ಚೆಂಡಿಗೆ ಎಂಜ​ಲು: ಅಂಪೈರ್‌ನಿಂದ ಸ್ಯಾನಿಟೈಸರ್ ಹಚ್ಚಿ ಸ್ವಚ್ಛ​ತೆ

Kannadaprabha News   | Asianet News
Published : Jul 20, 2020, 08:44 AM IST
ಚೆಂಡಿಗೆ ಎಂಜ​ಲು: ಅಂಪೈರ್‌ನಿಂದ ಸ್ಯಾನಿಟೈಸರ್ ಹಚ್ಚಿ ಸ್ವಚ್ಛ​ತೆ

ಸಾರಾಂಶ

ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ಆಟಗಾರನೊಬ್ಬ ಆಕಸ್ಮಿಕವಾಗಿ ಚಂಡಿಗೆ ಎಂಜಲು ಹೆಚ್ಚಿದಾಗ ಅಂಪೈರ್ ಮಧ್ಯ ಪ್ರವೇಶಿಸಿ ಚೆಂಡಿಗೆ ಸ್ಯಾನಿಟೈಸರ್ ಹಚ್ಚಿ ಸ್ವಚ್ಛ ಮಾಡಿದ ಪ್ರಸಂಗ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ನಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಮ್ಯಾಂಚೆ​ಸ್ಟರ್‌(ಜು.20): ಕೊರೋನಾ ಸೋಂಕು ಹರಡಬ​ಹುದು ಎನ್ನುವ ಭೀತಿ​ಯಿಂದ ಚೆಂಡಿಗೆ ಎಂಜಲು ಹಾಕಿ ಉಜ್ಜಬಾರದು ಎನ್ನುವ ನಿಯ​ಮ​ವನ್ನು ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿಸಿ) ಜಾರಿ ಮಾಡಿದೆ. 

ಆದರೆ ಇಲ್ಲಿ ವಿಂಡೀಸ್‌ ವಿರುದ್ಧ ನಡೆ​ಯುತ್ತಿರುವ 2ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಆಟ​ಗಾರ ಡೊಮಿ​ನಿಕ್‌ ಸಿಬ್ಲಿ ಆಕ​ಸ್ಮಿಕವಾಗಿ ಚೆಂಡಿಗೆ ಎಂಜಲು ಹಾಕಿದರು. ತಕ್ಷಣ ಅಂಪೈರ್‌ ಸ್ಯಾನಿ​ಟೈ​ಸರ್‌ ಬಳಸಿ ಚೆಂಡನ್ನು ಸ್ವಚ್ಛಗೊಳಿ​ಸಿದ ಪ್ರಸಂಗ ನಡೆ​ಯಿತು. ಎಂಜಲು ಬಳಕೆ ಮಾಡಿ​ದರೆ 2 ಬಾರಿ ಅಂಪೈರ್‌ಗಳು ಎಚ್ಚರಿಕೆ ನೀಡ​ಲಿದ್ದು, 3ನೇ ಬಾರಿ ತಪ್ಪಾದರೆ ಪೆನಾಲ್ಟಿ ರೂಪ​ದಲ್ಲಿ ಎದು​ರಾಳಿ ತಂಡಕ್ಕೆ 5 ರನ್‌ ಸೇರ್ಪಡೆಗೊಳ್ಳ​ಲಿದೆ.

ಬಾಂಗ್ಲಾ ಕ್ರಿಕೆ​ಟಿ​ಗರ ಅಭ್ಯಾಸ: ಒಮ್ಮೆಗೆ ಒಬ್ಬ​ರಿಗೆ ಪ್ರವೇಶ!

ಢಾಕಾ: ಕೊರೋನಾ ಸೋಂಕಿನ ಭೀತಿ​ಯಿಂದಾಗಿ ಕ್ರಿಕೆಟ್‌ ಅಭ್ಯಾಸ ನಿಲ್ಲಿ​ಸಿದ್ದ ಬಾಂಗ್ಲಾ​ದೇಶ ಕ್ರಿಕೆ​ಟಿ​ಗರು ಭಾನುವಾರದಿಂದ ಅಭ್ಯಾಸ ಪುನ​ರಾಂಭಿ​ಸಿ​ದ್ದಾರೆ. 9 ಆಟ​ಗಾ​ರರು ಅಭ್ಯಾ​ಸಕ್ಕೆ ಮರ​ಳಿದ್ದು, ಕೋವಿಡ್‌-19 ಮಾರ್ಗ​ಸೂಚಿ ಪ್ರಕಾರ, ಒಮ್ಮೆಗೆ ಒಬ್ಬ ಕ್ರಿಕೆ​ಟಿಗ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶಿಸ​ಬೇಕು ಎಂದು ಬಾಂಗ್ಲಾ​ದೇಶ ಕ್ರಿಕೆಟ್‌ ಮಂಡಳಿ (ಬಿ​ಸಿ​ಬಿ​) ಸೂಚಿ​ಸಿದೆ. 

2ನೇ ಟೆಸ್ಟ್‌: ರೋಚಕ ಘಟ್ಟದತ್ತ ಆಂಗ್ಲೋ-ವಿಂಡೀಸ್ ಟೆಸ್ಟ್

ಒಬ್ಬ ಕ್ರಿಕೆ​ಟಿಗನ ಜೊತೆ ಒಬ್ಬ ಟ್ರೈನರ್‌ಗೆ ಮಾತ್ರ ಕ್ರೀಡಾಂಗಣ ಪ್ರವೇ​ಶಿ​ಸಲು ಅವ​ಕಾಶ ಸಿಗ​ಲಿದೆ. ಕೆಲ ಆಟ​ಗಾ​ರರು ಢಾಕಾ​ದಲ್ಲಿ ಅಭ್ಯಾಸ ನಡೆ​ಸಿ​ದರೆ, ಇನ್ನೂ ಕೆಲ​ವರು ಸೈಲ್ಹೆಟ್‌ನಲ್ಲಿ ನೆಟ್ಸ್‌ ಅಭ್ಯಾಸ ನಡೆ​ಸಿ​ದರು. ಆಟ​ಗಾರ ಹಾಗೂ ಟ್ರೈನರ್‌ ಪ್ರತ್ಯೇಕ ನೀರಿನ ಬಾಟಲ್‌, ಆಸನ, ಟಾಯ್ಲೆಟ್‌ಗಳನ್ನು ಬಳಕೆ ಮಾಡು​ವಂತೆ ಸೂಚಿ​ಸ​ಲಾ​ಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈತ ಔಟಾಗದೇ ಇದ್ದಿದ್ದರೇ ಭಾರತ ಸೆಮೀಸ್‌ಗೆ ಎಂಟ್ರಿ ಕೊಡ್ತಿರಲಿಲ್ಲ! ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ಸೋಲುತ್ತೆ ಎಂದ ಪಾಕ್ ಕ್ರಿಕೆಟಿಗ
ಅಂದು ಆಡಿಸ್ತೀರಾ ಅಂದಿದ್ದಕ್ಕೆ ವ್ಯಂಗ್ಯವಾಗಿ ನಕ್ಕಿದ್ದ ಸೂರ್ಯಕುಮಾರ್ ಯಾದವ್, ಇಂದು ಸಂಜುಗೆ ಸಲಾಂ! ವಿಡಿಯೋ ವೈರಲ್