Ashes 2021: ಟೆಸ್ಟ್ ಪಂದ್ಯದಲ್ಲಿ ಏಕದಿನ ಶೈಲಿಯ ಬ್ಯಾಟಿಂಗ್, ಕೇವಲ 85 ಎಸೆತಗಳಲ್ಲಿ ಹೆಡ್ ಹಂಡ್ರೆಡ್!

By Suvarna NewsFirst Published Dec 9, 2021, 3:57 PM IST
Highlights

ಇಂಗ್ಲೆಂಡ್ ಬೌಲರ್ ಗಳ ಬೆವರಿಳಿಸಿದ ಟ್ರಾವಿಸ್ ಹೆಡ್
ಬೆನ್ ಸ್ಟೋಕ್ಸ್ ನೋಬಾಲ್ ವಿವರ ಬಿಚ್ಚಿಟ್ಟ ಚಾನೆಲ್
ಡೇವಿಡ್ ವಾರ್ನರ್ ಗೆ ಮೂರು ಜೀವದಾನ ನೀಡಿದ ಇಂಗ್ಲೆಂಡ್

ಬ್ರಿಸ್ಬೇನ್ (ಡಿ.09): ಇಂಗ್ಲೆಂಡ್ ಬೌಲರ್ ಗಳ ಬೆವರಿಳಿಸುವಂಥ ಇನ್ನಿಂಗ್ಸ್ ಆಡಿದ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಟ್ರಾವಿಸ್ ಹೆಡ್ (Travis Head) ಕೇವಲ 85 ಎಸೆತಗಳಲ್ಲಿ ಆಶಸ್ ಟೆಸ್ಟ್ ಸರಣಿಯಲ್ಲಿ(Ashes Test) ತಮ್ಮ ಮೊಟ್ಟಮೊದಲ ಶತಕ ಸಿಡಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ(Test Cricket) ಒಟ್ಟಾರೆಯಾಗಿ ಟ್ರಾವಿಸ್ ಹೆಡ್ ಬಾರಿಸಿದ ಮೂರನೇ ಶತಕದೊಂದಿಗೆ ಪ್ರವಾಸಿ ಇಂಗ್ಲೆಂಡ್ (England) ವಿರುದ್ಧ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ತಂಡ ಸುಭದ್ರ ಸ್ಥಿತಿಯಲ್ಲಿದೆ. ಗಾಬಾ (The Gabba) ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 2ನೇ ದಿನವಾದ ಗುರುವಾರ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ (Australia) ತಂಡ 7 ವಿಕೆಟ್ ಗೆ 343 ರನ್ ಸಿಡಿಸಿ ದಿನದಾಟ ಮುಗಿಸಿದೆ. ಇದರೊಂದಿಗೆ 196 ರನ್ ಗಳ ಮುನ್ನಡೆಯನ್ನು ಆಸ್ಟ್ರೇಲಿಯಾ ಕಂಡಿದೆ.

95 ಎಸೆತಗಳಲ್ಲಿ 112 ರನ್ ಬಾರಿಸಿರುವ ಟ್ರಾವಿಸ್ ಹೆಡ್ ಹಾಗೂ 10 ರನ್ ಬಾರಿಸಿರುವ ಮಿಚೆಲ್ ಸ್ಟಾರ್ಕ್ (Mitchell Starc) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಟ್ರಾವಿಸ್ ಹೆಡ್ ಆಶಸ್ ನಲ್ಲಿ ತಮ್ಮ ಮೊದಲ ಶತಕ ಬಾರಿಸಿದ್ದು ಮಾತ್ರವಲ್ಲದೆ, ಸಾಕಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ದಾಖಲಿಸಿಕೊಂಡಿದ್ದಾರೆ.

ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ್ದ ಟ್ರಾವಿಸ್ ಹೆಡ್, ಮೊದಲ 50 ರನ್ ಗಳನ್ನು ಬಾರಿಸಲು 51 ಎಸೆತಗಳನ್ನು ಆಡಿದರೆ, 50 ರಿಂದ ಮೂರಂಕಿಯ ಗಡಿ ತಲುಪಲು ಕೇವಲ 34 ಎಸೆತಗಳನ್ನು ಆಡಿದ್ದರು.ತಮ್ಮ ಬಿರುಗಾಳಿಯ ಇನ್ನಿಂಗ್ಸ್ ನಲ್ಲಿ12 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸುವ ಮೂಲಕ ಇಂಗ್ಲೆಂಡ್ ಬೌಲರ್ ಗಳನ್ನು ಕಾಡಿದರು.
 

Off only 85 balls!

Take a bow, Travis Head! | pic.twitter.com/QKxHyl4vnV

— cricket.com.au (@cricketcomau)


ಈ ವರ್ಷದ ಆರಂಭದಲ್ಲಿ ಭಾರತ ವಿರುದ್ಧ ನಡೆದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಟ್ರಾವಿಸ್ ಹೆಡ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಅಂದಿನ ನಾಯಕ ಟಿಮ್ ಪೇನ್ (Tim Paine) ಕಳಪೆ ಫಾರ್ಮ್ ನ ಕಾರಣದಿಂದಾಗಿ ಹೆಡ್ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದಿದ್ದರು. ಇವೆಲ್ಲಕ್ಕೂ ಉತ್ತರ ಎನ್ನುವಂತೆ ಹೆಡ್ ಸೂಪರ್ ಇನ್ನಿಂಗ್ಸ್ ಮೂಲಕ ಉತ್ತರ ನೀಡಿದ್ದಾರೆ.ಇದಕ್ಕೂ ಮುನ್ನ ಆಸೀಸ್ ಬ್ಯಾಟಿಂಗ್ ನಲ್ಲಿ ಮಿಂಚಿದ್ದು ಸ್ಪೋಟಕ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ (David Warner) ಮೂರು ಜೀವದಾನಗಳ ಲಾಭ ಪಡೆದುಕೊಂಡ ವಾರ್ನರ್ ಕೇವಲ 6 ರನ್ ಗಳಿಂದ ಶತಕ ವಂಚಿತರಾದರು.
 

A brilliant day two for Australia at the Gabba as they secure a lead of 196 runs. | | | https://t.co/pR2hqnzR22 pic.twitter.com/Pngwu8Cmuh

— ICC (@ICC)


2ನೇ ವಿಕೆಟ್ ಗೆ ವಾರ್ನರ್ ಮಾರ್ನಸ್ ಲಬುಶೇನ್ (Marnus Labuschagne) ಜೊತೆ 156 ರನ್ ಗಳ ಉತ್ತಮ ಜೊತೆಯಾಟವನ್ನು ಆಡಿದ್ದರು. ಜಾಕ್ ಲೀಚ್ (Jack Leach)ಈ ಜೊತೆಯಾಟವನ್ನು ಬೇರ್ಪಡಿಸಿದ ಬಳಿಕ ಆಸೀಸ್‌ನ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕುಸಿತ ಕಂಡರೂ, ಟ್ರಾವಿಸ್ ಹೆಡ್ ಅವರ ಬಿರುಗಾಳಿಯ ಶತಕ ಪಂದ್ಯದ ಮೇಲೆ ಆಸೀಸ್‌ನ ಹಿಡಿತವನ್ನು ಗಟ್ಟಿ ಮಾಡಿತು. ಇಂಗ್ಲೆಂಡ್ ಪರವಾಗಿ ಒಲ್ಲಿ ರಾಬಿನ್ಸನ್ (Ollie Robinson) ಅತ್ಯಂತ ಯಶಸ್ವಿ ಬೌಲರ್ ಎನಿಸಿದರು. 48 ರನ್ ನೀಡಿ ಅವರು 3 ವಿಕೆಟ್ ಗಳನ್ನು ಉರುಳಿಸಿದರು.

Ashes 2021: ಅನಿಲ್ ಕುಂಬ್ಳೆ, ಕರ್ಟ್ನಿ ವಾಲ್ಶ್ ಜೊತೆ ಅನನ್ಯ ದಾಖಲೆಯ ಪಟ್ಟಿಗೆ ಸೇರಿದ ಪ್ಯಾಟ್ ಕಮ್ಮಿನ್ಸ್
ಬೆನ್ ಸ್ಟೋಕ್ಸ್ ನೋಬಾಲ್ ಟ್ರೆಂಡ್!
ವಾರ್ನರ್ ಹಾಗೂ ಟ್ರಾವಿಸ್ ಹೆಡ್ ಆಕರ್ಷಕ ಇನ್ನಿಂಗ್ಸ್ ಮೂಲಕ ಸುದ್ದಿ ಮಾಡಿದರೆ, ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ (Ben Stokes)ತಮ್ಮ ನೋಬಾಲ್ ಗಳಿಂದಾಗಿ 2ನೇ ದಿನದಾಟದಲ್ಲಿ ಸುದ್ದಿಯಾದರು. ವಾರ್ನರ್ 17 ರನ್ ಬಾರಿಸಿದ್ದ ವೇಳೆ ಸ್ಟೋಕ್ಸ್ ಎಸೆತದಲ್ಲಿ ಔಟ್ ಆಗಿದ್ದರು. ಆದರೆ, ಇದರ ರಿಪ್ಲೇ ವೀಕ್ಷಣೆ ಮಾಡಿದಾಗ ಸ್ಟೋಕ್ಸ್ ನೋಬಾಲ್ ಹಾಕಿದ್ದು ತಿಳಿದಿತ್ತು. ಬಳಿಕ ಅಂಪೈರ್ ತಮ್ಮ ತೀರ್ಪನ್ನು ಬದಲಾಯಿಸಿದ್ದರು.

Ashes Test Squad: ಮೊದಲ ಪಂದ್ಯಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ
ವಾರ್ನರ್ ಔಟ್ ಆಗುವ ಮುನ್ನ ಎಸೆದ ಮೂರೂ ಎಸೆತಗಳು ಕೂಡ ನೋಬಾಲ್ ಆಗಿದ್ದವು ಆದರೆ, ಅಂಪೈರ್ ಇದನ್ನು ಗಮನಿಸಿರಲಿಲ್ಲ. ಕೊನೆಗೆ ಆಸ್ಟ್ರೇಲಿಯಾದಲ್ಲಿ ಆಶಸ್ ಪ್ರಸಾರ ಮಾಡುವ ಚಾನೆಲ್ 9, ಸ್ಟೋಕ್ಸ್ ಬೌಲಿಂಗ್ ವೇಳೆ 14 ಬಾರಿ ನೋಬಾಲ್ ಮಾಡಿದ್ದರು. ಆದರೆ ಅಂಪೈರ್ ಕೇವಲ 2 ಬಾರಿ ಅದನ್ನು ಗಮನಿಸಿದ್ದರು ಎಂದು ಅನಾವರಣ ಮಾಡಿತು. ನಂತರ ವಾರ್ನರ್ 48 ಹಾಗೂ 60 ರನ್ ಬಾರಿಸಿದ್ದ ವೇಳೆ ಜೀವದಾನ ಪಡೆದುಕೊಂಡಿದ್ದರು.

click me!