ವಿರಾಟ್ ಕೊಹ್ಲಿ ಜೊತೆ ಹ್ಯಾಂಡ್‌ಶೇಕ್ ವಿವಾದಿಂದ ಪತ್ನಿ ಕಣ್ಣೀರು, ಮೊದಲ ಬಾರಿ ಮೌನ ಮುರಿದ ಟ್ರಾವಿಸ್ ಹೆಡ್

Published : Jul 24, 2026, 06:14 PM IST
Virat Kohli Travis Head Handshake row

ಸಾರಾಂಶ

ಐಪಿಎಲ್ ಟೂರ್ನಿಯಲ್ಲಿ ಟ್ರಾವಿಸ್ ಹೆಡ್ ಹಾಗೂ ವಿರಾಟ್ ಕೊಹ್ಲಿಯ ಹ್ಯಾಂಡ್‌ಶೇಕ್ ಭಾರಿ ವಿವಾದ ಸೃಷ್ಟಿಸಿತ್ತು. ಈ ಘಟನೆ ಕುರಿತು ಮೊದಲ ಬಾರಿಗೆ ಟ್ರಾವಿಸ್ ಹೆಡ್ ಮೌನ ಮುರಿದಿದ್ದಾರೆ. ಘಟನೆಯಿಂದ ಟ್ರಾವಿಸ್ ಪತ್ನಿಗೆ ಏನಾಯ್ತು?

ಸಿಡ್ನಿ (ಜು.24) ಐಪಿಎಲ್ 2026ರಲ್ಲಿ ಕೆಲ ಘಟನೆಗಳು ಭಾರಿ ಸದ್ದು ಮಾಡಿತ್ತು. ಈ ಪೈಕಿ ವಿರಾಟ್ ಕೊಹ್ಲಿ ಹಾಗೂ ಟ್ರಾವಿಸ್ ಹೆಡ್ ನಡುವಿನ ಹ್ಯಾಂಡ್‌ಶೇಕ್ ವಿವಾದ ಅತೀ ಹೆಚ್ಚು ಸದ್ದು ಮಾಡಿತ್ತು. ಹೈದರಾಬಾದ್‌ನಲ್ಲಿ ನಡೆದ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಶೇಕ್‌ಹ್ಯಾಂಡ್ ವಿವಾದವಾಗಿ ಹೊರಹೊಮ್ಮಿತ್ತು.

ಎದುರಾಳಿ ಹೈದರಾಬಾದ್ ತಂಡದ ಆಟದಾರರ ಜೊತೆ ಹ್ಯಾಂಡ್‌ಶೇಕ್ ಮಾಡುವ ವೇಳೆ ಟ್ರಾವಿಸ್ ಹೆಡ್‌ಗೆ ಹ್ಯಾಂಡ್‌ಶೇಕ್ ಮಾಡದೇ ಮುಂದೆ ಸಾಗಿದ್ದರು. ಇದು ಭಾರಿ ವಿವಾದವಾಗಿತ್ತು. ಈ ಘಟನೆ ಕುರಿತು ಇದೇ ಮೊದಲ ಬಾರಿಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಟ್ರಾವಿಸ್ ಹೆಡ್ ಮೌನ ಮುರಿದಿದ್ದಾರೆ.

ಹ್ಯಾಂಡ್‌ಶೇಕ್ ವಿವಾದ ಕುರಿತು ಟ್ರಾವಿಸ್ ಹೆಡ್ ಮಾತು

ವಿರಾಟ್ ಕೊಹ್ಲಿ ಜೊತೆಗಿನ ಹ್ಯಾಂಡ್‌ಶೇಕ್ ಘಟನೆ ಕ್ರಿಕೆಟ್‌ನಲ್ಲಿ ಸಾಮಾನ್ಯ. ಆದರೆ ನಡೆದು ಹೋಗಿದೆ. ಇನ್ನು ಸರಿ ಮಾಡಲು ಪ್ಯಾಚ್ಅಪ್ ಮಾಡಲು ಸಾಧ್ಯವಿಲ್ಲ. ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ನಡೆದ ಘಟನೆಯನ್ನು ತಿದ್ದಿಕೊಳ್ಳುವ, ಸರಿಪಡಿಸುವ ಅವಶ್ಯಕತೆಯೂ ಇಲ್ಲ ಎಂದು ಟ್ರಾವಿಸ್ ಹೆಡ್ ಹೇಳಿದ್ದಾರೆ. ಇದೇ ವೇಳೆ ಘಟನೆ ಬಳಿಕ ಪತ್ನಿಯ ನೋವನ್ನು ಹೇಳಿಕೊಂಡಿದ್ದಾರೆ.

ಪತ್ನಿ ಎದುರಿಸಿದ ನೋವು ಹೇಳಿಕೊಂಡ ಟ್ರಾವಿಸ್ ಹೆಡ್

ವಿರಾಟ್ ಕೊಹ್ಲಿ ಜೊತೆಗಿನ ಹ್ಯಾಂಡ್‌ಶೇಕ್ ಘಟನೆ ಕ್ರಿಕೆಟ್‌ನಲ್ಲಿ ನಡೆಯುತ್ತಿರುತ್ತದೆ. ಪಂದ್ಯದಲ್ಲಿ ಕೆಲವು ಘಟನೆಗಳು ನಡೆಯುತ್ತದೆ. ಆದರೆ ಈ ಘಟನೆ ಬಳಿಕ ಪತ್ನಿ ತೀವ್ರ ಸಮಸ್ಯೆ ಎದುರಿಸಿದ್ದಾರೆ. ಪತ್ನಿ ಸೋಶಿಯಲ್ ಮೀಡಿಯಾಗಳಲ್ಲಿ ಕೆಟ್ಟ ಕಮೆಂಟ್‌ಗಳು, ಬೈಗುಳ ಎದುರಿಸಬೇಕಾಯಿತು. ಪಂದ್ಯದ ನಡುವೆ ಆಟಗಾರರ ನಡುವಿನ ಸ್ಲೆಡ್ಜಿಂಗ್ ಹೊಸದೇನಲ್ಲ. ಆದರೆ ಇದರಿಂದ ಪತ್ನಿ, ಮಕ್ಕಳು ನೋವು ಅನುಭವಿಸುವುದು ನನಗೂ ತೀವ್ರ ನೋವುಂಟು ಮಾಡಿತ್ತು. ಈ ಘಟನೆಯಿಂದ ಹೊರಬರಲು ಹಲವು ದಿನಗಳೇ ಬೇಕಾಯಿತು. ಪ್ರತಿ ಪೋಸ್ಟ್‌ಗೂ ಒಂದಲ್ಲಾ ಒಂದು ಕಮೆಂಟ್ ಇದ್ದೇ ಇರುತ್ತಿತ್ತು ಎಂದು ಟ್ರಾವಿಸ್ ಹೆಡ್ ಹೇಳಿದ್ದಾರೆ.ಟ

ಹ್ಯಾಂಡ್‌ಶೇಕ್ ವಿವಾದಕ್ಕೆ ಕಾರಣವೇನು

2026ರ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ವಿರುದ್ದ ಆರ್‌ಸಿಬಿ ಚೇಸಿಂಗ್ ಮಾಡುತ್ತಿತ್ತು. ಈ ವೇಳೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಡುವೆ ವಾಕ್ಸಮರ ನಡೆದಿತ್ತು. ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಟ್ರಾವಿಸ್ ಹೆಡ್ ಅಣಕ ಕೊಹ್ಲಿಯನ್ನು ಗರಂ ಆಗಿಸಿತ್ತು. ವಿರಾಟ್ ಕೊಹ್ಲಿ ಕೂಡ ತಿರುಗೇಟು ನೀಡಿದ್ದರು. ಇದರ ನಡುವೆ ವಿರಾಟ್ ಕೊಹ್ಲಿ ವಿಕೆಟ್ ಪತನಗೊಂಡಾಗ ಈ ವಾಕ್ಸಮರ, ಸ್ಲೆಡ್ಜಿಂಗ್ ತೀವ್ರಗೊಂಡಿತ್ತು. ಪಂದ್ಯ ಮುಗಿದರು ಇವರಿಬ್ಬರ ಮುನಿಸು ಹಾಗೇ ಉಳಿದುಕೊಂಡಿತ್ತು. ಹೀಗಾಗಿ ವಿರಾಟ್ ಕೊಹ್ಲಿ ಶೇಕ್‌ಹ್ಯಾಂಡ್ ಮಾಡಲು ನಿರಾಕರಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಏಷ್ಯನ್ ಗೇಮ್ಸ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ; ಇಂಡೋ-ಪಾಕ್ ಹೈವೋಲ್ಟೇಜ್ ಮ್ಯಾಚ್ ಸೆಮಿ ಅಥವಾ ಫೈನಲ್‌ನಲ್ಲೇ ಫಿಕ್ಸ್!
ಕೇವಲ 20 ದಿನಗಳಲ್ಲಿ 2 ಅಪರೂಪದ ದಾಖಲೆ ಮುರಿದ ವೈಭವ್ ಸೂರ್ಯವಂಶಿ! ಭಾರತದ ಭವಿಷ್ಯದ ಬ್ರಹಾಸ್ತ್ರವಾಗ್ತಾರಾ 15 ವರ್ಷದ ಆಟಗಾರ