ಗುಜರಾತ್​ ಟೈಟಾನ್ಸ್‌ ಫೈನಲ್​​​ಗೇರಿಸಿ ರಾಜಸ್ಥಾನ ರಾಯಲ್ಸ್‌ ಬಳಿ ಮಿಲ್ಲರ್ ಕ್ಷಮೆಯಾಚಿಸಿದ್ದೇಕೆ..?

By Naveen Kodase  |  First Published May 26, 2022, 4:08 PM IST

* 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಫೈನಲ್ ಪ್ರವೇಶಿಸಿದ ಗುಜರಾತ್ ಟೈಟಾನ್ಸ್

* ರಾಜಸ್ಥಾನ ರಾಯಲ್ಸ್ ಪಾಲಿಗೆ ವಿಲನ್ ಆಗಿ ಕಾಡಿದ ಡೇವಿಡ್ ಮಿಲ್ಲರ್

* ಗುಜರಾತ್ ಪಾಲಿಗೆ ಹೀರೋ ಆಗಿ ಪರಿಣಮಿಸಿದ ಕಿಲ್ಲರ್‌ ಮಿಲ್ಲರ್ 


ಮುಂಬೈ(ಮೇ.26): ಡೇವಿಡ್ ಮಿಲ್ಲರ್​. ಸದ್ಯ IPL​ನಲ್ಲಿ ಮಿಂಚಿನ ಸಂಚಲನವುಂಟು ಮಾಡುತ್ತಿರುವ ಹೆಸರು. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ, ಗುಜರಾತ್ ಟೈಟನ್ಸ್ ಫೈನಲ್ ಪ್ರವೇಶಿಸಿದೆ. ಇದಕ್ಕೆ ಕಾರಣ ದಕ್ಷಿಣ ಆಫ್ರಿಕಾ ಬ್ಯಾಟರ್ ಡೇವಿಡ್ ಮಿಲ್ಲರ್ (David Miller) ಸ್ಫೋಟಕ ಬ್ಯಾಟಿಂಗ್. ಜಸ್ಟ್ 38 ಬಾಲ್​ನಲ್ಲಿ 3 ಬೌಂಡ್ರಿ, 5 ಸಿಕ್ಸರ್ ಸಹಿತ ಅಜೇಯ 68 ರನ್ ಬಾರಿಸಿ, ಗುಜರಾತ್ ತಂಡವನ್ನ ಫೈನಲ್​ಗೆ ಕೊಂಡೊಯ್ದರು. ಕಿಲ್ಲರ್ ಮಿಲ್ಲರ್ ಬ್ಯಾಟಿಂಗ್​​​ಗೆ ರಾಜಸ್ಥಾನ ರಾಯಲ್ಸ್ ಧೂಳಿಪಟವಾಯ್ತು. ಆ ಹ್ಯಾಟ್ರಿಕ್ ಸಿಕ್ಸರ್​ಗಳಿಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಪಂದ್ಯ ಮುಗಿದರೂ ಸಿಕ್ಸರ್​ಗಳ ಮಾತು ಮುಗಿಯುತ್ತಿಲ್ಲ. ಹ್ಯಾಟ್ರಿಕ್​ ಸಿಕ್ಸರ್​ಗಳದ್ದೇ ಎಲ್ಲೆಲ್ಲೂ ಮಾತು.

ಅಂದು ಎಬಿಡಿ-ಫಾಫ್, ಇಂದು ಮಿಲ್ಲರ್ ಕಿಲ್ಲರ್​:

Latest Videos

undefined

ಐಪಿಎಲ್​ನ ಫಸ್ಟ್ ಕ್ವಾಲಿಫೈಯರ್ ಪಂದ್ಯಗಳಲ್ಲಿ ಸೌತ್ ಆಫ್ರಿಕನ್ ಪ್ಲೇಯರ್ಸ್ ಆರ್ಭಟಿಸಿದ್ದಾರೆ. 2016ರಲ್ಲಿ ಎಬಿ ಡಿವಿಲಿಯರ್ಸ್ (AB de Villiers)​​ 47 ಬಾಲ್​ನಲ್ಲಿ 79 ರನ್ ಬಾರಿಸಿ ಆರ್​ಸಿಬಿ ತಂಡವನ್ನ ಫೈನಲ್​​ಗೇರಿಸಿದ್ದರು. 2018ರಲ್ಲಿ ಫಾಫ್ ಡು ಪ್ಲೆಸಿಸ್ (Faf du Plessis)​ ಸ್ಫೋಟಕ ಬ್ಯಾಟಿಂಗ್ ಮಾಡಿ 42 ಎಸೆತದಲ್ಲಿ 67 ರನ್​ ಸಿಡಿಸಿ, ಸಿಎಸ್​ಕೆ ತಂಡವನ್ನ ಫೈನಲ್​ಗೆ ಕರೆದುಕೊಂಡು ಹೋಗಿದ್ದರು. ಈ ಸಲ ಡೇವಿಡ್ ಮಿಲ್ಲರ್, ಕಿಲ್ಲರ್ ಬ್ಯಾಟಿಂಗ್​ನಿಂದ ಗುಜರಾತ್ ಫೈನಲ್​ಗೇರಿದೆ. ಈ ಮೂವರು ಆಫ್ರಿಕನ್ ಪ್ಲೇಯರ್ಸ್, ಸ್ಫೋಟಕ ಬ್ಯಾಟಿಂಡ್ ಮಾಡಿ ತಮ್ಮ ತಂಡಗಳನ್ನ ಫೈನಲ್​ಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.

ಸಾರಿ ರಾಯಲ್ಸ್ ಫ್ಯಾಮಿಲಿ:

ಮೊನ್ನೆ ಫಸ್ಟ್ ಕ್ವಾಲಿಫೈಯರ್ ಪಂದ್ಯ ಮುಗಿದ ನಂತರ ಮಧ್ಯರಾತ್ರಿ 1.09ಕ್ಕೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಡೇವಿಡ್ ಮಿಲ್ಲರ್, ಸಾರಿ ರಾಯಲ್ಸ್ ಫ್ಯಾಮಿಲಿ ಎಂದು ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಮಿಲ್ಲರ್ ಕ್ಷಮೆ ಕೇಳಲು ಕಾರಣವೇನು ಗೊತ್ತಾ..? ರಾಜಸ್ಥಾನ್ ರಾಯಲ್ಸ್ ಪರ ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ಮಿಲ್ಲರ್​ ಆಡಿದ್ದರು. ತಾನು ಪ್ರತಿನಿಧಿಸಿದಂತಹ ತಂಡದ ವಿರುದ್ಧವೇ ಸ್ಫೋಟಕ ಬ್ಯಾಟಿಂಗ್ ನಡೆಸಿ ಫೈನಲ್ ಪ್ರವೇಶಿಸುವ ಮೊದಲ ಅವಕಾಶವನ್ನು ಕೈತಪ್ಪಿದ ಕಾರಣಕ್ಕೆ ಕ್ಷಮೆಯಾಚಿಸಿದ್ದಾರೆ. ಸದ್ಯ ತನ್ನ ಹಳೆ ಫ್ರಾಂಚೈಸಿಯ ಕ್ಷಮೆಯಾಚಿಸಿ ಡೇವಿಡ್ ಮಿಲ್ಲರ್ ಮಾಡಿರುವ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

IPL 2022 ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್, ರಾಜಸ್ಥಾನ ಮಣಿಸಿ ಫೈನಲ್ ಪ್ರವೇಶಿಸಿದ ಗುಜರಾತ್!

Sorry 🤷‍♂️

— David Miller (@DavidMillerSA12)

ಅನ್​​ಸೋಲ್ಡ್ ಆದವನಿಗೆ ಗುಜರಾತ್​-ರಾಜಸ್ಥಾನ ಫೈಟ್: 

ಐಪಿಎಲ್​ನಲ್ಲಿ ಡೇವಿಡ್ ಮಿಲ್ಲರ್ ಸಾಧನೆ ಹೇಳಿಕೊಳ್ಳುವಂತದ್ದೇನು ಇಲ್ಲ. ಹಾಗಾಗಿಯೇ ಈ ಸಲದ ಬಿಡ್​ನ ಮೊದಲ ದಿನ ಡೇವಿಡ್ ಮಿಲ್ಲರ್ ಅನ್ ಸೋಲ್ಡ್ ಆಗಿದ್ದರು. ಆದರೆ 2ನೇ ದಿನ ಡೇವಿಡ್ ಬೇಕು ಅಂತ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಫ್ರಾಂಚೈಸಿ ಒತ್ತಾಯಿಸಿದ್ದರಿಂದ ಮತ್ತೆ ಬಿಡ್​ಗೆ ಇಡಲಾಗಿತ್ತು. ಕೊನೆಗೆ ಮೂರು ಕೋಟಿಗೆ ಗುಜರಾತ್ ಟೈಟಾನ್ಸ್ ಪಾಲಾದ್ರು. ರಾಜಸ್ಥಾನಕ್ಕೆ ವಿಲನ್ ಆಗಿ ಗುಜರಾತ್ ಪಾಲಿಗೆ ಹೀರೋ ಆದ್ರು ಮಿಲ್ಲರ್​. 15 ಪಂದ್ಯಗಳಿಂದ 449 ರನ್ ಬಾರಿಸಿರೋ ಡೇವಿಡ್​ಗೆ ಮೂರು ಕೋಟಿ ಕೊಟ್ಟಿದ್ದಕ್ಕೂ ಸಾರ್ಥಕವಾಯ್ತು.

click me!