 20 ರನ್ ಗೆ 5 ವಿಕೆಟ್ ಕಬಳಿಸಿದರು. ಕಳೆದ ಪಂದ್ಯದಲ್ಲಿ ಬಂಗಾಳ ವಿರುದ್ದ ಕೌಶಿಕ್ 38ಕ್ಕೆ 5 ವಿಕೆಟ್ ಉರುಳಿಸಿದ್ದರು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಉತ್ತರ ಪ್ರದೇಶ 5 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ನಾಯಕ ಆರ್ಯನ್ ಜುಯಲ್ ಸೊನ್ನೆಗೆ ಔಟಾದರು. 37 ರನ್ ಆಗುವಷ್ಟರಲ್ಲಿ ಮತ್ತೆ 3 ವಿಕೆಟ್‌ಗಳು ಪತನಗೊಂಡವು. ಸಮೀರ್ ರಿಜ್ಜಿ25, ಕೃತಗ್ಯ ಸಿಂಗ್ 13, ಸೌರಭ್ ಕುಮಾರ್ 13 ರನ್ ಗಳಿಸಿದರು. ಯುವ ವೇಗಿಗಳಾದ ವಿದ್ಯಾಧ‌ ಪಾಟೀಲ್ (2/22)ಹಾಗೂ ಚೊಚ್ಚಲ ಪಂದ್ಯವಾಡುತ್ತಿರುವ ಯಶೋವರ್ಧನ್ (1/19) ಸಹ ಉತ್ತಮ ಪ್ರದರ್ಶನ ತೋರಿದರು.

ತಿಲಕ್ ವರ್ಮಾ ಭರ್ಜರಿ ಸೆಂಚುರಿ, ಹರಿಣಗಳೆದುರು ಭಾರತ ಜಯಭೇರಿ!

ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೂ ಆರಂಭಿಕ ಆಘಾತ ಎದುರಾಯಿತು. ನಿಕಿನ್ ಜೋಸ್ ಹಾಗೂ ಆರ್. ಸಮರ್ಥ್ ಇಬ್ಬರೂ ಖಾತೆ ತೆರೆಯುವ ಮೊದಲೇ ಔಟಾದರು. ನಾಯಕ ಮಯಾಂಕ್ ಅಗ‌ರ್‌ವಾಲ್ (30) ಹಾಗೂ ಚೊಚ್ಚಲ ಪಂದ್ಯವಾಡುತ್ತಿರುವ ಕೃಷ್ಣನ್ ಶ್ರೀಜಿತ್ ನಡುವಿನ 48 ರನ್ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು. ಮನೀಶ್ ಪಾಂಡೆ ಹಾಗೂ ಅಭಿನವ್ ಮನೋಹರ್ ಇಬ್ಬರೂ ತಲಾ 6 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಬಿರುಸಿನ ಬ್ಯಾಟಿಂಗ್‌ ನಡೆಸಿದ ಶ್ರೀಜಿತ್ 77 ಎಸೆತದಲ್ಲಿ 68 ರನ್ ಗಳಿಸಿ ಔಟಾಗದೆ ಉಳಿದರು. ಶ್ರೇಯಸ್‌ ಗೋಪಾಲ್ 14 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಂತ್ಯಕ್ಕೆ ಕರ್ನಾಟಕ 5 ವಿಕೆಟ್‌ಗೆ 127 ರನ್ ಗಳಿಸಿ, 38 ರನ್ ಮುನ್ನಡೆ ಪಡೆದಿದೆ.

ಸ್ಕೋರ್: ಉ.ಪ್ರದೇಶ 40 .3 ಓವರಲ್ಲಿ 89/10 (ಸಮೀರ್ 25, ಕೌಶಿಕ್ 5-20), ಕರ್ನಾಟಕ (1ನೇ ದಿನದಂತ್ಯಕ್ಕೆ) 127/5 (ಶ್ರೀಜಿತ್ 68*,
ಮಯಾಂಕ್ 30, ಅಕಿಬ್ 2-31)

ಅಂಡರ್-19: ಭಾರತ ತಂಡಕ್ಕೆ ರಾಜ್ಯದ ಹಾರ್ದಿಕ್, ಸಮರ್ಥ್

ನವದೆಹಲಿ: ನ.29ರಿಂದ ಯುಎಇನಲ್ಲಿ ಆರಂಭಗೊಳ್ಳಲಿರುವ ಅಂಡರ್ -19 ಏಷ್ಯಾಕಪ್ ಏಕದಿನ ಟೂರ್ನಿಗೆ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಬುಧವಾರ ಪ್ರಕಟಿಸಿದೆ. ತಂಡದಲ್ಲಿ ಕರ್ನಾಟಕದ ಆಕ್ರೌಂಡರ್ ಹಾರ್ದಿಕ್ ರಾಜ್ ಹಾಗೂ ವೇಗಿ ಸಮರ್ಥ ನಾಗರಾಜ್‌ ಆಯ್ಕೆಯಾಗಿದ್ದಾರೆ. 

ಐಪಿಎಲ್ ಮೆಗಾ ಹರಾಜು: ಅನ್‌ಸೋಲ್ಡ್ ಭೀತಿಯಲ್ಲಿದ್ದಾರೆ ಈ 5 ವಿದೇಶಿ ಸ್ಟಾರ್ ಪ್ಲೇಯರ್ಸ್!

ಭಾರತ ತಂಡವನ್ನು ಮೊಹಮದ್ ಅಮಾನ್ ಮುನ್ನಡೆಸಲಿದ್ದಾರೆ. 'ಎ' ಗುಂಪಿನಲ್ಲಿರುವ ಭಾರತ ತಂಡ ನ.30ರಂದು ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ. ಡಿ.2ಕ್ಕೆ ಜಪಾನ್, ಡಿ.4ಕ್ಕೆ ಯುಎಇ ವಿರುದ್ದ ಸೆಣಸಲಿದೆ. ಮತ್ತೊಂದು ಗುಂಪಿನಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ ಹಾಗೂ ಶ್ರೀಲಂಕಾ ತಂಡಗಳಿವೆ. ಡಿ.6ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಡಿ.8ಕ್ಕೆ ಫೈನಲ್ ನಿಗದಿಯಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ