Watch: ಲೀಡ್ಸ್‌ ಟೆಸ್ಟ್‌ನಲ್ಲಿ ಕನ್ನಡ, ತಮಿಳು ಸೇರಿದಂತೆ ಬಹುಭಾಷಾ ಕೌಶಲ ಪ್ರದರ್ಶನ ಮಾಡಿದ ಕೆಎಲ್‌ ರಾಹುಲ್‌!

Published : Jun 25, 2025, 07:19 PM IST
KL Rahul

ಸಾರಾಂಶ

ಕೆಎಲ್ ರಾಹುಲ್ ಕೇವಲ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ, ಭಾಷೆಯಲ್ಲೂ ತಾವು ಸಕಲ ಕಲಾ ವಲ್ಲಭ ಅನ್ನೋದನ್ನು ಲೀಡ್ಸ್‌ ಟೆಸ್ಟ್‌ನಲ್ಲಿ ತೋರಿಸಿದರು.ರಾಹುಲ್ ಅವರ ಶತಕವು ಭಾರತವು ಇಂಗ್ಲೆಂಡ್ ವಿರುದ್ಧ 371 ರನ್‌ಗಳ ಗುರಿಯನ್ನು ನೀಡಲು ಸಹಾಯ ಮಾಡಿತು. 

ನವದೆಹಲಿ (ಜೂ.25): ಇಂಗ್ಲೆಂಡ್‌ ವಿರುದ್ಧದ ಲೀಡ್ಸ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ ಕೆಎಲ್ ರಾಹುಲ್ ಈ ವೇಳೆ ತಮ್ಮ ಬಹುಭಾಷಾ ಕೌಶಲವನ್ನೂ ತೋರಿಸಿದರು. 2ನೇ ಇನ್ನಿಂಗ್ಸ್‌ನಲ್ಲಿ 137 ರನ್‌ ಬಾರಿಸಿದ ಕೆಎಲ್‌ ರಾಹುಲ್‌ ತಮ್ಮ ಇನಿಂಗ್ಸ್‌ನ ಹಾದಿಯಲ್ಲಿ ಸಾಯಿ ಸುದರ್ಶನ್, ರಿಷಭ್ ಪಂತ್ ಮತ್ತು ಕರುಣ್ ನಾಯರ್ ಅವರೊಂದಿಗೆ ಜೊತೆಯಾಟವಾಡಿದರು. ಇದರಲ್ಲಿ ಕರುಣ್‌ ನಾಯರ್‌ ಹಾಗೂ ಕೆಎಲ್‌ ರಾಹುಲ್‌ ಕರ್ನಾಟಕದವರಾಗಿದ್ದರೆ, ತಮಿಳುನಾಡಿನ ಸಾಯಿ ಸುದರ್ಶನ್‌ ಜೊತೆ ತಮಿಳು ಹಾಗೂ ದೆಹಲಿಯ ರಿಷಬ್‌ ಪಂತ್‌ ಜೊತೆ ಹಿಂದಿಯಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು.

ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ರಾಹುಲ್ ತಮಿಳು ಭಾಷೆಯಲ್ಲಿ ಸುದರ್ಶನ್ ಅವರನ್ನು ಮಾತನಾಡಿಸುತ್ತಿರುವುದು ಕೇಳಿ ಬಂದಿದೆ.ಭಾರತದ ಆರಂಭಿಕ ಆಟಗಾರ ತಮಿಳುನಾಡಿನ ಯುವಕನಿಗೆ ಟ್ರ್ಯಾಕ್‌ನಲ್ಲಿ ಉತ್ತಮ ಬೌನ್ಸ್ ಇದ್ದು, ಜಾಗರೂಕರಾಗಿ ಆಟವಾಡುವಂತೆ ಅವರು ಹೇಳಿದ್ದಾರೆ.

'ಮಚ್ಚಿ, ನಲ್ಲ ಬೌನ್ಸ್‌ ಇರಿಕ್ಕೆ..' (ಟ್ರ್ಯಾಕ್‌ನಲ್ಲಿ ತುಂಬಾ ಒಳ್ಳೆಯ ಬೌನ್ಸ್‌ ಇದೆ) ಎಂದು ರಾಹುಲ್‌ ಸುದರ್ಶನ್‌ಗೆ ಹೇಳಿರುವುದು ಸ್ಟಂಪ್‌ ಮೈಕ್‌ನಲ್ಲಿ ದಾಖಲಾಗಿದೆ.

ಪಂತ್‌ ಜೊತೆ 195 ರನ್‌ಗಳ ಜೊತೆಯಾಟವಾಡಿದ ಕೆಎಲ್‌ ರಾಹುಲ್‌, ತಮ್ಮ ಇಡೀ ಇನ್ನಿಂಗ್ಸ್‌ನ ಹಾದಿಯಲ್ಲಿ ಅವರು ಹಿಂದಿಯಲ್ಲಿಯೇ ಮಾತನಾಡಿದ್ದರು. ಎರಡನೇ ಸೆಷನ್‌ನಲ್ಲಿ ಭಾರತ ಮೇಲುಗೈ ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು ಭಾರತದ ಆರಂಭಿಕ ಆಟಗಾರ ತಮ್ಮ ಉಪನಾಯಕನೊಂದಿಗೆ ನಿರಂತರವಾಗಿ ಹಿಂದಿಯಲ್ಲಿ ಮಾತನಾಡುತ್ತಿದ್ದರು.

ಅವರ ಆಪ್ತ ಸ್ನೇಹಿತ ಕರುಣ್ ವಿಷಯಕ್ಕೆ ಬಂದಾಗ, ಇಬ್ಬರೂ ಕನ್ನಡದಲ್ಲಿ ಮಾತನಾಡುತ್ತಿರುವುದು ಕಂಡುಬಂದಿತು. ಅದಲ್ಲದೆ, ಬೌಲಿಂಗ್‌ ಮಾಡುವ ವೇಳೆಯಲ್ಲೂ ಕೆಎಲ್‌ ರಾಹುಲ್‌ ತಂಡದಲ್ಲಿದ್ದ ಮತ್ತೊಬ್ಬ ಕನ್ನಡಿಗ ಪ್ರಸಿದ್ಧ ಕೃಷ್ಣ ಅವರೊಂದಿಗೆ ಕನ್ನಡದಲ್ಲಿ ಮಾತನಾಡಿದ್ದು ಸ್ಪಷ್ಟವಾಗಿ ಸ್ಟಂಪ್‌ ಮೈಕ್‌ನಲ್ಲಿ ದಾಖಲಾಗಿದೆ. 'ಮಗಾ ಪ್ರಸಿದ್ಧ ಚೆನ್ನಾಗಿ ಹೋಗ್ತಾ ಇದೆ..ಹೀಗೆ ಇರಲಿ..' ಎಂದು ಹೇಳುವುದು ಕೇಳಿದೆ. ಇನ್ನೊಂದೆಡೆ ಪ್ರಸಿದ್ಧ್‌ ಕೂಡ ರಾಹುಲ್‌ ಜೊತೆ ಕನ್ನಡದಲ್ಲಿಯೇ ಮಾತನಾಡಿದ್ದು ದಾಖಲಾಗಿದೆ. ಪಂದ್ಯ ಎಲ್ಲಾ ಮುಗಿದ ಬಳಿಕ ರಾಹುಲ್‌, ನಿರೂಪಕರ ಜೊತೆ ಇಂಗ್ಲೀಷ್‌ನಲ್ಲಿ ಸುಲಲಿತವಾಗಿ ಮಾತನಾಡಿದರು.

ಇಂಪ್ರೆಸ್‌ ಆದ ದಿನೇಶ್‌ ಕಾರ್ತಿಕ್‌

ಸ್ಕೈ ಸ್ಪೋರ್ಟ್ಸ್‌ನಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ದಿನೇಶ್ ಕಾರ್ತಿಕ್, ತಮ್ಮ ತಂಡದ ಆಟಗಾರರೊಂದಿಗೆ ಮಾತನಾಡುವಾಗ ರಾಹುಲ್ ತೋರಿಸಿದ ಬಹುಮುಖ ಪ್ರತಿಭೆಯಿಂದ ಪ್ರಭಾವಿತರಾದರು. "ಅವರು ಸಾಯಿ ಸುದರ್ಶನ್ ಗೆ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದಾರೆ, ರಿಷಭ್ ಜೊತೆ ಹಿಂದಿಯಲ್ಲಿ ಮಾತನಾಡುತ್ತಿದ್ದಾರೆ ಮತ್ತು ಈಗ ಅವರು ಕರುಣ್ ನಾಯರ್ ಗೆ ಕನ್ನಡದಲ್ಲಿ ಮಾತನಾಡುತ್ತಿದ್ದಾರೆ. ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲದೆ ಭಾಷೆಗಳಲ್ಲೂ ಬಹುಮುಖ ಪ್ರತಿಭೆ" ಎಂದು ಕಾರ್ತಿಕ್ ಹೇಳಿದರು.

ಬ್ಯಾಟಿಂಗ್ ವಿಷಯಕ್ಕೆ ಬಂದರೆ, ರಾಹುಲ್ ಇತರರಿಗಿಂತ ಸ್ವಲ್ಪ ಭಿನ್ನರಾಗಿದ್ದರು. ಭಾರತದ ಆರಂಭಿಕ ಆಟಗಾರ ಶಾಂತ ಸ್ವಭಾವವನ್ನು ಪ್ರದರ್ಶಿಸಿದರು ಮತ್ತು 202 ಎಸೆತಗಳಲ್ಲಿ ಶತಕ ಗಳಿಸಿದರು. ಅವರು ಸುನಿಲ್ ಗವಾಸ್ಕರ್ ಮತ್ತು ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಿ ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಭಾರತೀಯ ಆರಂಭಿಕ ಆಟಗಾರ ಎನಿಸಿದರು. ರಾಹುಲ್ ಅವರ ಶತಕವು ಭಾರತವು ಎರಡನೇ ಇನ್ನಿಂಗ್ಸ್‌ನಲ್ಲಿ 365 ರನ್ ಗಳಿಸಲು ಸಹಾಯ ಮಾಡಿತು ಮತ್ತು ಇಂಗ್ಲೆಂಡ್‌ಗೆ 371 ರನ್‌ಗಳ ಗುರಿಯನ್ನು ನೀಡಿತು. ಆದರೆ, ಇಂಗ್ಲೆಂಡ್‌ 5 ವಿಕೆಟ್‌ ನಷ್ಟಕ್ಕೆ ಈ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ