
ಬೆಂಗಳೂರು(ಫೆ.10) ವರ್ಲ್ಡ್ ಕ್ರಿಕೆಟ್ನಲ್ಲಿ ದಿ ಬೆಸ್ಟ್ ಟೀಮ್ಸ್ ಯಾವುವು..? ಕೇವಲ ಒಂದು ಮಾದರಿಯಲ್ಲಿ ಅಲ್ಲ.. ಮೂರು ಫಾಮ್ಯಾಟ್ನಲ್ಲೂ ಯಾವ ತಂಡಗಳು ಬಲಿಷ್ಠವಾಗಿವೆ. ಇದನ್ನ ಅಂಕಿ ಅಂಶಗಳಲ್ಲಿ ಹೇಳೋದಾದ್ರೂ ಆ ಎರಡು ಟೀಮ್ಸ್ ಮಾತ್ರ ಸದ್ಯ ಎಲ್ಲಾ ಮಾದರಿಯಲ್ಲೂ ಸ್ಟ್ರಾಂಗ್ ಆಗಿವೆ. ಆ ಟೀಮ್ಸ್ ಯಾವುವು ಅನ್ನೋದನ್ನ ತೋರಿಸ್ತೀವಿ ನೋಡಿ.
ಒಂದೇ ವರ್ಷದಲ್ಲಿ 3ನೇ ಸಲ ಐಸಿಸಿ ಫೈನಲ್‌ನಲ್ಲಿ ಮುಖಾಮುಖಿ
ವಿಶ್ವ ಕ್ರಿಕೆಟ್ನಲ್ಲಿ ಸದ್ಯ ಬಲಿಷ್ಠ ತಂಡ ಯಾವ್ದು ಅಂತ ಕೇಳಿದ್ರೆ, ಥಟ್ ಅಂತ ಆಸ್ಟ್ರೇಲಿಯಾ ಅಂತಾರೆ. 2ನೇ ಬಲಿಷ್ಠ ತಂಡ ಯಾವುದು ಅಂದ್ರೆ ಸ್ವಲ್ಪ ಯೋಚಿಸ್ತಾರೆ. ಆದ್ರೆ ಆಸೀಸ್ ಬಿಟ್ರೆ 2ನೇ ಬಲಿಷ್ಠ ತಂಡ ಅಂದ್ರೆ ಅದು ಭಾರತ ಮಾತ್ರ. ಭಾರತ ಅಂತ ನಾವ್ ಸೆಕೆಂಡ್ ಸ್ಟ್ರಾಂಗೆಸ್ಟ್ ಟೀಮ್ ಅಂತ ಹೇಳ್ತಿಲ್ಲ. ಕಳೆದೊಂದು ದಶಕದಿಂದ ಟೀಂ ಇಂಡಿಯಾ, ಐಸಿಸಿ ಟ್ರೋಫಿ ಗೆಲ್ಲದಿರಬಹುದು. ಆದ್ರೆ ಅದೇ ಐಸಿಸಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದೆ. 11 ಐಸಿಸಿ ಟೂರ್ನಿಯಲ್ಲಿ 10ರಲ್ಲಿ ನಾಕೌಟ್ ಹಂತಕ್ಕೇರಿ ಸೋಲು ಅನುಭವಿಸಿದೆ.
ರವೀಂದ್ರ ಜಡೇಜಾ ಬಾಳಲ್ಲಿ ಬೆಂಕಿ ಬಿರುಗಾಳಿ..! ತಂದೆಯಿಂದ ಮಗನನ್ನ ದೂರ ಮಾಡಿದ್ರಾ ಸೊಸೆ..?
ಕೇವಲ ಸೀನಿಯರ್ ವಿಭಾಗದಲ್ಲಿ ಮಾತ್ರವಲ್ಲ. ಭಾರತ-ಆಸ್ಟ್ರೇಲಿಯಾ ಜೂನಿಯರ್ ತಂಡಗಳೂ ಅದ್ಭುತ ಪ್ರದರ್ಶನ ನೀಡುತ್ತಿವೆ. ಇದಕ್ಕೆ ತಾಜಾ ಉದಾಹಣೆ ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್-19 ವರ್ಲ್ಡ್‌ಕಪ್. ಏಕದಿನ ಮಾದರಿಯಲ್ಲಿ ನಡೆಯುತ್ತಿರುವ ಈ ವಿಶ್ವಕಪ್ನಲ್ಲಿ ಭಾರತ-ಆಸೀಸ್ ತಂಡಗಳು ಫೈನಲ್ ಪ್ರವೇಶಿಸಿವೆ. ಅದು ಅಜೇಯವಾಗಿ. ನಾಳೆ ಕಿರಿಯರ ವಿಶ್ವಕಪ್ಗೆ ಎರಡು ಟೀಮ್ಸ್ ಕಾದಾಡಲಿವೆ.
ಭಾರತ-ಆಸ್ಟ್ರೇಲಿಯಾ ತಂಡಗಳು ಯಾಕೆ ಬಲಿಷ್ಠ ಅನ್ನೋದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಕಳೆದೊಂದು ವರ್ಷದಲ್ಲಿ ಈ ಎರಡು ಟೀಮ್ಸ್ ಐಸಿಸಿ ಟೂರ್ನಿಯ ಫೈನಲ್ನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ಹೌದು, 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಇದೇ ಭಾರತ-ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಇನ್ನು ಕಳೆದ ವರ್ಷ ಭಾರತದಲ್ಲೇ ನಡೆದ ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲೂ ಈ ಎರಡು ಟೀಮ್ಸ್ ಕಾದಾಡಿದ್ವು. ಈಗ ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ನಾಳೆ ಮುಖಾಮುಖಿಯಾಗ್ತಿವೆ.
Big Breaking: ಇಂಗ್ಲೆಂಡ್ ಎದುರಿನ ಸಂಪೂರ್ಣ ಟೆಸ್ಟ್ ಸರಣಿಯಿಂದ ಕಿಂಗ್ ಕೊಹ್ಲಿ ಔಟ್..!
ಟೆಸ್ಟ್ ವಿಶ್ವಕಪ್ ಮತ್ತು ಒನ್ಡೇ ವರ್ಲ್ಡ್‌ಕಪ್ ಫೈನಲ್ನಲ್ಲಿ ಭಾರತವನ್ನ ಸೋಲಿಸಿ, ಆಸ್ಟ್ರೇಲಿಯಾ ಟ್ರೋಫಿ ಎತ್ತಿ ಹಿಡಿದಿತ್ತು. ಸೀನಿಯರ್ಗಳ ಸೋಲಿನ ಸೇಡನ್ನ ನಾಳೆ ಜೂನಿಯರ್ಸ್ ತೀರಿಸಿಕೊಳ್ಳಲು ಎದುರು ನೋಡ್ತಿದ್ದಾರೆ. ಜೂನಿಯರ್ಸ್ ವಿಭಾಗದಲ್ಲಿ ಕಾಂಗರೂಗಳ ವಿರುದ್ಧ ಭಾರತೀಯರು ಡಾಮಿನೆಂಟ್ ಸಾಧಿಸಿದ್ದಾರೆ. ಭಾರತ-ಆಸ್ಟ್ರೇಲಿಯಾ ಜೂನಿಯರ್ ತಂಡಗಳು 2012 ಮತ್ತು 2018ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಎರಡು ಬಾರಿ ಮುಖಾಮುಖಿಯಾಗಿವೆ. ಈ ಎರಡು ಬಾರಿಯೂ ಆಸೀಸ್ ಸೋಲಿಸಿ ಭಾರತ ಕಿರಿಯರ ವಿಶ್ವಪ್ ಗೆದ್ದಿತ್ತು. ನಾಳೆ ಆಸೀಸ್ ವಿರುದ್ಧ ಹ್ಯಾಟ್ರಿಕ್ ಜಯ ಸಾಧಿಸಲು ಭಾರತ ಎದುರು ನೋಡ್ತಿದೆ.
ಈಗ ಗೊತ್ತಾಯ್ತಲ್ಲ. ಆಸ್ಟ್ರೇಲಿಯಾ ಬಿಟ್ರೆ ವರ್ಲ್ಡ್ ಕ್ರಿಕೆಟ್ನಲ್ಲಿ ಭಾರತವೇ ಸ್ಟ್ರಾಂಗ್ ಅನ್ನೋದು. ಕಾಂಗರೂಗಳನ್ನ ಸೋಲಿಸಿದ್ರೆ, ಆಗ ಭಾರತ ಮತ್ತಷ್ಟು ಸ್ಟ್ರಾಂಗ್ ಆಗಲಿದೆ. ಅದು ಕೇವಲ ನಾಳಿನ ಪಂದ್ಯದಲ್ಲಿ ಮಾತ್ರವಲ್ಲ. ಮೂರು ಮಾದರಿಯ ಐಸಿಸಿ ಟೂರ್ನಿಯಲ್ಲೂ ಆಸೀಸ್ ತಂಡವನ್ನ ಸೋಲಿಸಬೇಕು.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.