IPL 2022 ಗಾಯಕ್ವಾಡ್, ರಾಯುಡು ಹೋರಾಟ, ಗುಜರಾತ್‌ಗೆ 170 ರನ್ ಟಾರ್ಗೆಟ್!

Published : Apr 17, 2022, 09:17 PM ISTUpdated : Apr 17, 2022, 09:32 PM IST
IPL 2022 ಗಾಯಕ್ವಾಡ್, ರಾಯುಡು ಹೋರಾಟ, ಗುಜರಾತ್‌ಗೆ 170 ರನ್ ಟಾರ್ಗೆಟ್!

ಸಾರಾಂಶ

ರುತುರಾಜ್ ಗಾಯಕ್ವಾಡ್ ಆಕರ್ಷಕ ಅರ್ಧಶತಕ ಗುಜರಾತ್ ವಿರುದ್ಧ 169 ರನ್ ಸಿಡಿಸಿದ ಸಿಎಸ್‌ಕೆ ಪುಣೆಯಲ್ಲಿ ನಡೆಯುತ್ತಿರುವ ಪಂದ್ಯ  

ಪುಣೆ(ಏ.17): ಗುಜರಾತ್ ಟೈಟಾನ್ಸ್ ವಿರುದ್ಧ ರುತುರಾಜ್ ಗಾಯಕ್ವಾಡ್ ಅರ್ಧಶತಕ ಹಾಗೂ ಅಂಬಾಟಿ ರಾಯುಡು ಹೋರಾಟದಿಂದ ಚೆನ್ನೈ ಸೂಪರ್ ಕಿಂಗ್ಸ್  5 ವಿಕೆಟ್ ನಷ್ಟಕ್ಕೆ 169 ರನ್ ಸಿಡಿಸಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ರಾಬಿನ್ ಉತ್ತಪ್ಪ ಕೇವಲ 3 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ರುತುರಾಜ್ ಗಾಯಕ್ವಾಡ್ ಹೋರಾಟ ಮುಂದುವರಿಸಿದರು. ಆದರೆ ಮೊಯಿನ್ ಆಲಿ ಕೇವಲ 1 ರನ್ ಸಿಡಿಸಿ ಔಟಾದರು.

ಅಂಬಾಟಿ ರಾಯುಡು ಹಾಗೂ ರುತುರಾಜ್ ಗಾಯಕ್ವಾಡ್ ಜೊತೆಯಾಟ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನೆರವಾಯಿತು. ಅಬ್ಬರಿಸಿದ ಗಾಯಕ್ವಾಡ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. 

IPL 2022 ಪಂಜಾಬ್‌ ಮಣಿಸಿ 4ನೇ ಸ್ಥಾನಕ್ಕೇರಿದ ಸನ್‌ರೈಸರ್ಸ್ ಹೈದರಾಬಾದ್!

ಇತ್ತ ಅಂಬಾಟಿ ರಾಯುಡು 46 ರನ್ ಸಿಡಿಸಿ ಔಟಾದರು. ಶಿವಂ ದುಬೆ 19 ರನ್ ಸಿಡಿಸಿ ರನೌಟ್ ಆದರು.ಇತ್ತ ನಾಯಕ ರವೀಂದ್ರ ಜಡೇಜಾ ಅಜೇಯ 22 ರನ್ ಸಿಡಿಸಿದರು. ಈ ಮೂಲಕ ಚೆನ್ನೈ 5 ವಿಕೆಟ್ ನಷ್ಟಕ್ಕೆ 169 ರನ್ ಸಿಡಿಸಿತು.

ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಆಡಿರುವ 5 ಪಂದ್ಯಗಳಲ್ಲಿ 4 ಪಂದ್ಯ ಸೋತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಅಂಕಪಟ್ಟಿಯಲ್ಲಿ ಚೆನ್ನೈ 9ನೇ ಸ್ಥಾನದಲ್ಲಿದೆ. ಇನ್ನು ಗುಜರಾತ್ ಟೈಟಾನ್ಸ್ ಆಡಿದ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್​​, ಕ್ರಿಕೆಟ್ ದೇವರ ಕಾಲಿಗೆ ಬಿದ್ದಿದ್ಯಾಕೆ?

ಹಾರ್ದಿಕ್ ಪಾಂಡ್ಯಗೆ ಇಂಜುರಿ
ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾಗಿದ್ದಾರೆ. ಇಂಜುರಿ ಕಾರಣದಿಂದ ಟೀಂ ಇಂಡಿಯಾದಿಂದಲೂ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಇದೀಗ ಮತ್ತೆ ಇಂಜುರಿಗೆ ತುತ್ತಾಗಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಪಾಂಡ್ಯ ಅನುಪಸ್ಥಿತಿಯಲ್ಲಿ ಸ್ಪಿನ್ನರ್ ರಶೀದ್ ಖಾನ್ ತಂಡವವನ್ನು ಮುನ್ನಡೆಸುತ್ತಿದ್ದಾರೆ.

ರವೀಂದ್ರ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ ಗೆಲುವು ಸಿಗುತ್ತಿಲ್ಲ. ಉತ್ತಮ ರನ್ ಸಿಡಿಸಿದರೂ ಬೌಲಿಂಗ್ ದುಬಾರಿಯಾಗುತ್ತಿದೆ. 

ಚಾಂಪಿಯನ್‌ ಮುಂಬೈಗೆ ಸೋಲಿನ ಸಿಕ್ಸರ್‌
ದಾಖಲೆಯ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ 15ನೇ ಆವೃತ್ತಿಯಲ್ಲಿ ಸತತ 6ನೇ ಪಂದ್ಯದಲ್ಲೂ ಸೋಲುನಭವಿಸಿದ್ದು, ಐಪಿಎಲ್‌ ಆವೃತ್ತಿಯಲ್ಲಿ ಮೊದಲ 6 ಪಂದ್ಯಗಳಲ್ಲಿ ಸೋತ 3ನೇ ತಂಡ ಎಂಬ ಅನಗತ್ಯ ದಾಖಲೆ ಬರೆದಿದೆ. ಈ ಮೊದಲು 2013ರಲ್ಲಿ ಡೆಲ್ಲಿ, 2019ರಲ್ಲಿ ಆರ್‌ಸಿಬಿ ತಂಡಗಳು ಮೊದಲ 6 ಪಂದ್ಯಗಳಲ್ಲಿ ಸೋಲು ಕಂಡಿದ್ದವು. ಶನಿವಾರ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಬಳಗ 18 ರನ್‌ ಸೋಲನುಭವಿಸಿತು. ಇನ್ನಷ್ಟೇ ಗೆಲುವಿನ ಸಿಹಿ ಅನುಭವಿಸಬೇಕಿರುವ ಮುಂಬೈ ಪ್ಲೇ-ಆಫ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಇನ್ನೊಂದೆಡೆ ಲಖನೌ 6 ಪಂದ್ಯಗಳಲ್ಲಿ ನಾಲ್ಕನೇ ಗೆಲುವು ಸಾಧಿಸಿತು.

ರಾಹುಲ್‌ ಭರ್ಜರಿ ಶತಕ
ಆರಂಭದಲ್ಲೇ ಅಬ್ಬರಿಸಿದ ಲಖನೌ ಮೊದಲ ವಿಕೆಟ್‌ಗೆ 52 ರನ್‌ ಕಲೆ ಹಾಕಿ ಉತ್ತಮ ಆರಂಭ ಪಡೆಯಿತು. ಆದರೆ ಕ್ವಿಂಟನ್‌ ಡಿ ಕಾಕ್‌ 24 ರನ್‌ಗೆ ವಿಕೆಟ್‌ ಒಪ್ಪಿಸಿದರು. 2ನೇ ವಿಕೆಟ್‌ಗೆ ಮನೀಶ್‌ ಪಾಂಡೆ ಜೊತೆಯಾದ ರಾಹುಲ್‌ 72 ರನ್‌ ಜೊತೆಯಾಟವಾಡಿದರು. ಪಾಂಡೆ 29 ಎಸೆತಗಳಲ್ಲಿ 38 ರನ್‌ ಗಳಿಸಿ ನಿರ್ಗಮಿಸಿದರು. ಮಾರ್ಕಸ್‌ ಸ್ಟೋಯ್ನಿಸ್‌ 10, ದೀಪಕ್‌ ಹೂಡಾ 15 ರನ್‌ ಗಳಿಸಲಷ್ಟೇ ಶಕ್ತರಾದರು. ಆದರೆ ಕೊನೆವರೆಗೂ ಮುಂಬೈ ಬೌಲರ್‌ಗಳನ್ನು ಕಾಡಿದ ರಾಹುಲ್‌, ತಮ್ಮ 100ನೇ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಅವರು ಕೇವಲ 60 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್‌ ಒಳಗೊಂಡ 103 ರನ್‌ ಸಿಡಿಸಿ ಔಟಾಗದೆ ಉಳಿದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

T20 ಕ್ರಿಕೆಟ್‌ನಲ್ಲಿ ಅತಿವೇಗದ 5000 ರನ್! ರಸೆಲ್, ಟಿಮ್ ಡೇವಿಡ್‌ರನ್ನೇ ಹಿಂದಿಕ್ಕಿದ ಅಭಿಷೇಕ್ ಶರ್ಮಾ!
ಒಂದ್ವೇಳೆ ಬಾಂಗ್ಲಾದೇಶ ಟಿ20 ವಿಶ್ವಕಪ್ ಬಾಯ್ಕಾಟ್ ಮಾಡಿದ್ರೆ ಅನುಭವಿಸೋ ಕಷ್ಟ ಒಂದೆರಡಲ್ಲ! ಭಾರೀ ಬೆಲೆ ತೆರಬೇಕು