ವಿದೇಶಿ ಲೀಗ್‌ಗಳತ್ತ ಒಲವು, ಐಪಿಎಲ್‌ಗೆ ಸುರೇಶ್‌ ರೈನಾ ವಿದಾಯ

Published : Sep 06, 2022, 11:52 AM ISTUpdated : Jan 10, 2023, 05:51 PM IST
ವಿದೇಶಿ ಲೀಗ್‌ಗಳತ್ತ ಒಲವು, ಐಪಿಎಲ್‌ಗೆ ಸುರೇಶ್‌ ರೈನಾ ವಿದಾಯ

ಸಾರಾಂಶ

ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದ, ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಮಾಜಿ ಆಟಗಾರ ಸುರೇಶ್‌ ರೈನಾ, ವಿದೇಶಿ ಲೀಗ್‌ಗಳಲ್ಲಿ ಆಡುವ ಒಲವು ತೋರಿದ್ದಾರೆ. ಈ ಕಾರಣಕ್ಕಾಗಿ ಐಪಿಎಲ್‌ ಹಾಗೂ ದೇಶೀಯ ಕ್ರಿಕಟ್‌ ಟೂರ್ನಿಗೆ ವಿದಾಯ ಘೋಷಣೆ ಮಾಡಿದ್ದಾರೆ.ದಕ್ಷಿಣ ಆಫ್ರಿಕಾ ಹಾಗೂ ಯುಎಇಯಲ್ಲಿ ನಡೆಯಲಿರುವ ಟಿ20 ಲೀಗ್‌ಗಳಲ್ಲಿ ಸುರೇಶ್‌ ರೈನಾ ಆಡುವ ಸಾಧ್ಯತೆ ಇದೆ.

ಮುಂಬೈ (ಸೆ.6): ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 (ಐಪಿಎಲ್‌) ಇತಿಹಾಸದ ದಿಗ್ಗಜ ಆಟಗಾರರಲ್ಲಿ ಒಬ್ಬರಾದ ಸುರೇಶ್‌ ರೈನಾ, ವಿಶ್ವದ ಶ್ರೀಮಂತ ಟಿ20 ಲೀಗ್‌ಗೆ ವಿದಾಯ ಹೇಳಿದ್ದಾರೆ. ವಿದೇಶದ ಟಿ20 ಲೀಗ್‌ಗಳಲ್ಲಿ ಆಡುವ ಇಚ್ಛೆಯ ಕಾರಣದಿಂದಾಗಿ ಐಪಿಎಲ್‌ಗೆ ವಿದಾಯ ಹೇಳಲಿದ್ದಾರೆ ಎಂದು ದೈನಿಕ್‌ ಜಾಗರಣ್‌ ವರದಿ ಮಾಡಿತ್ತು. ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್‌ ಬಾರಿಸಿದ ಬ್ಯಾಟ್ಸ್‌ಮನ್‌ಗಳಲ್ಲಿಆಟಗಾರರಲ್ಲಿ ಒಬ್ಬರಾಗಿರುವ ರೈನಾರನ್ನು ಕಳೆದ ಬಾರಿಯ ಐಪಿಎಲ್‌ ಹರಾಜಿನಲ್ಲಿ ಯಾವ ತಂಡವೂ ಖರೀದಿಸಿರಲಿಲ್ಲ. ಐಪಿಎಲ್‌ನಲ್ಲಿ ತಂಡಗಳ ಸಂಖ್ಯೆಯನ್ನೂ 10ಕ್ಕೆ ಏರಿಸಿದ್ದರೂ ಅನುಭವಿ ಆಟಗಾರನಿಗೆ ಯಾವ ತಂಡ ಕೂಡ ಮಣೆ ಹಾಕಿರಲಿಲ್ಲ. ಇದರ ಬೆನ್ನಲ್ಲಿಯೇ ಅವರ ಕ್ರಿಕೆಟ್‌ ಜೀವನ ಮುಗದು ಹೋಯಿತು ಎಂದೇ ತೀರ್ಮಾಣ ಮಾಡಲಾಗಿತ್ತು.  2023ರ ಐಪಿಎಲ್‌ಗೆ ಸಿದ್ಧತೆಗಳು ಆರಂಭವಾಗುತ್ತಿರುವ ನಡುವೆ ಸುರೇಶ್‌ ರೈನಾ, ಐಪಿಎಲ್‌ನಿಂದಲೂ ನಿವೃತ್ತಿಯಾಗುವ ನಿರ್ಧಾರದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ಯೊಂದಿಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ರೈನಾ ಈಗಾಗಲೇ ಯುಪಿಸಿಎಯಿಂದ ನಿರಾಕ್ಷೇಪಣಾ ಪತ್ರವನ್ನೂ ತೆಗೆದುಕೊಂಡಿದ್ದಾರೆ, ಇನ್ನು ಮುಂದೆ ತಮ್ಮ ರಾಜ್ಯಕ್ಕಾಗಿ ದೇಶೀಯ ಕ್ರಿಕೆಟ್ ಆಡದಿರಲು  ಅವರು ನಿರ್ಧರಿಸಿದ್ದಾರೆ.

ನಾನು ಇನ್ನೂ 2-3 ವರ್ಷ ಕ್ರಿಕೆಟ್‌ ಆಡಬೇಕು ಎಂದು ಬಯಸಿದ್ದೇನೆ. ಅಷ್ಟು ವರ್ಷದ ಕ್ರಿಕೆಟ್‌ ನನ್ನಲ್ಲಿ ಬಾಕಿ ಉಳಿದಿದೆ. ಇನ್ನು ಉತ್ತರ ಪ್ರದೇಶದಲ್ಲಿ (Uttar Pradesh) ಸಾಕಷ್ಟು ಉತ್ತಮ ಆಟಗಾರರಾಗಿದ್ದಾರೆ. ಇದರಿಂದಾಗಿ ತಂಡ ದೇಶೀಯ ಕ್ರಿಕೆಟ್‌ನಲ್ಲೂ (Domestic Cricket) ಉತ್ತಮವಾಗಿ ಆಡುತ್ತಿದೆ. ಈಗಾಗಲೇ ನಾನು ಉತ್ತರ ಪ್ರದೇಶ ಕ್ರಿಕೆಟ್‌ ಸಂಸ್ಥೆಯಿಂದ (UPCA) ನಿರಾಕ್ಷೇಪಣಾ ಪತ್ರವನ್ನೂ ಪಡೆದುಕೊಂಡಿದ್ದೇನೆ. ನನ್ನ ನಿರ್ಧಾರದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹಾಗೂ ರಾಜೀವ್‌ ಶುಕ್ಲಾ ಅವರಿಗೂ ಮಾಹಿತಿ ನೀಡಿದ್ದೇನೆ. ಇಷ್ಟು ವರ್ಷಗಳ ಕಾಲ ನನಗೆ ಬೆಂಬಲ ನೀಡಿದ ಬಿಸಿಸಿಐ ಹಾಗೂ ಯುಪಿಸಿಎಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ವಿದೇಶದ ಭಿನ್ನ ಲೀಗ್‌ಗಳಲ್ಲಿ ನಾನು ಆಡಲು ಎದುರು ನೋಡುತ್ತಿದ್ದೇನೆ. ಸೆ.10 ರಿಂದ ಆರಂಭವಾಗಲಿರುವ ರೋಡ್‌ ಸೇಫ್ಟಿ ವರ್ಲ್ಡ್‌ ಸಿರೀಸ್‌ನಲ್ಲಿ ನಾನು ಆಡಲಿದ್ದೇನೆ. ಅದರೊಂದಿಗೆ ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ಯುಎಇ ಫ್ರಾಂಚೈಸಿಗಳು ಈಗಾಗಲೇ ನನ್ನೊಂದಿಗೆ ಮಾತುಕತೆ ನಡೆಸಿವೆ. ಒಮ್ಮೆ ಎಲ್ಲಾ ಕಡೆಯಿಂದ ಎನ್‌ಓಸಿ ದೊರೆತ ಬಳಿಕ, ನಾನಾಗಿಯೇ ಇದರ ಬಗ್ಗೆ ಮಾಹಿತಿ ನೀಡಲಿದ್ದೇನೆ ಎಂದು ಸ್ವತಃ ರೈನಾ (Raina) ಮಾಹಿತಿ ನೀಡಿದ್ದಾರೆ.

Sports Icon: ಕ್ರಿಕೆಟಿಗ ಸುರೇಶ್‌ ರೈನಾಗೆ ಒಲಿದ ಮಾಲ್ಡೀವ್ಸ್‌ನ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿ

 

ಐಪಿಎಲ್‌ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಹೆಸರು ಸುರೇಶ್‌ ರೈನಾ. ಪ್ರಸ್ತುತ, ಐಪಿಎಲ್‌ನಲ್ಲಿ (IPL) ಗರಿಷ್ಠ ರನ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸುರೇಶ್‌ ರೈನಾ 5ನೇ ಸ್ಥಾನದಲ್ಲಿದ್ದಾರೆ. ಸುರೇಶ್‌ ರೈನಾ ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರೂ, ವಿದೇಶದ ಟಿ20 ಲೀಗ್‌ಗಳಲ್ಲಿ ಅವರು ಆಡಲು ಬಿಸಿಸಿಐ (BCCI Rules) ನಿಯಮಗಳ ಪ್ರಕಾರ ಅರ್ಹರಲ್ಲ. ದೇಶದ ಹೊರಗೆ ವಿದೇಶದ ಲೀಗ್‌ಗಳಲ್ಲಿ ಸುರೇಶ್‌ ರೈನಾ ಆಡಬೇಕಾದಲ್ಲಿ ಐಪಿಎಲ್‌ ಸೇರಿದಂತೆ ದೇಶೀಯ ಕ್ರಿಕೆಟ್‌ನಿಂದ ಅವರು ನಿವೃತ್ತಿ ಘೋಷಣೆ ಮಾಡಬೇಕಾಗುವುದು ಅನಿವಾರ್ಯವಾಗುತ್ತದೆ. ಅದೇ ಕಾರಣಕ್ಕಾಗಿ ಸುರೇಶ್‌ ರೈನಾ ಐಪಿಎಲ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ.

ಟಾಮ್‌ ಮೂಡಿ ಔಟ್‌, Sunrisers Hyderabad ತಂಡಕ್ಕೆ ಬ್ರಿಯಾನ್‌ ಲಾರಾ ಕೋಚ್‌!

ಚೆನ್ನೈ ಮಾಲೀಕತ್ವದ ತಂಡಕ್ಕೆ ರೈನಾ ನಾಯಕ: ಚೆನ್ನೈ ಸೂಪರ್‌ ಕಿಂಗ್ಸ್‌, ಮುಂಬೈ ಇಂಡಿಯನ್ಸ್‌, ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಈಗಾಗಲೇ ಯುಎಇ ಹಾಗೂ ದಕ್ಷಿಣ ಆಫ್ರಿಕಾದ ಟಿ20 ಲೀಗ್‌ಗಳಲ್ಲಿ ಫ್ರಾಂಚೈಸಿಯನ್ನು ಖರೀದಿ ಮಾಡಿದೆ. ಬಹಳ ವರ್ಷಗಳ ಕಾಲ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಭಾಗವಾಗಿದ್ದ ಸುರೇಶ್‌ ರೈನಾ, ಸಿಎಸ್‌ಕೆ ಮಾಲೀಕತ್ವದ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ತಂಡಕ್ಕೆ ನಾಯಕರಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?
ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!