
ಕೋಲ್ಕತಾ(ಏ.07): ನಿರಂತರವಾಗಿ ಬಯೋ ಬಬಲ್‌ನೊಳಗೆ ಇದ್ದುಕೊಂಡು, ಕ್ರಿಕೆಟ್ ಆಡುವುದು ಬಹಳ ಕಷ್ಟ. ಆದರೆ ಭಾರತೀಯ ಕ್ರಿಕೆಟಿಗರಿಗೆ ತಾಳ್ಮೆ ಜಾಸ್ತಿ ಇದೆ.
ಮಾನಸಿಕ ಆರೋಗ್ಯದ ವಿಚಾರದಲ್ಲಿ ಆಸ್ಪ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟಿಗರಿಗೆ ಹೋಲಿಸಿದರೆ ಭಾರತೀಯರು ಹೆಚ್ಚು ಸದೃಢರಾಗಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಕೋವಿಡ್‌ನಿಂದಾಗಿ ಆಟಗಾರರ ಜೀವನ ಕೇವಲ ಹೋಟೆಲ್ ಹಾಗೂ ಕ್ರೀಡಾಂಗಣಗಳಿಗಷ್ಟೇ ಸೀಮಿತವಾಗಿದೆ. ಯಾರನ್ನೂ ಭೇಟಿಯಾಗುವಂತಿಲ್ಲ.
ಎಲ್ಲೂ ಹೋಗುವಂತಿಲ್ಲ ಎನ್ನುವ ನಿಯಮ ಮಾನಸಿಕವಾಗಿ ಕುಗ್ಗಿಸಲಿದೆ ಎಂದು ಅಭಿಪ್ರಾಯಿಸಿರುವ ಗಂಗೂಲಿ, ಭಾರತೀಯ ಆಟಗಾರರ ಪರಿಶ್ರಮವನ್ನು ಶ್ಲಾಘಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.