
ಬೆನೊನಿ(ಜ.30): ಕ್ರಿಸ್ಟನ್ ಕ್ಲಾರ್ಕ್ (ಅಜೇಯ 46) ಜೊಯ್ ಫೀಲ್ಡ್ (ಅಜೇಯ 38) ಹೋರಾಟದ ನೆರವಿನಿಂದ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ವಿರುದ್ಧ ಅಂಡರ್ 19 ವಿಶ್ವಕಪ್ ಕ್ರಿಕೆಟ್‌ನ ಕ್ವಾರ್ಟರ್‌ಫೈನಲ್‌ನಲ್ಲಿ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.
ಇದನ್ನೂ ಓದಿ: U19 ವಿಶ್ವಕಪ್: ಭಾರತದ ದಾಳಿಗೆ ಎದುರಾಳಿ 41 ರನ್‌ಗೆ ಆಲೌಟ್!
ಈ ಜಯದೊಂದಿಗೆ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸಿದೆ. ಮುರಿಯದ 9ನೇ ವಿಕೆಟ್‌ಗೆ 86 ರನ್ ಜೊತೆಯಾಟವಾಡಿದ ಕ್ರಿಸ್ಟನ್ ಹಾಗೂ ಫೀಲ್ಡ್, ನ್ಯೂಜಿಲೆಂಡ್ ಜಯಕ್ಕೆ ಕಾರಣರಾದರು. ಮೊದಲು ಬ್ಯಾಟ್ ಮಾಡಿದ ವಿಂಡೀಸ್ ಮೆಕೆಂಜೆ(99) ಅವರ ಆಕರ್ಷಕ ಆಟದ ರನ್‌ನಿಂದಾಗಿ 47.5 ಓವರಲ್ಲಿ 238 ರನ್ ಗಳಿಸಿತು.
ಸ್ಕೋರ್: ವೆಸ್ಟ್ ಇಂಡೀಸ್ 238/10, ನ್ಯೂಜಿಲೆಂಡ್ 239/8
ಭಾರತ ಆಡಿದ 3 ಪಂದ್ಯದಲ್ಲಿ 3ರಲ್ಲೂ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಷ್ಟೇ ಅಲ್ಲ ಈಗಾಗಲೇ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.