ಹಾಸ್ಟೆಲ್‌ನ ಕಿಟಕಿ ಮುರಿದು ಮೂವರು ವಿದ್ಯಾರ್ಥಿನಿಯರು ಪರಾರಿಯಾಗಿದ್ದಾರೆ. ಹಾಸ್ಟೆಲ್‌ನಿಂದ ಹೋಗುವ ಮುನ್ನ ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ.
ಮಂಗಳೂರು, (ಸೆಪ್ಟೆಂಬರ್.21): ಮಂಗಳೂರಿನ ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಹಾಸ್ಟೆಲ್‌ನ ಕಿಟಕಿಯನ್ನು ಮುರಿದು ಮೂವರು ವಿದ್ಯಾರ್ಥಿನಿಯರು ಪರಾರಿಯಾಗಿದ್ದಾರೆ.
ಮುಂಜಾನೆ 3 ಗಂಟೆ ವೇಳೆಗೆ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಯಶಸ್ವಿನಿ, ದಕ್ಷತಾ, ಸಿಂಚನಾ ಪರಾರಿಯಾದ ವಿದ್ಯಾರ್ಥಿನಿಯರು.
ಚಿತ್ರದುರ್ಗ ಮುರುಘಾ ಮಠ ಹಾಸ್ಟೆಲ್‌ನ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ, ಪ್ರಕರಣ ದಾಖಲು
ಯಶಸ್ವಿನಿ, ದಕ್ಷತಾ ಬೆಂಗಳೂರು ನಿವಾಸಿ, ಸಿಂಚನಾ ಚಿತ್ರದುರ್ಗ ಮೂಲದ ವಿದ್ಯಾರ್ಥಿನಿಯಾಗಿದ್ದು, ಇವರು ಮಂಗಳೂರಿನ ಪ್ರತಿಷ್ಠಿತ ಖಾಸಗಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದರು.
ಇನ್ನು ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ಹೋಗುವ ಮುನ್ನ ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದ್ದು, ನಾವು ಹೋಗುತ್ತಿದ್ದೇವೆ, ಕ್ಷಮಿಸಿ ಅಂತಾ ನೋಟ್‌ನಲ್ಲಿ ಬರೆದಿದ್ದಾರೆ.
ಇನ್ನು ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.