Virat Kohli: ಏಕದಿನ ಕ್ರಿಕೆಟ್ ನಲ್ಲಿ ಮುಗಿದ ವಿರಾಟ್ ನಾಯಕತ್ವ ಯುಗ, ಕೊಹ್ಲಿಯ ದಾಖಲೆಗಳೇನು ಗೊತ್ತಾ?

Suvarna News   | Asianet News
Published : Dec 09, 2021, 02:17 PM ISTUpdated : Mar 02, 2022, 01:40 PM IST
Virat Kohli: ಏಕದಿನ ಕ್ರಿಕೆಟ್ ನಲ್ಲಿ ಮುಗಿದ ವಿರಾಟ್ ನಾಯಕತ್ವ ಯುಗ, ಕೊಹ್ಲಿಯ ದಾಖಲೆಗಳೇನು ಗೊತ್ತಾ?

ಸಾರಾಂಶ

ಭಾರತೀಯ ಕ್ರಿಕೆಟ್ ನ ( Indian cricket) ಅತ್ಯಂತ ಯಶಸ್ವಿ ನಾಯಕರುಗಳ ಪಟ್ಟಿಯ ಚರ್ಚೆ ನಡೆದಾಗ ಖಂಡಿತಾ ಅದರಲ್ಲಿ ವಿರಾಟ್ ಕೊಹ್ಲಿಗೆ (Virat Kohli ) ಸ್ಥಾನ ಇದ್ದೇ ಇರುತ್ತದೆ. ಐಸಿಸಿ ಟ್ರೋಫಿಯೊಂದನ್ನು ಹೊರತಾಗಿ ನೋಡಿದರೆ, ವಿರಾಟ್ ಕೊಹ್ಲಿ ನಾಯಕತ್ವ ಅವಧಿಯಲ್ಲಿ ಭಾರತದ ಐತಿಹಾಸಿಕ ದ್ವಿಪಕ್ಷೀಯ ಸರಣಿ ಗೆಲುವುಗಳು ಅಭಿಮಾನ ಮೂಡಿಸುತ್ತದೆ. 

ಬೆಂಗಳೂರು (ಡಿ.09): ಸೀಮಿತ ಓವರ್ ಗಳ ಕ್ರಿಕೆಟ್ ಹಾಗೂ ಟೆಸ್ಟ್ ಕ್ರಿಕೆಟ್ ಗೆ ಭಿನ್ನ ನಾಯಕರನ್ನು ಆರಿಸುವ ಮೂಲಕ ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಸಂಪ್ರದಾಯವನ್ನು ಬಿಸಿಸಿಐ (BCCI)ಅಧಿಕೃತವಾಗಿ ಆರಂಭಿಸಿದೆ. ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕ ಸ್ಥಾನದಿಂದ ಕೆಳಗಳಿಸುವ ಮೂಲಕ ಮುಂಬರುವ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾದ (Team India) ನೇತೃತ್ವವನ್ನು ರೋಹಿತ್ ಶರ್ಮ(Rohit Sharma) ಹೆಗಲಿಗೆ ಹಾಕಲಾಗಿದೆ. ತಮ್ಮ ನಾಯಕತ್ವದ ಅವಧಿಯ ನಾಲ್ಕು ವರ್ಷದಲ್ಲಿ ವಿರಾಟ್ ಕೊಹ್ಲಿ ತಂಡಕ್ಕೆ ಐಸಿಸಿ ಟ್ರೋಫಿ (ICC title) ಗೆಲ್ಲಿಸಲು ವಿಫಲರಾಗಿದ್ದರು. ಈ ಕಾರಣಕ್ಕಾಗಿಯೇ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರಿಂದ ಟೀಕೆಯನ್ನು ಎದುರಿಸುತ್ತಿದ್ದ ಕೊಹ್ಲಿ 2023ರಲ್ಲಿ ಭಾರತದ ಆತಿಥ್ಯದಲ್ಲೇ ನಡೆಯಲಿರುವ ಏಕದಿನ ವಿಶ್ವಕಪ್ ವರೆಗೆ ನಾಯಕರಾಗಲು ಬಯಸಿದ್ದರು. ಆದರೆ, ಸೀಮಿತ ಓವರ್ ಗಳ ಕ್ರಿಕೆಟ್ ನ ಎರಡು ಭಿನ್ನ ಮಾದರಿಗೆ ಭಿನ್ನ ನಾಯಕರನ್ನು ಆರಿಸುವ ಬಗ್ಗೆ ಹೆಚ್ಚಿನ ಒಲವು ತೋರದ ಬಿಸಿಸಿಐ ಏಕದಿನ (ODI) ಹಾಗೂ ಟಿ20 (T20) ತಂಡದ ಜವಾಬ್ದಾರಿಯನ್ನು ರೋಹಿತ್ ಶರ್ಮಗೆ ನೀಡಿದೆ.

33 ವರ್ಷದ ವಿರಾಟ್ ಕೊಹ್ಲಿ ಸಾಕಷ್ಟು ಐತಿಹಾಸಿಕ ದ್ವಿಪಕ್ಷೀಯ ಸರಣಿಗಳಲ್ಲಿ (Historic Bilateral Series) ತಂಡವನ್ನು ಮುನ್ನಡೆಸುವ ಮೂಲಕ ಭಾರತದ ಅತ್ಯಂತ ಯಶಸ್ವಿ ನಾಯಕ (Most Successful ODI Captains) ಎನಿಸಿಕೊಂಡಿದ್ದಾರೆ. ಕಳೆದ ಮಾರ್ಚ್ ನಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯಲ್ಲಿ 2-1 ರಿಂದ ಗೆಲುವು ಸಾಧಿಸಿದ್ದು, ಕೊಹ್ಲಿ ನೇತೃತ್ವದಲ್ಲಿ ಭಾರತ ಆಡಿದ ಕೊನೆಯ ಏಕದಿನ ಸರಣಿ ಆಗಿದೆ.

ಧೋನಿ, ಕಪಿಲ್ ಗಿಂತ ಹೆಚ್ಚಿನ ಗೆಲುವಿನ ಸರಾಸರಿ
ಭಾರತ ತಂಡವನ್ನು ಕನಿಷ್ಠ 10ಕ್ಕಿಂತ ಹೆಚ್ಚಿನ ಪಂದ್ಯಗಳಲ್ಲಿ ಮುನ್ನಡೆಸಿದ ನಾಯಕರುಗಳ ಪೈಕಿ, ವಿರಾಟ್ ಕೊಹ್ಲಿ ಗರಿಷ್ಠ ಗೆಲುವಿನ ಪರ್ಸಂಟೇಜ್ ಅನ್ನು ಹೊಂದಿದ್ದಾರೆ. 95 ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿದ್ದ ಕಿಂಗ್ ಕೊಹ್ಲಿ 65 ರಲ್ಲಿ ಗೆಲುವು 27ರಲ್ಲಿ ಸೋಲು ಹಾಗೂ 1 ಟೈ ಫಲಿತಾಂಶ ಕಂಡಿದ್ದರೆ, 2 ಪಂದ್ಯ ರದ್ದಾಗಿತ್ತು. ಒಟ್ಟಾರೆ ಗೆಲುವಿನ ಪರ್ಸಂಟೇಜ್ 70.43! ಭಾರತದ ವಿಶ್ವಕಪ್ ಗೆಲುವುಗಳ ನಾಯಕರಾದ ಎಂಎಸ್ ಧೋನಿ (59.52) ಹಾಗೂ (Mahendra Singh Dhoni ) ಕಪಿಲ್ ದೇವ್ (54.16) ಅವರಿಂತ (Kapil Dev ) ಕೊಹ್ಲಿ ಈ ವಿಚಾರದಲ್ಲಿ ಸಾಕಷ್ಟು ಮುಂದಿದ್ದಾರೆ. 

India Tour of South Africa: ಬಲಿಷ್ಠ ಭಾರತ ತಂಡ ಪ್ರಕಟ, ಏಕದಿನ ತಂಡಕ್ಕೂ ರೋಹಿತ್ ಕ್ಯಾಪ್ಟನ್‌..!
15 ದ್ವಿಪಕ್ಷೀಯ ಸರಣಿ ಗೆಲುವು

ಕೊಹ್ಲಿ ನೇತೃತ್ವದಲ್ಲಿ ಟೀಮ್ ಇಂಡಿಯಾ ಆಡಿದ್ದು ಒಟ್ಟು 19 ದ್ವಿಪಕ್ಷೀಯ ಸರಣಿ. ಇವುಗಳ ಪೈಕಿ 15ರಲ್ಲಿ ಗೆಲುವು ಸಾಧಿಸಿದ್ದಾರೆ. ದಕ್ಷಿಣ ಅಫ್ರಿಕಾ, ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನೆಲದ ಐತಿಹಾಸಿಕ ಸರಣಿ ಗೆಲುವುಗಳೂ ಇದರಲ್ಲಿ ಸೇರಿವೆ.

Virat Kohli Captaincy ತಲೆದಂಡ, ಬಿಸಿಸಿಐ ವಿರುದ್ದ ತಿರುಗಿಬಿದ್ದ ವಿರಾಟ್ ಫ್ಯಾನ್ಸ್‌..!
ನಾಯಕನಾಗಿ ಗರಿಷ್ಠ ರನ್ಸ್
ಏಕದಿನ ಕ್ರಿಕೆಟ್ ನಲ್ಲಿ ನಾಯಕನಾಗಿ ಗರಿಷ್ಠ ಸರಾಸರಿಯಲ್ಲಿ ರನ್ ಪೇರಿಸಿದ ದಾಖಲೆ ಕೊಹ್ಲಿಯದ್ದು. ಕೇವಲ 95 ಪಂದ್ಯಗಳಿಂದ ಕೊಹ್ಲಿ 72.65ರ ಸರಾಸರಿಯಲ್ಲಿ ಕೊಹ್ಲಿ 5449 ರನ್ ಬಾರಿಸಿದ್ದಾರೆ. ಅದಲ್ಲದೇ, ಏಕದಿನ ತಂಡದ ನಾಯಕನಾಗಿ ಗರಿಷ್ಠ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 21 ಶತಕದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 22 ಶತಕ ಬಾರಿಸಿರುವ ರಿಕಿ ಪಾಂಟಿಂಗ್ (Ricky Ponting) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಐಸಿಸಿ ಟೂರ್ನಿಗಳಲ್ಲಿ ನಿರಾಸೆ
ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಕೊಹ್ಲಿ ನೇತೃತ್ವದಲ್ಲಿ ಟೀಮ್ ಇಂಡಿಯಾ ಮೂರು ಐಸಿಸಿ ಟೂರ್ನಿಗಳಲ್ಲಿ ಆಡಿತ್ತು. 2017ರ ಚಾಂಪಿಯನ್ಸ್ ಟ್ರೋಫಿಯ (2017 Champions Trophy) ಫೈನಲ್ ನಲ್ಲಿ ನಿರಾಸೆ ಕಂಡಿದ್ದರೆ, 2019ರ ಏಕದಿನ ವಿಶ್ವಕಪ್‌  ಟೂರ್ನಿಯ (2019 ODI World Cup) ಸೆಮಿಫೈನಲ್ ನಲ್ಲಿ ಸೋಲು ಕಂಡಿತ್ತು. 2021ರ ಟಿ20 ವಿಶ್ವಕಪ್ ನಲ್ಲಿ (2021 T20 World Cup) ತಂಡ ಸೆಮಿಫೈನಲ್ ಹಂತಕ್ಕೇರಲು ವಿಫಲವಾಗಿತ್ತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!
ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!