ಅಯ್ಯರ್ ತುಂಬಾ ಸಿಂಪಲ್, ನೆಲ ಒರೆಸಿ ತಾಯಿಗೆ ಸಹಾಯ ಮಾಡಿದ ಟೀಂ ಇಂಡಿಯಾ ಪ್ಲೇಯರ್

Published : Jun 26, 2025, 04:25 PM ISTUpdated : Jun 26, 2025, 04:30 PM IST
Shreyas Iyer

ಸಾರಾಂಶ

ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ ಶ್ರೇಯಸ್ ಅಯ್ಯರ್ ಆನ್ ಫೀಲ್ಡ್‌ನಲ್ಲಿ ಹೇಗಿರ್ತಾರೆ ಅನ್ನೋದು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿದೆ. ಆದರೆ ಮನೆಯಲ್ಲಿ ಶ್ರೇಯಸ್ ಅಯ್ಯರ್ ತುಂಬಾ ಸಿಂಪಲ್. ಶ್ರೇಯಸ್ ಅಯ್ಯರ್ ನೆಲ ಒರೆಸಿ ತಾಯಿಗೆ ಸಹಾಯ ಮಾಡುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ.

ಮುಂಬೈ (ಜೂ.26) ಟೀಂ ಇಂಡಿಯಾ ಕ್ರಿಕೆಟಿಗ, ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಮೈದಾನದಲ್ಲಿ ಹೆಚ್ಚು ಗಂಭೀರವಾಗಿ ಕಾಣುತ್ತಾರೆ. ಅಯ್ಯರ್ ಮಾತುಗಳು, ಸ್ಟೈಲ್, ಸ್ವಾಗ್ ಎಲ್ಲವೂ ತುಸು ಗಂಭೀರ. ಏರ್‌ಪೋರ್ಟ್ ಸೇರಿದಂತೆ ಸಾರ್ವಜನಿಕವಾಗಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳುವಾಗಲೂ ಮಾತುಗಳು ಖಡಕ್. ಆದರೆ ನಿಜಕ್ಕೂ ಶ್ರೇಯಸ್ ಅಯ್ಯರ್ ತುಂಬಾ ಮೃದ ಸ್ವಭಾವದವರು. ಇಷ್ಟೇ ಅಲ್ಲ ಮನೆಯಲ್ಲಿ ಅಯ್ಯರ್ ತುಂಬಾ ಸಿಂಪಲ್. ಮನೆಯಲ್ಲಿರುವಾಗ ಶ್ರೇಯಸ್ ಅಯ್ಯರ್ ತಾಯಿಗೆ ಸಹಾಯ ಮಾಡುತ್ತಾರೆ. ಮನೆಗೆಲಸದಲ್ಲಿ ಶ್ರೇಯಸ್ ಅಯ್ಯರ್ ಪ್ರತಿ ಬಾರಿ ತಾಯಿಗೆ ನೆರವು ನೀಡುತ್ತಾರೆ. ಹೀಗೆ ಬಿಡುವಿನ ವೇಳೆಯಲ್ಲಿ ಮನೆಯಲ್ಲಿರುವಾಗ ಶ್ರೇಯಸ್ ಅಯ್ಯರ್ ತಾಯಿಗೆ ಮನೆಯ ನೆಲ ಒರೆಸಿ ಸಹಾಯ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ.

ನೆಲೆ ಒರೆಸಿ ಕ್ಲೀನ್ ಮಾಡಿದ ಅಯ್ಯರ್

ಶ್ರೇಯಸ್ ಅಯ್ಯರ್‌ಗೆ ತಾಯಿ ಮೇಲೆ ಹೆಚ್ಚು ಪ್ರೀತಿ. ತಾಯಿ ಏನೇ ಸೂಚನೆ ನೀಡಿದರೂ ಅಯ್ಯಪ್ ಮರು ಮಾತನಾಡದೇ ಪಾಲಿಸುತ್ತಾರೆ. ಕ್ರಿಕೆಟ್ ಟೂರ್ನಿಗಳಿಲ್ಲದ ವೇಳೆಯಲ್ಲಿ ಶ್ರೇಯಸ್ ಅಯ್ಯರ್ ಮನೆಯಲ್ಲಿ ತಾಯಿ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ. ಮನೆಯ ಹಲವು ಕೆಲಸಗಳನ್ನು ಖುದ್ದಾಗಿ ಮಾಡುತ್ತಾ ತಾಯಿಗೆ ನೆರವಾಗುತ್ತಾರೆ. ಹೀಗೆ ತಾಯಿಗೆ ಮನೆ ನೆಲ ಒರೆಸಲು ನೆರವು ನೀಡಿದ ವಿಡಿಯೋ ಮತ್ತೆ ಸದ್ದು ಮಾಡುತ್ತಿದೆ. ಶ್ರೇಯಸ್ ಅಯ್ಯರ್ ಮಾಬ್ ಹಿಡಿದು ನೆಲ ಒರೆಸುತ್ತಿರುವ ದೃಶ್ಯ ಹಲವು ಬಾರಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದೆ.

ಮತ್ತೆ ಮುನ್ನಲೆಗೆ ಬಂದ ವಿಡಿಯೋ

ಇದು 2020ರ ವಿಡಿಯೋ, ಕೋವಿಡ್ ಸಮಯದಲ್ಲಿ ಶ್ರೇಯಸ್ ಅಯ್ಯರ್ ಸೇರಿದಂತೆ ಕ್ರಿಕೆಟಿಗರು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಈ ವೇಳೆ ಯಾವುದೇ ಕೆಲಸಗಾರಾಗಲಿ, ಇತರರ ಸಂಪರ್ಕವಾಗಲಿ ಇರಲಿಲ್ಲ. ಕೋವಿಡ್ ಕಾರಣದಿಂದ ಲಾಕ್‌ಡೌನ್, ಸೀಲ್ ಡೌನ್ ಸೇರಿದಂತೆ ಹಲವು ನಿರ್ಬಂಧಗಳಿಂದ ಮನೆ ಕೆಲಸ ಸೇರಿದಂತೆ ಹಲವು ಕೆಲಸಗಳನ್ನು ತಾವೇ ಮಾಡಬೇಕಿತ್ತು. ಈ ವೇಳೆ ಶ್ರೇಯಸ್ ಅಯ್ಯರ್ ಮನೆ ಒರೆಸೆ ತಾಯಿಗೆ ನರವಾಗಿದ್ದರು. ಈ ವೇಳೆಯ ವಿಡಿಯೋ ಇದೀಗ ಮತ್ತೆ ವೈರಲ್ ಆಗುತ್ತಿದೆ.

 

 

ಅಡುಗೆಯಲ್ಲೂ ತಾಯಿಗೆ ನೆರವಾಗಿದ್ದ ಶ್ರೇಯಸ್ ಅಯ್ಯರ್

ಕ್ಲೀನಿಂಗ್ ಮಾತ್ರವಲ್ಲ, ಅಡುಗೆ ಮಾಡುವಾಗಲು ಶ್ರೇಯಸ್ ಅಯ್ಯರ್ ತಾಯಿಗೆ ನೆರವಾದ ವಿಡಿಯೋಗಳು ವೈರಲ್ ಆಗಿದೆ. ತಾಯಿ ಅಡುಗೆ ಮಾಡುತ್ತಿರುವಾಗ ತಾಯಿಗೆ ಹಲವು ಬಾರಿ ಶ್ರೇಯಸ್ ಅಯ್ಯರ್ ಸಹಾಯ ಮಾಡಿದ್ದಾರೆ. ಶ್ರೇಯಸ್ ಅಯ್ಯರ್ ಮನೆಯಲ್ಲಿದ್ದರೆ ತಾಯಿಗೆ ಒಂದಲ್ಲಾ ಒಂದು ರೀತಿಯಲ್ಲಿ ನೆರವಾಗುತ್ತಾರೆ.

ಶ್ರೇಯಸ್ ಅಯ್ಯರ್ ಕರೆದೊಯ್ಯಲು ಏರ್‌ಪೋರ್ಟ್‌ಗೆ ತರಳಿದ್ದ ಅಯ್ಯರ್ ತಾಯಿ

ಪ್ರವಾಸ ಮುಗಿಸಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಶ್ರೇಯಸ್ ಅಯ್ಯರನ್ನು ಮನೆಗೆ ಕರೆದೊಯ್ಯಲು ಖುದ್ದು ಶ್ರೇಯಸ್ ಅಯ್ಯಕರ್ ತಾಯಿ ರೋಹಿನಿ ಅಯ್ಯರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಡಿಯೋ ಕೂಡ ಭಾರಿ ವೈರಲ್ ಆಗಿದೆ. ಶ್ರೇಯಸ್ ಅಯ್ಯರ್‌ಗಾಗಿ ಮೊದಲೇ ವಿಮಾನ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದ ನಿಂತಿದ್ದ ರೋಹನಿ ಅಯ್ಯರ್, ಶ್ರೇಯಸ್ ಕರೆದುಕೊಂಡು ಹೋಗಿದ್ದ ವಿಡಿಯೋ ಕೂಡ ಇದೇ ವೇಳೆ ವೈರಲ್ ಆಗಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ