
ಬೆನೋನಿ(ದ.ಆಫ್ರಿಕಾ): ದಾಖಲೆಯ 6ನೇ ಕಿರೀಟದ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ, ಈ ಬಾರಿ ಅಂಡರ್-19 ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ. ಭಾರತ 9ನೇ ಬಾರಿ ಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದರೆ, 2014ರ ಚಾಂಪಿಯನ್ ದ.ಆಫ್ರಿಕಾ 4ನೇ ಸಲ ಪ್ರಶಸ್ತಿ ಸುತ್ತಿಗೇರುವ ತಕಕದಲ್ಲಿದೆ.
ಹಾಲಿ ಚಾಂಪಿಯನ್, ಉದಯ್ ಸಹರಾನ್ ನಾಯಕತ್ವದ ಭಾರತ ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಲ್ಲೂ ಜಯಭೇರಿ ಬಾರಿಸಿದ್ದು, ಸೆಮೀಸ್‌ನಲ್ಲೂ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಗುಂಪು ಹಂತದಲ್ಲಿ 3, ಸೂಪರ್-6 ಹಂತದಲ್ಲಿ 2 ಪಂದ್ಯದಲ್ಲೂ ಭಾರತ ಅದ್ವಿತೀಯ ಗೆಲುವು ಸಾಧಿಸಿದೆ. ಎಲ್ಲಾ ಪಂದ್ಯದಲ್ಲೂ ಸರಾಸರಿ 130 ರನ್ ಅಂತರದಲ್ಲಿ ಗೆದ್ದಿರುವುದು ಭಾರತದ ಪ್ರಾಬಲ್ಯಕ್ಕೆ ಸಾಕ್ಷಿ. ಮುಶೀರ್ ಖಾನ್ 334 ರನ್ ಸಿಡಿಸಿ ಟೂರ್ನಿಯ ಗರಿಷ್ಠ ರನ್ ಸರದಾರ ಎನಿಸಿಕೊಂಡಿದ್ದು, ಉದಯ್(308 ರನ್) 2ನೇ ಸ್ಥಾನದಲ್ಲಿದ್ದಾರೆ. ಎಡಗೈ ಸ್ಪಿನ್ನರ್ ಸೌಮಿ ಪಾಂಡೆ 5 ಪಂದ್ಯದಲ್ಲಿ 16 ವಿಕೆಟ್ ಕಿತ್ತಿದ್ದಾರೆ. ಈ ಮೂವರ ಆಟ ತಂಡಕ್ಕೆ ನಿರ್ಣಾಯಕ ಎನಿಸಿದ್ದು, ಇತರರಿಂದಲೂ ಸೂಕ್ತ ಬೆಂಬಲ ಸಿಗಬೇಕಿದೆ.
ಶತಕ ವೀರ ಶುಭ್‌ಮನ್ ಗಿಲ್‌ಗೆ ಗಾಯ: ಟೀಂ ಇಂಡಿಯಾ ಪಾಳಯದಲ್ಲಿ ಶುರವಾಯ್ತು ಆತಂಕ..!
ಅತ್ತ ದ.ಆಫ್ರಿಕಾ ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದೆ. ತವರಿನ ಪಿಚ್‌ನ ಲಾಭವೆತ್ತಿ ಭಾರತಕ್ಕೆ ಸೋಲುಣಿಸುವುದು ತಂಡದ ಮುಂದಿರುವ ಗುರಿ. ಮತ್ತೊಂದು ಸೆಮೀಸ್‌ನಲ್ಲಿ ಗುರುವಾರ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.
ಸತತ 4 ಸೆಮೀಸ್ ಗೆದ್ದಿರುವ ಭಾರತ: ಭಾರತಕ್ಕೆ ಈ ಸಲದ್ದು ಸತತ 5ನೇ ಸೆಮಿಫೈನಲ್. 2016, 2018, 2020, 2022ರಲ್ಲಿ ಸೆಮೀಸ್‌ಗೇರಿ ಜಯಗಳಿಸಿತ್ತು. ಈ ಪೈಕಿ 2018, 2022ರಲ್ಲಿ ಚಾಂಪಿಯನ್ ಆಗಿದೆ.
ಮೊದಲ ಸೋಲಿಗೆ ಸೇಡು ತೀರಿಸಿದ ಭಾರತ, ವಿಶಾಖಪಟ್ಟಣ ಟೆಸ್ಟ್‌ನಲ್ಲಿ 106 ರನ್ ಭರ್ಜರಿ ಗೆಲುವು!
02: ಭಾರತ ಟೂರ್ನಿಯ ಇತಿಹಾಸದಲ್ಲಿ ಈ ವರೆಗೂ 2 ಬಾರಿ ಸೆಮಿಫೈನಲ್‌ನಲ್ಲಿ ಎಡವಿದೆ. 2002ರ ಸೆಮೀಸ್‌ನಲ್ಲಿ ದಕ್ಷಿಣ ಆಫ್ರಿಕಾ, 2004ರ ಸೆಮಿಫೈನಲ್ ನನಲ್ಲಿ ಪಾಕಿಸ್ತಾನ ವಿರುದ್ಧ ಮುಗ್ಗರಿಸಿತ್ತು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.