ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಸೂಪರ್ ಓವರ್‌ನಲ್ಲಿ ಸತತ 2 ಸಿಕ್ಸರ್ ಸಿಡಿಸಿ ಟೀ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದಾರೆ. ಗೆಲುವಿನ ಜೊತೆಗೆ ರೋಹಿತ್ ಸಂಭ್ರಮ ಡಬಲ್ ಆಗಿದೆ. ಇದಕ್ಕೆ ಕಾರಣ ರೋಹಿತ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಹ್ಯಾಮಿಲ್ಟನ್(ಜ.29): ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದ ಸೂಪರ್ ಓವರ್ ಎಲ್ಲೆಡೆ ಚರ್ಚೆಯಾಗುತ್ತಿದೆ. ಕಾರಣ ಒಂದು ಓವರ್‌ನಲ್ಲಿ 18ರನ್ ಅವಶ್ಯಕತೆ ಇತ್ತು. ಆರಂಭಿಕ 2 ಎಸೆತದಲ್ಲಿ ಭಾರತಗಳಿಸಿದ್ದು 3 ರನ್. ಇನ್ನು 4 ಎಸೆತದಲ್ಲಿ 15 ರನ್ ಬೇಕಿತ್ತು. ಇನ್ನೆರಡು ಎಸೆತದಲ್ಲಿ ರಾಹುಲ್ ಬೌಂಡರಿ ಹಾಗೂ ಸಿಂಗಲ್ ಸಿಡಿಸಿದರು. ಅಂತಿಎ ಎರಡು ಎಸೆತದಲ್ಲಿ ಕನಿಷ್ಠ 1 ಸಿಕ್ಸರ್ ಹಾಗೂ ಬೌಂಡರಿ ಅವಶ್ಯಕತೆ ಇತ್ತು.
ಇದನ್ನೂ ಓದಿ: ಟೀಂ ಇಂಡಿಯಾಗೆ ಮೊದಲ ಸೂಪರ್ ಓವರ್, ಮೊದಲ ಗೆಲುವು!
undefined
ಕ್ರೀಸ್‌ನಲ್ಲಿದ್ದ ರೋಹಿತ್ ಶರ್ಮಾ ಎರಡೂ ಎಸೆತವನ್ನು ಸಿಕ್ಸರ್ ಸಿಡಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು. ಸೂಪರ್ ಓವರ್‌ನಲ್ಲಿ ಭಾರತಕ್ಕೆ ಗೆಲುವು ತಂದುಕೊಟ್ಟು ರೋಹಿತ್ ಶರ್ಮಾ ಸಂಭ್ರಮ ಡಬಲ್ ಆಗಿದೆ. ಕಾರಣ ರೋಹಿತ್ ಇದೇ ಪಂದ್ಯದಲ್ಲಿ ಆರಂಭಿಕನಾಗಿ 10,000 ಅಂತಾರಾಷ್ಟ್ರೀಯ ರನ್ ಪೂರೈಸಿದ ದಾಖಲೆ ಬರೆದರು.
ಇದನ್ನೂ ಓದಿ: ಟೀಂ ಇಂಡಿಯಾಗೆ ಹಿಟ್‌ಮ್ಯಾನ್ ಗಿಫ್ಟ್ : ಸೂಪರ್ ಓವರ್‌ನಲ್ಲಿ ಗೆದ್ದ ಭಾರತ
ಆರಂಭಿಕ 2 ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದ ರೋಹಿತ್ ಶರ್ಮಾ 3ನೇ ಪಂದ್ಯದಲ್ಲಿ 40 ಎಸೆದಲ್ಲಿ 65 ರನ್ ಸಿಡಿಸಿ ಅಬ್ಬರಿಸಿದ್ದರು. ಈ ಮೂಲಕ ರೋಹಿತ್ ಆರಂಭಿಕನಾಗಿ 10 ಸಾವಿರ ರನ್ ಗಡಿ ದಾಟಿದರು. ಈ ಸಾಧನೆ ಮಾಡಿದ ಭಾರತದ 4ನೇ ಆರಂಭಿಕ ಅನ್ನೋ ಹೆಗ್ಗಳಿಕೆಗೂ ಪಾತ್ರರಾದರು.
ರೋಹಿತ್ ಶರ್ಮಾಗೂ ಮೊದಲು ಟೀಂ ಇಂಡಿಯಾದ ಸುನಿಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ಈ ಸಾಧನೆ ಮಾಡಿದ್ದಾರೆ. ಇದೀಗ ಈ ಸಾಲಿಗೆ ರೋಹಿತ್ ಶರ್ಮಾ ಸೇರಿಕೊಂಡಿದ್ದಾರೆ. ಆದರೆ 50 ರ ಬ್ಯಾಟಿಂಗ್ ಸರಾಸರಿಯಲ್ಲಿ 10,000 ರನ್ ಪೂರೈಸಿದ ಏಕೈಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ.