ಇದು ಧೋನಿಯ ಕೊನೆಯ IPL 2021 ಟೂರ್ನಿ? ಕುತೂಹಲಕ್ಕೆಉತ್ತರ ನೀಡಿದ CSK!

By Suvarna News  |  First Published Apr 8, 2021, 3:24 PM IST

IPL 2021 ಟೂರ್ನಿ ಶುಕ್ರವಾರ ಶುಭಾರಂಭಗೊಳ್ಳಲಿದೆ. ಟೂರ್ನಿ ಆರಂಭಕ್ಕೂ ಮುನ್ನವೇ ಇದೀಗ ಕಳೆದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ಕಳೆದ ಕೆಲ ವರ್ಷಗಳಿಂದ ಎದುರಿಸುತ್ತಿರುವ ಪ್ರಶ್ನೆ ಮತ್ತೆ ಬಂದಿದೆ. ಆದರೆ ಈ ಬಾರಿ ಸಿಎಸ್‌ಕೆ ಸಿಇಒ ಇದು ಧೋನಿಯ ಕೊನೆಯ ಐಪಿಎಲ್ ಟೂರ್ನಿಯೇ ? ಅನ್ನೋ ಪ್ರಶ್ನೆಗೆ ಉತ್ತರ ನೀಡಿದ್ದಾರೆ.


ಚೆನ್ನೈ(ಏ.08):  ಕೊರೋನಾ ಆತಂಗಳ ನಡುವೆ 2021ರ ಐಪಿಎಲ್ ಟೂರ್ನಿ ನಾಳೆ(ಏ.09) ಆರಂಭಗೊಳ್ಳುತ್ತಿದೆ. ಉದ್ಘಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗುತ್ತಿದೆ. ಈ ಟೂರ್ನಿ ಆರಂಭಕ್ಕೂ ಮುನ್ನವೇ ಇದೀಗ ಚೆನ್ನೈ ಸೂಪರ್‌ಕಿಂಗ್ಸ್ ನಾಯಕ ಎಂ.ಎಸ್.ಧೋನಿಗೆ ಇದು ಕೊನೆಯ ಐಪಿಎಲ್ ಟೂರ್ನಿಯೇ? ಅನ್ನೋ ಪ್ರಶ್ನೆ ಮತ್ತೆ ಎದುರಾಗಿದೆ.

IPL 2021 ಟೂರ್ನಿಗೂ ಮುನ್ನ ಆರ್‌ಸಿಬಿ ಬಗ್ಗೆ ನೀವು ತಿಳಿದಿರಲೇಬೇಕಾದ ಇಂಟ್ರೆಸ್ಟಿಂಗ್ ಅಂಕಿ-ಅಂಶಗಳಿವು..!.

Tap to resize

Latest Videos

undefined

ಈ ಬಾರಿ ಈ ಪ್ರಶ್ನೆಗೆ ಚೆನ್ನೈ ಸೂಪರ್‌ಕಿಂಗ್ಸ್ ಸಿಇಓ ಕಾಶಿ ವಿಶ್ವನಾಥನ್ ಖಡಕ್ ಉತ್ತರ ನೀಡಿದ್ದಾರೆ. ಇದು ಧೋನಿಯ ಕೊನೆಯ ಐಪಿಎಲ್ ಟೂರ್ನಿ ಅಲ್ಲ. ಸದ್ಯ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಮತ್ತೊಬ್ಬ ನಾಯಕನ ಕುರಿತು ಆಲೋಚನೆ ಮಾಡಿಲ್ಲ ಎಂದಿದ್ದಾರೆ.

ಕ್ರಿಕೆಟಿಗರಿಗೆ ಕೊರೋನಾ ಲಸಿಕೆ; ಕೇಂದ್ರ ಆರೋಗ್ಯ ಇಲಾಖೆ ಜೊತೆ ಬಿಸಿಸಿಐ ಮಾತುಕತೆ!.

ಈ ಮೂಲಕ ಧೋನಿ ಐಪಿಎಲ್ ಟೂರ್ನಿ ವಿದಾಯದ ಕುರಿತ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಆರಂಭದಲ್ಲೇ ಸಿಎಸ್‌ಕೆ ತಂಡ ಧೋನಿಯೇ ಮುಂದಿನ ಟೂರ್ನಿಯಲ್ಲೂ ನಾಯಕ ಅನ್ನೋದನ್ನು ಪರೋಕ್ಷವಾಗಿದೆ. ಇದರೊಂದಿಗೆ ಹಲವು ಗಾಸಿಪ್‌ಗಳಿಗೆ ತೆರೆಬಿದ್ದಿದೆ.

ಇದೇ ವೇಳೆ ಸುರೇಶ್ ರೈನಾ ತಂಡ ಸೇರಿಕೊಂಡಿರುವುದು ತಂಡದ ಮಧ್ಯ ಕ್ರಮಾಂಕವನ್ನು ಮತ್ತಷ್ಟು ಬಲಪಡಿಸಿದೆ. ಐಪಿಎಲ್ ಟೂರ್ನಿಯಲ್ಲಿ ರೈನಾ ಈಗಾಗಲೇ ಸಾಬೀತುಪಡಿಸಿದ್ದಾರೆ. ರೈನಾ ಅನುಭವ ಜೊತೆಗೆ ಕಠಿಣ ಅಭ್ಯಾಸ ಮಾಡಿ ಈ ಬಾರಿಯ ಟೂರ್ನಿಗೆ ಸಜ್ಜಾಗಿದ್ದಾರೆ. ಹೀಗಾಗಿ ಚೆನ್ನೈ ತಂಡ 2021ರ ಐಪಿಎಲ್ ಟೂರ್ನಿಯಲ್ಲಿ ದಿಟ್ಟ ಪ್ರದರ್ಶನ ನೀಡಲಿದೆ ಎಂದು ಕಾಶಿ ವಿಶ್ವನಾಥ್ ವಿಶ್ವಾಸವ್ಯಕ್ತಪಡಿಸಿದ್ದಾರೆ.

click me!