ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಆಯ್ಕೆಯ ಹಿಂದೆ ಧೋನಿಯ ಕಾಣದ ಕೈ ಕೆಲಸ ಮಾಡಿದೆ ಎಂದು ನೆಟ್ಟಿಗರು ಮೀಮ್ಸ್ ಮಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು: 2024ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬದ್ದ ಎದುರಾಳಿ ಡೆಮೊಕ್ರಾಟಿಕ್ ಪಕ್ಷದ ಕಮಲಾ ಹ್ಯಾರಿಸ್ ಎದುರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ನಡೆದ 2020 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡಿದ್ದ ಟ್ರಂಪ್, ಇದೀಗ 295 ಎಲೆಕ್ಟ್ರೋಲ್ ಮತಗಳನ್ನು ಪಡೆಯುವ ಮೂಲಕ ಇದೀಗ 47ನೇ ಅಮೆರಿಕ ಅಧ್ಯಕ್ಷರಾಗಿ ವೈಟ್ ಹೌಸ್‌ಗೆ ಮರಳಿದ್ದಾರೆ.
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲು 270 ಎಲೆಕ್ಟ್ರೋಲ್ ಮತಗಳ ಅಗತ್ಯವಿತ್ತು. 78 ವರ್ಷದ ಡೊನಾಲ್ಡ್ ಟ್ರಂಪ್ 295 ಎಲೆಕ್ಟ್ರೋಲ್ ಮತ(50.7%) ಮತಗಳನ್ನು ಪಡೆಯುವ ಮೂಲಕ ಸ್ಪಷ್ಟವಾಗಿ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಡೊನಾಲ್ಡ್ ಟ್ರಂಪ್ ಪ್ರತಿಸ್ಪರ್ಧಿ ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ 226 ಎಲೆಕ್ಟ್ರೋಲ್ ಮತ ಪಡೆಯುವಲ್ಲಿ ಯಶಸ್ವಿಯಾದರು. ಒಟ್ಟಾರೆ ಚಲಾವಣೆಗೊಂಡ ಮತದಾನದಲ್ಲಿ ಕಮಲಾ ಹ್ಯಾರಿಸ್ 47.7% ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಐಪಿಎಲ್ ಮೆಗಾ ಹರಾಜಿನಲ್ಲಿ ಈ ಮೂರು ವೇಗಿಗಳ ಮೇಲೆ ಹಣದ ಸುರಿಮಳೆ? ಸ್ಟಾರ್ಕ್ ರೆಕಾರ್ಡ್ ಕೂಡಾ ಬ್ರೇಕ್?
ಇನ್ನು ಡೊನಾಲ್ಡ್ ಟ್ರಂಪ್ ಗೆಲುವಿನ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವೂ ಇದೆ ಎಂದು ಅಭಿಮಾನಿಗಳು ಹೇಳುತ್ತಲೇ ಬಂದಿದ್ದಾರೆ. ಅದೇ ರೀತಿ ಕ್ರಿಕೆಟ್ ಸ್ನೇಹಿಯಾಗಿರುವ ಡೊನಾಲ್ಡ್ ಟ್ರಂಪ್ ಗೆಲುವಿನ ಹಿಂದೆ ಧೋನಿಯ ಪಾತ್ರವಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಸಾಗರ್ ಸಾವಂತ್ ಎನ್ನುವ ನೆಟ್ಟಿಗರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವಿಗೆ ಧೋನಿ ಜೆರ್ಸಿ ನಂಬರ್ 7 ಅನ್ನು ಲಿಂಕ್ ಮಾಡಿದ್ದಾರೆ.
“ಇವತ್ತಿನ ದಿನಾಂಕ 6/11/2024
6+1+1+2+0+2+4=16
1+6=7
ಮೆಸೇಜ್ ಸ್ಪಷ್ಟವಾಗಿದೆ" ಎಂದು ಸಾವಂತ್ ಬರೆದುಕೊಂಡಿದ್ದಾರೆ.
ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯಕ್ಕೆ ಬಲಿಷ್ಠ ಸಂಭಾವ್ಯ ತಂಡ ಪ್ರಕಟ! ಯಾರಿಗೆಲ್ಲಾ ಸ್ಥಾನ?
Today’s date is 6/11/2024
6+1+1+2+0+2+4=16
1+6=7
The message is clear pic.twitter.com/paGQt494Fs
ಈ ಪೋಸ್ಟ್ ಜತೆಗೆ ಅಮೆರಿಕದ ಮಾಜಿ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರ ಜತೆ ಧೋನಿ ನ್ಯೂಯಾರ್ಕ್‌ನಲ್ಲಿ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಗಾಲ್ಫ್ ಆಡುವಾಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಧೋನಿ ಅಪ್ಪಟ ಅಭಿಮಾನಿಗಳು ಎಲ್ಲೇ 7 ನಂಬರ್ ಕಾಣಿಸಿಕೊಂಡರೂ ಅದಕ್ಕೆ ಧೋನಿಯೇ ಕಾರಣ ಎನ್ನುವಂತೆ ಬಿಂಬಿಸುತ್ತಾ ಬಂದಿದ್ದಾರೆ. ಇದು ಯಾವ ಮಟ್ಟಿಗೆ ಟ್ರೆಂಡ್ ಆಗಿದೆ ಎಂದರೇ ಧೋನಿಯನ್ನು ಟೀಕಿಸುವವರು ವ್ಯಂಗ್ಯದ ರೀತಿಯಲ್ಲೂ 'ಥಾಲಾ ಫಾರ್ ಎ ರೀಸನ್' ಅನ್ನು ಬಳಸುತ್ತಾ ಬಂದಿದ್ದಾರೆ.