ಇಂದು ರೈಡ​ರ್ಸ್‌ ರಾಯಲ್ಸ್‌ ಹಣಾಹಣಿ : ಗೆಲುವಿನ ಲಯಕ್ಕೆ ಬರುತ್ತಾ ರಾಜಸ್ಥಾನ?

Published : Apr 18, 2022, 01:19 AM ISTUpdated : Apr 18, 2022, 01:21 AM IST
ಇಂದು ರೈಡ​ರ್ಸ್‌ ರಾಯಲ್ಸ್‌ ಹಣಾಹಣಿ : ಗೆಲುವಿನ ಲಯಕ್ಕೆ ಬರುತ್ತಾ ರಾಜಸ್ಥಾನ?

ಸಾರಾಂಶ

ರಾಜಸ್ಥಾನಕ್ಕೆ ಗೆಲುವಿನ ಲಯ ಕಂಡುಕೊಳ್ಳುವ ತವಕ ಹ್ಯಾಟ್ರಿಕ್‌ ಸೋಲು ತಪ್ಪಿಸಿಕೊಳ್ಳುತ್ತಾ ಕೋಲ್ಕತಾ ? ಇಂದು ರೈಡ​ರ್ಸ್‌ ರಾಯಲ್ಸ್‌ ಹಣಾಹಣಿ 

ಮುಂಬೈ: 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಸತತ 2 ಸೋಲುಗಳಿಂದ ಕಂಗೆಟ್ಟಿರುವ ಕಳೆದ ಬಾರಿ ರನ್ನರ್‌-ಅಪ್‌ ಕೋಲ್ಕತಾ ನೈಟ್‌ ರೈಡ​ರ್ಸ್‌ ಗೆಲುವಿನ ಹಳಿಗೆ ಮರಳಲು ಕಾತರಿಸುತ್ತಿದ್ದು, ಸೋಮವಾರ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಸೆಣಸಾಡಲಿದೆ. ರಾಯಲ್ಸ್‌ ಕೂಡಾ ಕಳೆದ ಪಂದ್ಯದಲ್ಲಿ ಸೋತಿದ್ದು, ಗೆಲುವಿಗಾಗಿ ಹಾತೊರೆಯುತ್ತಿದೆ.

ಕೆಕೆಆರ್‌ (KKR) ಈವರೆಗೆ ಆಡಿರುವ 6 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದ್ದು, ಮೂರರಲ್ಲಿ ಪರಾಭವಗೊಂಡಿದೆ. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈಗೆ (Chennai) ಸೋಲುಣಿಸಿದ ತಂಡ, ಆರ್‌ಸಿಬಿ ವಿರುದ್ಧ ಸೋತಿತ್ತು. ಬಳಿಕ ಮುಂಬೈ ಇಂಡಿಯನ್ಸ್‌ (Mumbai Indian) ಹಾಗೂ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ ಗೆಲುವು ಸಾಧಿಸಿದ ತಂಡ, ನಂತರ ಡೆಲ್ಲಿ (Delhi) ಹಾಗೂ ಹೈದರಾಬಾದ್‌ (Hyderabad) ವಿರುದ್ಧ ಸೋಲುಂಡಿದೆ. ನಾಯಕ ಶ್ರೇಯಸ್‌ ಅಯ್ಯರ್‌, ನಿತೀಶ್‌ ರಾಣಾ ಲಯ ಮುಂದುವರಿಸಲು ಎದುರು ನೋಡುತ್ತಿದ್ದು, ವೆಂಕಟೇಶ್‌ ಅಯ್ಯರ್‌ (Venkatesh Iyer), ಆ್ಯರೋನ್‌ ಫಿಂಚ್‌ (Aaron Finch) ಅಬ್ಬರಿಸಬೇಕಿದೆ. ಆ್ಯಂಡ್ರೆ ರಸೆಲ್‌ (Andre Russell) ಮಾತ್ರ ತಂಡದ ಪರ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಪ್ಯಾಟ್‌ ಕಮಿನ್ಸ್‌ ಮತ್ತೊಂದು ಸ್ಫೋಟಕ ಆಟದ ನಿರೀಕ್ಷೆಯಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಉಮೇಶ್‌ ಯಾದವ್‌ ಅಭೂತಪೂರ್ವ ಲಯದಲ್ಲಿದ್ದು, 6 ಪಂದ್ಯಗಳಲ್ಲಿ 10 ವಿಕೆಟ್‌ ಎಗರಿಸಿದ್ದಾರೆ. ಸುನಿಲ್‌ ನರೈನ್‌ (Sunil Narine) ಬೌಲಿಂಗ್‌ ಮೊನಚು ಕಳೆದುಕೊಂಡಿದ್ದು, ವರುಣ್‌ ಚಕ್ರವರ್ತಿ ವಿಕೆಟ್‌ ಪಡೆಯಲು ವಿಫಲರಾಗುತ್ತಿದ್ದಾರೆ. ಎಲ್ಲಾ ವಿಭಾಗದಲ್ಲೂ ಸುಧಾರಿತ ಪ್ರದರ್ಶನ ನೀಡಿದರೆ ಮಾತ್ರ ತಂಡಕ್ಕೆ ಗೆಲುವು ದಕ್ಕಲಿದೆ.

ಮತ್ತೊಂದೆಡೆ, ರಾಜಸ್ಥಾನ ಆಡಿರುವ 5 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿ, 2ರಲ್ಲಿ ಸೋತಿದೆ. ಬ್ಯಾಟಿಂಗ್‌ನಲ್ಲಿ ಜೋಸ್‌ ಬಟ್ಲರ್‌ ಅಬ್ಬರಿಸುತ್ತಿದ್ದರೆ, ಬೌಲಿಂಗ್‌ನಲ್ಲಿ ಯಜುವೇಂದ್ರ ಚಹಲ್‌ (Yuvuvendra Chahal) ತಂಡದ ಆಧಾರಸ್ತಂಭ. ಅವರು ಆಡಿರುವ 5 ಪಂದ್ಯಗಳಲ್ಲಿ 12 ವಿಕೆಟ್‌ ಪಡೆದಿದ್ದಾರೆ. ಶಿಮ್ರೋನ್‌ ಹೆಟ್ಮೇಯರ್‌ (Shimron Hettmayer) ಮಿಂಚುತ್ತಿದ್ದರೂ, ನಾಯಕ ಸಂಜು ಸ್ಯಾಮ್ಸನ್‌ (Sanju Samson), ದೇವದತ್ತ ಪಡಿಕ್ಕಲ್‌ (Devadatta Padikkal) ಬ್ಯಾಟ್‌ನಿಂದ ರನ್‌ ಸಿಡಿಯುತ್ತಿಲ್ಲ. ವಾನ್‌ ಡೆರ್‌ ಡುಸ್ಸೆನ್‌, ರಿಯಾನ್‌ ಪರಾಗ್‌ ಜವಾಬ್ದಾರಿ ಅರಿತು ಆಡಬೇಕಿದೆ. ಪ್ರಸಿದ್‌ ಕೃಷ್ಣ, ಆರ್‌.ಅಶ್ವಿನ್‌, ಜೇಮ್ಸ್‌ ನೀಶಮ್‌, ಕುಲ್ದೀಪ್‌ ಸೆನ್‌ ಕೆಕೆಆರ್‌ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಿದೆ.

ಸಂಭವನೀಯ ಆಟಗಾರರ ಪಟ್ಟಿ

ರಾಜಸ್ಥಾನ: ಬಟ್ಲರ್‌, ಪಡಿಕ್ಕಲ್‌, ಸ್ಯಾಮ್ಸನ್‌(ನಾಯಕ), ಡುಸ್ಸೆನ್‌, ಹೆಟ್ಮೇಯರ್‌, ಅಶ್ವಿನ್‌, ರಿಯಾನ್‌, ನೀಶಮ್‌, ಚಹಲ್‌, ಕುಲ್ದೀಪ್‌ ಸೆನ್‌, ಪ್ರಸಿದ್‌ ಕೃಷ್ಣ.

ಕೆಕೆಆರ್‌: ವೆಂಕಿ ಅಯ್ಯರ್‌, ಫಿಂಚ್‌, ಶ್ರೇಯಸ್‌(ನಾಯಕ), ನಿತೀಶ್‌, ರಸೆಲ್‌, ಜಾಕ್ಸನ್‌, ಸುನಿಲ್‌ ನರೈನ್‌, ಕಮಿನ್ಸ್‌, ಉಮೇಶ್‌, ಅಮಾನ್‌, ಚಕ್ರವರ್ತಿ

ಮುಖಾಮುಖಿ: 24

ರಾಜಸ್ಥಾನ: 11

ಕೆಕೆಆರ್‌: 13

ಸ್ಥಳ: ಮುಂಬೈ, ಬ್ರೆಬೋರ್ನ್‌ ಕ್ರೀಡಾಂಗಣ, ಪಂದ್ಯ: ಸಂಜೆ 7.30ಕ್ಕೆ, ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!